ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ಹರಾಜು | ಈ ಎಣ್ಣೆ ಬಾಟಲ್ ನ ಬೆಲೆ ಕೇಳಿದ್ರೆ ಬೆಚ್ಚಿಬೀಳೋದು ಗ್ಯಾರಂಟಿ !!

ಪ್ರಪಂಚದಲ್ಲಿ ಮದ್ಯಪ್ರಿಯರ ಸಂಖ್ಯೆ ಹೆಚ್ಚು ಎಂದು ಹೇಳಿದರೆ ತಪ್ಪಿಲ್ಲ. ವಿದೇಶದಲ್ಲಂತೂ ಸುರಪಾನವಿಲ್ಲದೆ ಯಾವುದೇ ಸಮಾರಂಭಗಳು ನಡೆಯುವುದಿಲ್ಲ. ಖುಷಿಗೂ ದುಖಕ್ಕೂ ಸಮಾನವಾಗಿ ಸಾಥ್ ಕೊಡುವ ಮದ್ಯ ಸರ್ವ ದೇಶಗಳಲ್ಲಿಯು ತನ್ನದೇ ಬೇಡಿಕೆ ಹುಟ್ಟಿಸಿಕೊಂಡಿದೆ. ಮದ್ಯದಲ್ಲಿ ಎಷ್ಟು ವೆರೈಟಿ ಇದೆಯೋ ಅಂತೆಯೇ ಅವುಗಳ ಬಾಟಲ್ ಗಳ ವಿನ್ಯಾಸದಲ್ಲಿ ಕೂಡ ಹಾಗೆಯೇ. ಒಂದೊಂದು ಬ್ರಾಂಡ್ ಒಂದೊಂದು ರೀತಿಯಲ್ಲಿ, ಆಕರ್ಷಿಸುವ ಡಿಸೈನ್ ನಲ್ಲಿ ಬಾಟಲ್ ಗಳು ಇರುತ್ತವೆ. ಈಗ ಮದ್ಯದ ಮಹಾನ್ ಮಲ್ಲರನ್ನು ಗೆಲ್ಲಲು ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲ್ ದೊಡ್ಡ ಕಂಬದ ಥರ, ಪಿಲ್ಲರ್ ನ ರೀತಿಯಲ್ಲಿ ಎದ್ದು ನಿಂತಿದೆ. ಈಗ ಅದರ ಹರಾಜು ಪ್ರಕ್ರಿಯೆ ನಡೆದಿದೆ.

ಇದೀಗ ಹರಾಜು-ಸಂಘಟನಾ ಕಂಪನಿ ಲಿಯಾನ್ ಮತ್ತು ಟರ್ನ್‌ಬುಲ್ ಪ್ರಕಾರ 5 ಅಡಿ 11 ಇಂಚು ಉದ್ದ ಮತ್ತು 311 ಲೀಟರ್‌ ಸ್ಕಾಚ್ ವಿಸ್ಕಿ ಇದ್ದ ಬಾಟಲಿ ಈಗ ಹರಾಜಾಗಿದೆ. ವಿಶ್ವದ ಅತಿದೊಡ್ಡ ಬಾಟಲಿ ಸುಮಾರು 1.4 ಮಿಲಿಯನ್ ಡಾಲರ್ (10,85,88,900 ರೂ.) ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಇದರ ಬಿಡ್ ಅನ್ನು ಆನ್‌ಲೈನ್‌ನಲ್ಲಿ ಇರಿಸಲಾಗಿತ್ತು. ಅಂತಿಮವಾಗಿ ಅಂತರಾಷ್ಟ್ರೀಯ ಅಪರಿಚಿತನಾದ ಮದ್ಯದ ರಸಿಕ ಸಂಗ್ರಾಹಕ ಅದನ್ನು ಖರೀದಿಸಿದ್ದಾರೆ.

ಈ ವಿಸ್ಕಿಗೆ ‘ದಿ ಇಂಟ್ರೆಪಿಡ್’ ಎಂದು ಹೆಸರಿಡಲಾಗಿದೆ ಎಂದು ಹರಾಜು ಕಂಪನಿ ತಿಳಿಸಿದೆ. ಇದು ಸುಮಾರು 32 ವರ್ಷಗಳಷ್ಟು ಹಳೆಯದಾದ ಸಿಂಗಲ್ ಮಾಲ್ಟ್ ನಿಂದ ತಯಾರಾದ ಮದ್ಯ ಇದಾಗಿದೆ. ಇದನ್ನು 1989 ರಲ್ಲಿ ಸ್ಪೈಸೈಡ್‌ನ ಪ್ರತಿಷ್ಠಿತ ದಿ ಮಕಲನ್‌ನಲ್ಲಿ ಭಟ್ಟಿ ಇಳಿಸಲಾಯಿತು. ಸೆಪ್ಟೆಂಬರ್ 2021 ರಲ್ಲಿ ವಿಸ್ಕಿಯನ್ನು ಭರ್ತಿ ಮಾಡಿದಾಗ ಗಿನ್ನೆಸ್ ವಿಶ್ವ ದಾಖಲೆಯನ್ನು ಪ್ರವೇಶಿಸಿತು. ಈ ಬಾಟಲಿಯಲ್ಲಿ ಬರೋಬ್ಬರಿ 444 ವಿಸ್ಕಿ ಬಾಟಲಿಗಳಿಗೆ ಸಮನಾದ ಆಲ್ಕೋಹಾಲ್ ಇದೆ ಎಂದು ಹೇಳಲಾಗುತ್ತಿದೆ.

ಹರಾಜು ಕಂಪನಿ ಲಿಯಾನ್ ಮತ್ತು ಟರ್ನ್‌ಬುಲ್ ಈ ವಿಸ್ಕಿ ಸೇಬಿನಷ್ಟು ಸಿಹಿಯಾಗಿದೆ ಎಂದು ಹೇಳಿದೆ. ಪ್ರಾಜೆಕ್ಟ್ ಸಂಸ್ಥಾಪಕ ಡೇನಿಯಲ್ ಮಾಂಕ್ ನನಗೆ ಮತ್ತು ಇಡೀ ತಂಡಕ್ಕೆ, ‘ಇಂಟ್ರೆಪಿಡ್’ ಯಾವಾಗಲೂ ಹಣಕ್ಕಿಂತ ಹೆಚ್ಚು ಎಂದಿದ್ದಾರೆ.

Leave A Reply

Your email address will not be published.