ಬೆಳ್ತಂಗಡಿ: ಶಿಶಿಲ ದೇವಸ್ಥಾನದ ಸುತ್ತಮುತ್ತಲು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿವೆ ನೀರು ನಾಯಿಗಳು !! | ದೇವ ಮತ್ಸ್ಯಗಳಿಗೆ ತೊಂದರೆ – ಗ್ರಾಮದ ಭಕ್ತಾದಿಗಳಲ್ಲಿ ಹೆಚ್ಚಿದ ಆತಂಕ

0 6

ಇತಿಹಾಸ ಪ್ರಸಿದ್ಧ ಶಿಶಿಲೇಶ್ವರ ದೇವಸ್ಥಾನದ ಪರಿಸರದಲ್ಲಿ ನೀರು ನಾಯಿಗಳು ಆಗಿಂದಾಗ್ಗೆ ಪ್ರತ್ಯಕ್ಷವಾಗುತ್ತಿದ್ದು, ಇವುಗಳ ಹಾವಳಿಯಿಂದ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಯಭೀತರಾಗಿದ್ದಾರೆ.

ಇಂತಹ ನೀರು ನಾಯಿಗಳು ಇದೀಗ ಶಿಶಿಲ ಪ್ರದೇಶದ ಕಪಿಲಾ ನದಿಯಲ್ಲಿ ಹಿಂಡು ಹಿಂಡಾಗಿ ಬರುತ್ತಿದೆ. ದೇವರ ಮೀನೆಂದೇ ಪ್ರಖ್ಯಾತವಾದ ಮತ್ಸ್ಯಗಳಿಗೂ ತೊಂದರೆ ಕೊಡುತ್ತಿದ್ದು, ಗ್ರಾಮದ ಭಕ್ತಾದಿಗಳ ನಿದ್ದೆಗೆಡಿಸಿದೆ.

ಮುಂಜಾನೆ ಮತ್ತು ಸಂಜೆ ಹೊತ್ತಿನಲ್ಲಿ ದೇವಾಲಯದ ಪರಿಸರದಲ್ಲೂ ಓಡಾಡುತ್ತಿರುವುದು ಗ್ರಾಮಸ್ಥರ ಆತಂಕ ಹೆಚ್ಚಿಸಿದೆ. ಈ ಕುರಿತು ಅರಣ್ಯ ಇಲಾಖೆ ಸಿಬ್ಬಂದಿಗೂ ದೂರು ನೀಡಲಾಗಿದ್ದು, ಕೂಡಲೇ ಕ್ರಮ ಜರಗಿಸಿ ದೇವರ ಮೀನಿಗೆ ರಕ್ಷಣೆ ನೀಡುವಂತೆ ಗ್ರಾಮದ ಭಕ್ತಾಧಿಗಳು ಒತ್ತಾಯಿಸಿದ್ದಾರೆ.

ನೀರುನಾಯಿಗಳು ಹೇಗಿರುತ್ತವೆ??

ನೀರು ನಾಯಿಗಳನ್ನು ಕಡಲ ಕರಡಿ ಅಥವಾ ಅಟರ್ ಎಂದೂ ಕರೆಯುತ್ತಾರೆ.‌ ನದಿ, ಹಳ್ಳದ ಪಕ್ಕ ಬಂಡೆ ಪೊಟರೆಯಲ್ಲಿ ವಾಸಿಸುವ ಇವುಗಳು‌ ನೀಳವಾದ ದೇಹ, ಚಪ್ಪಟೆ ತಲೆ, ಬಲವಾದ ಬಾಲ ಹುಟ್ಟುಗಳಂತಿರುವ ಪಾದ ಸೂಕ್ಷ್ಮಸ್ಪರ್ಶ, ಮೀಸೆ ಕೂದಲು ಹೊಂದಿರುತ್ತವೆ. ಮೀನು, ಕಪ್ಪೆ, ಮುಂತಾದವುಗಳು ಇದರ ಆಹಾರವಾಗಿವೆ. ಆದರೆ ಇವುಗಳು ಸಣ್ಣ ಮಕ್ಕಳಿಗೆ ಅಪಾಯ ಸೃಷ್ಟಿಸಬಲ್ಲದು. ಆದ್ದರಿಂದ ಈ ಬಗ್ಗೆ ಜಾಗ್ರತೆ ವಹಿಸುವುದು ಮುಖ್ಯ.

Leave A Reply