ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ:

ಹೊಸಪೇಟೆ : ಹೊಸಪೇಟೆಯ ಬ್ರಹ್ಮಕುಮಾರಿ ಆಶ್ರಮದಲ್ಲಿ ಅಮೃತ ಮಹೋತ್ಸವದಿಂದ ಸ್ವರ್ಣಿಮಾ ಭಾರತದ ಕಡೆಗೆ ಅಭಿಯಾನದ ಅಡಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು 75 ಸಸಿಗಳನ್ನು ನೆಡುವ ಹಾಗೂ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಲುಷಿತ ಮನಸ್ಸಿನಿಂದ ವಾತಾವರಣವು ಕಲುಷಿತಗೊಳ್ಳುತ್ತದೆ ಆದ್ದರಿಂದ ಮನಸ್ಸನ್ನು ಶುದ್ಧಗೊಳಿಸಿ ವಾತಾವರಣವನ್ನು ಪರಿಶುದ್ಧ ಗೊಳಿಸೋಣ ಪರಿಸರದ ಸಂರಕ್ಷಣೆ ನಮ್ಮ ಆರೋಗ್ಯದ ರಕ್ಷಣೆಯಾಗಿದೆ ಎಂದು ಬ್ರಹ್ಮಕುಮಾರಿ ಮಾನಸ ಅಕ್ಕನವರು ತಿಳಿಸಿದರು.
ಅರಣ್ಯ ಅಧಿಕಾರಿ ಶಿವಕುಮಾರ್ ಅವರು ಪ್ರತಿಯೊಬ್ಬರದ್ದು ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ಇದೆ, ಕೇವಲ ಅರಣ್ಯ ಇಲಾಖೆ ಅವರಷ್ಟೇ ಅಲ್ಲ ಎಂದರು.
ಅತಿಥಿ ಹರಿಪ್ರಸಾದ್ ENT ಸ್ಪೆಷಲಿಸ್ಟ್ ಸರ್ಕಾರಿ ಆಸ್ಪತ್ರೆ, ಇವರು ಮಾತನಾಡಿ – ಗಿಡ ಮರಗಳನ್ನು ಬೆಳೆಸುವುದರಿಂದ ನಮಗೆ ಆಮ್ಲಜನಕ ಸಿಗುತ್ತದೆ, ಇದು ಕೋವಿಡ್ ನ ಸಮಯದಲ್ಲಿ ಎಲ್ಲರಿಗೂ ಅನುಭವ ಸತ್ಯವಾದದ್ದು ಎಂದು ತಿಳಿಸಿದರು.

Leave A Reply