ವಿದ್ಯಾರ್ಥಿಗಳೇ ಬಹುಮುಖ್ಯ ಮಾಹಿತಿ ಗಮನಿಸಿ:
ಈ ಶೈಕ್ಷಣಿಕ ವರ್ಷದಿಂದಲೇ “ತೆರೆದ ಪುಸ್ತಕ ಪರೀಕ್ಷೆ” | 8,9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಪರೀಕ್ಷೆ

ಹಿಂದಿನಿಂದಲೂ ರಾಜ್ಯದಲ್ಲಿ ತೆರೆದ ಪುಸ್ತಕ ಪರೀಕ್ಷೆ ಚರ್ಚೆಯಲ್ಲಿರುವ ಸುದ್ದಿ. ಆದರೆ ಶಿಕ್ಷಣ ಇಲಾಖೆ ಈ ಬಾರಿ ಅಂದರೆ ಪ್ರಸಕ್ತ ವರ್ಷದಿಂದ ತೆರೆದ ಪುಸ್ತಕ ಪರೀಕ್ಷೆಯನ್ನು ಜಾರಿಗೆ ತರಲು ಮುಂದಾಗಿದೆ. ಯಾವುದೇ ಮುಖ್ಯ ಪರೀಕ್ಷೆಯಲ್ಲಿ ಈ ಕ್ರಮವನ್ನು ಅನುಸರಿಸದೆ, ಕೇವಲ ಶೈಕ್ಷಣಿಕ ಚಟುವಟಿಕೆಯ ಒಂದು ಭಾಗವಾಗಿ ಮಾತ್ರ ನಡೆಸಲು ತಿರ್ಮಾನಿಸಲಾಗಿದೆ ಎನ್ನಲಾಗಿದೆ.

ಫಲಿತಾಂಶ ಸುಧಾರಣ ಅಂಶವಾಗಿ ಪರಿಗಣಿಸಿ, ಶಿಕ್ಷಣ ಇಲಾಖೆ ಜಾರಿಗೆ ತರಲು ಮುಂದಾಗಿದೆ ಎನ್ನಲಾಗಿದೆ. 8,9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಪರೀಕ್ಷೆ, ಕೇಂದ್ರೀಕೃತ ಮೌಲ್ಯಮಾಪನ ವ್ಯವಸ್ಥೆ, ಮುಂತಾದವುಗಳನ್ನು ಈ ಬಾರಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ ಎನ್ನಲಾಗಿದೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಷಯವಾರು 25 ಅಂಕಗಳಿಗೆ ಪ್ರಶ್ನೆ ಪತ್ರಿಕೆ ತಯಾರಿಸಿ ಸಮಯ ನಿಗದಿ ಮಾಡಿ ತೆರೆದ ಪುಸ್ತಕ ಪರೀಕ್ಷೆ ನಡೆಸುವಂತೆ ತಿಳಿಸಲಾಗಿದೆ ಎನ್ನಲಾಗಿದೆ. ವಿದ್ಯಾರ್ಥಿಗಳು ಈ ಮೂಲಕ ಪಠ್ಯಪುಸ್ತಕವನ್ನು ಓದುವ ಅನಿವಾರ್ಯವನ್ನು ಸೃಷ್ಟಿಸಿ ಉತ್ತಮ ಫಲಿತಾಂಶ ಸುಧಾರಣೆ ಮಾಡುವಂತೆ ತಿಳಿಸಲಾಗಿದೆ ಎನ್ನಲಾಗಿದೆ. ಇಷ್ಟು ಮಾತ್ರವಲ್ಲದೇ ವಿದ್ಯಾರ್ಥಿಗಳಿಗೆ ತರಗತಿಗಳಲ್ಲಿ ದಿಢೀರ್ ಕಿರು ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ತರಗತಿ ಅವಧಿಯಲ್ಲೇ ಕಿರು ಪರೀಕ್ಷೆಯನ್ನು ನಡೆಸಬೇಕು. ಪರೀಕ್ಷೆ ಮುಗಿದ ಬಳಿಕ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳಿಂದಲೇ ಮೌಲ್ಯ ಮಾಪನ ಮಾಡಿಸಬೇಕು ಎಂಬ ನಿರ್ಧಾರ ಕೂಡ ತೆಗೆದುಕೊಳ್ಳಲಾಗಿದೆ. ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಮೌಲ್ಯಮಾಪನದ ಬಗ್ಗೆ ತಿಳುವಳಿಕೆ ನೀಡಿದಂತಾಗುತ್ತದೆ.

ಯುಎಸ್ ನಲ್ಲಿ ಈ ಪುಸ್ತಕ ತೆರೆದು ನೋಡಿ ಬರೆಯುವ ಪರೀಕ್ಷೆಗಳು ಜಾರಿಯಲ್ಲಿದೆ. ಭಾರತದಲ್ಲಿ ದೆಹಲಿ ವಿಶ್ವವಿದ್ಯಾಲಯ, ಸಾವಿತ್ರಿಬಾಯಿ ಪುಲೆ ಪುಣೆ ವಿಶ್ವವಿದ್ಯಾಲಯ, ರಾಯಪುರದ ಕಳಿಂಗ ಪಂಜಾಬ್‌ನ ಚಂಡೀಗಡ್ ವಿಶ್ವವಿದ್ಯಾಲಯ ಮುಂತಾದವುಗಳು ಈ ರೀತಿಯ ಪುಸ್ತಕ ತೆರದು ನೋಡಿ ಬರೆಯುವ ಪರೀಕ್ಷಾ ವ್ಯವಸ್ಥೆಯನ್ನು ಹೊಂದಿವೆ. ಈಗ ರಾಜ್ಯದಲ್ಲಿ ಪ್ರಯೋಗಿಕವಾಗಿ ಈ ಪರೀಕ್ಷೆಯನ್ನು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಿಂದ ನಡೆಸಲು
ನಿರ್ಧರಿಸಲಾಗಿದೆ ಎನ್ನಲಾಗಿದೆ.

ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವಂತೆ ಪ್ರತಿ ತಾಲೂಕು ಹಂತದಲ್ಲಿ ಅಣಕು ಪರೀಕ್ಷೆ ನಡೆಸಿ ಅದನ್ನು ಕೇಂದ್ರೀಕೃತ ಮೌಲ್ಯಮಾಪನ ಮಾಡಿಸುವಂತೆ ತಿಳಿಸಲಾಗಿದೆ. ತಾಲೂಕುವಾರು ಕೇಂದ್ರ ಸ್ಥಾನದಲ್ಲಿ ಒಂದು ಶಾಲೆಯನ್ನು ಮೌಲ್ಯಮಾಪನ ಕೇಂದ್ರವಾಗಿ ಗುರುತಿಸಿ ಪರೀಕ್ಷೆ ನಡೆಸುವುದು ಅಯಾ ದಿನದ ಉತ್ತರ ಪತ್ರಿಕೆಗಳನ್ನು ಮರು ದಿನ ಸಂಬಂಧಿಸಿದ ವಿಷಯ ಬೋಧಕರು ಬೇರೊಂದು ಶಾಲೆಯ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವ ಮೂಲಕ ಫಲಿತಾಂಶ ಸುಧಾರಿಸುವ ಪ್ರಾಯೋಗಿಕ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

ತೆರೆದ ಪುಸ್ತಕ ಪರೀಕ್ಷೆ ಎಂದರೇನು? : ವಿದ್ಯಾರ್ಥಿಗಳು ಪಠ್ಯಪುಸ್ತಕವನ್ನು ನೋಡಿ ಪರೀಕ್ಷೆಗೆ ಉತ್ತರ ಬರೆಯುವ ಕ್ರಮವಿದು. ಪರೀಕ್ಷೆಗೆ ಮೊದಲು ಸರಿಯಾಗಿ ಓದಿದ್ದರೆ ಮಾತ್ರ ಉತ್ತರಿಸಲು ಸಾಧ್ಯ. ಇದರಲ್ಲಿ ಪ್ರಶ್ನೆಗಳು ನೇರವಾಗಿರುವುದೂ ಕಡಿಮೆ.

ತೆರೆದ ಪುಸ್ತಕ ಪರೀಕ್ಷಾ ಕ್ರಮ ಸಹಿತ ಹಲವು ನೂತನ ಆವಿಷ್ಕಾರ ಕ್ರಮಗಳನ್ನು ಪರಿಗಣಿಸಲು ಸಲಹೆ ನೀಡ ಲಾಗಿದೆ. ಈ ಕ್ರಮ ಅನುಸರಿಸುವುದರಿಂದ ವಿದ್ಯಾರ್ಥಿಗಳು ಪಠ್ಯಪುಸ್ತಕ ಓದುವಂತೆ ಮಾಡುವುದು ಉದ್ದೇಶ.

Leave a Reply

error: Content is protected !!
Scroll to Top
%d bloggers like this: