ಉಪ್ಪಿನಂಗಡಿ : ಮನೆಯಿಂದ ಕೆಲಸಕ್ಕೆಂದು ತೆರಳಿದ ಯುವಕ ನಾಪತ್ತೆ

ಉಪ್ಪಿನಂಗಡಿ: ಮನೆಯಿ೦ದ ಕೆಲಸಕ್ಕೆಂದು ತೆರಳಿದ ಯುವಕನೋರ್ವ ನಾಪತ್ತೆಯಾದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗೋಳಿತೊಟ್ಟು ಗ್ರಾಮದ ಅಂಬೂಡೇಲು ನಿವಾಸಿ ವರ್ಗೀಸ್ (29) ನಾಪತ್ತೆಯಾದ ವ್ಯಕ್ತಿ. ಈತ ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕನಾಗಿದ್ದು, ಕಳೆದ ಮೇ 31ರಂದು ಮನೆಯಿಂದ ಹೊರಟಾತ ಈ ತನಕ ಮನೆಗೆ ಬಾರದೇ ನಾಪತ್ತೆಯಾಗಿದ್ದಾನೆ ಎಂದು ಈತನ ಸಹೋದರ ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ.

ಈತನ ಪತ್ತೆಯಾದಲ್ಲಿ ಉಪ್ಪಿನ೦ಗಡಿ ಠಾಣೆ (08251 251055)ಯನ್ನು ಸಂಪರ್ಕಿಸುವಂತೆ ಪೊಲೀಸ್‌ ಪ್ರಕಟನೆ ತಿಳಿಸಿದೆ.

Leave A Reply

Your email address will not be published.