ಚಿಪ್ಸ್ ಗಿಂತ “ಗಾಳಿ” ತುಂಬಿಸಿಯೇ ದುಡ್ಡು ಮಾಡ್ತಿದ್ದ ಲೇಸ್ ಕಂಪನಿಗೆ ಭಾರೀ ದಂಡ ವಿಧಿಸಿದ ಕಾನೂನು ಮಾಪನಶಾಸ್ತ್ರ ಕಚೇರಿ!!!

ಜಂಕ್‌ಫುಡ್ ಪ್ರಿಯರಾದ ಎಲ್ಲರಿಗೂ ಲೇಸ್ ತುಂಬಾ ಇಷ್ಟವಾಗುತ್ತೆ. ಅದರಲ್ಲೂ ಮಕ್ಕಳಿಗಂತೂ ತುಂಬಾ ಇಷ್ಟ.
ಲೇಸ್ ನ ಯಾವುದೇ ವೆರೈಟಿ ಬಂದರೂ ಯಾರೂ ರುಚಿ ನೋಡದೇ ಇರಲ್ಲ. ಏಕೆಂದರೆ ಅದರ ಟೇಸ್ಟ್ ಹಾಗಿರುತ್ತೆ.ಆದರೆ ನೀವು ಗಮನಿಸಿರಬಹುದು ಈ ಲೇಸ್ ಪ್ಯಾಕೆಟ್ ನಲ್ಲಿ ಆಲೂಗಡ್ಡೆ ಚಿಪ್ಸ್ ಗಿಂತ ಹೆಚ್ಚು ಗಾಳಿಯೇ ತುಂಬಿರುತ್ತದೆ. ಅದನ್ನು ಲೇಸ್ ತಿನ್ನುವವರೆಲ್ಲರೂ ಎರಡು ಮಾತಿಲ್ಲದೇ ಒಪ್ಪಿಕೊಳ್ಳುತ್ತಾರೆ.

ಇದೇ ಕಾರಣಕ್ಕೆ ಈಗ ಲೇಸ್‌ನ ಮಾತೃಸಂಸ್ಥೆಯಾದ ಪೆಪ್ಸಿಕೋ ಸಂಸ್ಥೆಗೆ ಕೇರಳದ ತ್ರಿಶೂರ್‌ನ ಕಾನೂನು ಮಾಪನಶಾಸ್ತ್ರ ಕಚೇರಿ 85,000 ರೂ ದಂಡ ವಿಧಿಸಿದೆ. ಅದೂ ಕೂಡಾ ಗಾಳಿಯೇ ಅತ್ಯಧಿಕವಾಗಿದೆ ಎಂಬ ಕಾರಣಕ್ಕೆ. ಪ್ಯಾಕೇಟ್ ತುಂಬಾ ಗಾಳಿ ತುಂಬಿಸುತ್ತಿದ್ದ ಸಂಸ್ಥೆ ಅದರೊಳಗಿರುವ ಚಿಪ್ಸ್ ನ ಪ್ರಮಾಣದಲ್ಲಿ ಕಡಿಮೆ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿತ್ತು.

ತ್ರಿಶೂರ್ ಲೀಗಲ್ ಮಾಪನಶಾಸ್ತ್ರ ಕಚೇರಿ ಪಿಡಿ ಜಯಶಂಕರ್ ಅವರು ಲೇಸ್‌’ನ ಮಾತೃಸಂಸ್ಥೆ ಪೆಪ್ಸಿಕೋ ಗೆ 85,000 ರೂಪಾಯಿ ದಂಡ ವಿಧಿಸಿದ್ದಾರೆ. ತ್ರಿಶೂರ್ ಮೂಲದ ನಿವಾಸಿಯಾಗಿರುವ ಸಾಮಾಜಿಕ ನ್ಯಾಯ ಸಂರಕ್ಷಣಾ ಕೇಂದ್ರದ ಅಧ್ಯಕ್ಷರೂ ಆಗಿರುವ ವ್ಯಕ್ತಿಯೊಬ್ಬರು ಖರೀದಿಸಿದ ಲೇಸ್ ಪ್ಯಾಕೆಟ್‌ನಲ್ಲಿರುವ ಚಿಪ್ಸ್ ನ ಪ್ರಮಾಣದಲ್ಲಿ ನಿಗದಿಗಿಂತ ಕಡಿಮೆ ಇರುವ ಬಗ್ಗೆ ಲೀಗಲ್ ಮಾಪನಶಾಸ್ತ್ರ ಕಚೇರಿಗೆ ದೂರು ನೀಡಿದ್ದರು.

ಈ ದೂರಿನ ಆಧಾರದ ಮೇಲೆ ಪೆಪ್ಪಿಕೋ ಇಂಡಿಯಾ ಹೋಲ್ಡಿಂಗ್ಸ್ ಪ್ರೈವೇಟ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಲೇಸ್ ಪ್ಯಾಕೆಟ್‌ನಲ್ಲಿ 115 ಗ್ರಾಂ ಎಂದು ತೋರಿಸಲಾಗಿತ್ತು. ಆದರೆ ಅದರೊಳಗಿನ ಚಿಪ್ಸ್ ಗಳ ಪ್ರಮಾಣವು ಅದಕ್ಕಿಂತ ಕಡಿಮೆಯಿತ್ತು, ಪ್ಯಾಕೆಟ್‌ಗಳ ತಪಾಸಣೆ ನಡೆಸಿದಾಗ ಒಂದರಲ್ಲಿ ಕೇವಲ 50.930 ಗ್ರಾಂ, ಎರಡನೆಯದರಲ್ಲಿ 72 ಗ್ರಾಂ ಮತ್ತು ಮೂರನೇ ಪ್ಯಾಕೆಟ್‌ನಲ್ಲಿ 86.380 ಗ್ರಾಮ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕಂಜಾಣಿಯಲ್ಲಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಪ್ರಮಾಣದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಇಲಾಖೆ ಕ್ರಮ ಕೈಗೊಂಡಿದೆ.

ಲೇಸ್ ಪ್ಯಾಕೆಟ್‌ನಲ್ಲಿ ಎಲ್ಲರಿಗೂ ಗೊತ್ತಿರುವ ಹಾಗೇ,ಚಿಪ್ಸ್ ಗಿಂತ ಹೆಚ್ಚು ಗಾಳಿ ಇತ್ತು ಎಂಬ ಆರೋಪ ಪ್ರಪಂಚದಾದ್ಯಂತ ಇದೆ. ಆದರೆ ಯಾರೂ ಅದರ ತೂಕವನ್ನು ಪರಿಶೀಲಿಸಲು ಅಥವಾ ಅದರ ಪ್ರಮಾಣದ ಬಗ್ಗೆ ದೂರು ನೀಡಲು ಹೋಗುವುದಿಲ್ಲ. ಇದನ್ನೇ ಕಂಪನಿಯು ದುರುಪಯೋಗಪಡಿಸಿಕೊಂಡಿದೆ. ಸರಿಯಾದ ತಪಾಸಣೆಯ ಕೊರತೆಯಿಂದಾಗಿ ಇದು ಭಾರತದಲ್ಲಿ ವ್ಯಾಪಕವಾಗಿ ನಡೆಯುತ್ತದೆ. ಲೇಸ್‌ನಂತಹ ಹಲವಾರು ಇತರ ಪ್ರಮುಖ ಬ್ರಾಂಡ್‌ಗಳು ಭಾರತದಲ್ಲಿ ಉತ್ಪಾದನೆಯಾಗುತ್ತಿದ್ದು ಕಡಿಮೆ ಗುಣಮಟ್ಟದ್ದಾಗಿದೆ.

Leave A Reply

Your email address will not be published.