ಮಕ್ಕಳ ಟಿಫಿನ್ ಬಾಕ್ಸ್ ನಲ್ಲಿತ್ತು ಬಾಂಬ್!!

ಭಾರತ ಹಾಗೂ ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಡೋನ್ ಮುಖಾಂತರವಾಗಿ ಇಟ್ಟಿದ್ದ 3 ಸ್ಫೋಟಕಗಳು ಮಕ್ಕಳ ಟಿಫಿನ್ ಬಾಕ್ಸ್ ಗಳಲ್ಲಿ ಪತ್ತೆಯಾದ ಮಾಹಿತಿ ಲಭ್ಯವಾಗಿದೆ.

ಜಮ್ಮು ಎಡಿಜಿಪಿ ಮುಕೇಶ್ ಸಿಂಗ್ ತಿಳಿಸಿದ ಮಾಹಿತಿಯಂತೆ ಅಖನೂರ್ ಸೆಕ್ಟರ್‌ನ ಕನಚಕ್‌ ಕಂಟೊವಾಲ-ದಯಾರನ್ ಪ್ರದೇಶದಲ್ಲಿ ಟೈಮರ್ ಸೆಟ್ ಮಾಡಿದ್ದ ಸ್ಫೋಟಕಗಳು ಮಕ್ಕಳ ಟಿಫಿನ್ ಬಾಕ್ಸ್ ಗಳಲ್ಲಿ ಇಂದು ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.

ನಿನ್ನೆ ರಾತ್ರಿ ಜಮ್ಮು ಜಿಲ್ಲೆಯ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಸದ್ದು ಕೇಳಿಸಿತ್ತು. ಡೋನ್ ಇರಬಹುದೆಂದು ಅವಮಾನಿಸಿದ್ದ ಗಡಿ ಭದ್ರತಾ ಪಡೆ ಯೋಧರು ತಕ್ಷಣವೇ ಗುಂಡಿನ ದಾಳಿ ನಡೆಸಿದ್ದರು. ಸ್ಫೋಟಕಗಳಿದ್ದ ಪಾಕ್ ಡೋನ್ ಧರೆಗುರುಳಿಸಿದ ಜಮ್ಮು ಪೊಲೀಸರು ಕೂಡಲೇ ಆ ಪ್ರದೇಶವನ್ನು ಸುತ್ತುವರಿದು ಡೋನ್ ನಿರೋಧಕ ಕ್ರಮಗಳನ್ನು ಕೈಗೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ. ಅದೇ ದಿನ ರಾತ್ರಿ 11 ಗಂಟೆಗೆ ಮತ್ತೆ ಡೋನ್ ಹಾರಾಟ ಗಮನಿಸಿದ್ದ ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದರು ಎಂದು ಎಡಿಜಿಪಿ ಮಾಹಿತಿ ನೀಡಿದ್ದಾರೆ.

Leave A Reply

Your email address will not be published.