ಸಮಗ್ರ £Ãರಾವರಿ ಯೋಜನೆಗಾಗಿ ಪಾದಯಾತ್ರೆ
ಹೊಸಪೇಟೆ:

ವಿಜಯನಗರ ಜಿಲ್ಲೆಯ ಉತ್ತರ ತಾಲೂಕುಗಳು ಸಮಗ್ರ ಅಭಿವೃದ್ಧಿಯಾಗಬೇಕು. ಜಿಲ್ಲೆಯ ರೈತರ ಹೊಲಗಳಿಗೆ £Ãರಾವರಿ ಮಾಡಬೇಕು. ಜೊತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ £ರ್ಮಾಣ ಮಾಡಬೇಕು ಎಂದು ಯುವ ಮುಖಂಡ ಕಿಚಿಡಿ ಕೊಟ್ರೇಶ್ ಹೇಳಿದರು.

ವಿಜಯನಗರ ಜಿಲ್ಲೆಯ ಕೊಟ್ಟೂರಿನ ದೂಪದಹಳ್ಳಿ, ಹಾಳ್ಯಾ ಗ್ರಾಮದಲ್ಲಿ ವಿಜಯನಗರ ಜಿಲ್ಲಾ ಸಮಗ್ರ £Ãರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯನ್ನುದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ಹರಪನಹಳ್ಳಿಯಿಂದ ಮೇ ೨೧ರಂದು ಆರಂಭಗೊAಡಿರುವ ಈ ಪಾದಯಾತ್ರೆ ಜಿಲ್ಲೆಯ ಆರು ತಾಲೂಕುಗಳಲ್ಲಿ ಸಂಚರಿಸುತ್ತಿದೆ. ಹೊಸಪೇಟೆಗೆ ಮೇ ೨೮ರಂದು ತಲುಪಲಿದೆ. ೧೬೦ ಕಿಮೀಯ ಪಾದಯಾತ್ರೆಯಲ್ಲಿ ರೈತರು, ಮಠಾಧೀಶರು ಭಾಗವಹಿಸುತ್ತಿದ್ದಾರೆ ಎಂದರು.
ರೈತ ಮುಖಂಡ ಕಾಳಿದಾಸ ಮಾತನಾಡಿ,

ತುಂಗಭದ್ರಾ ಜಲಾಶಯದಿಂದ ಜಿಲ್ಲೆಯ ಆರು ತಾಲೂಕುಗಳಿಗೆ ಸಮಗ್ರ £Ãರಾವರಿ ಒದಗಿಸಬೇಕು. ಜಿಲ್ಲೆ ಇಬ್ಭಾಗಗೊಂಡರೂ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿಲ್ಲ. ಇದುವರೆಗೆ £Ãಲನಕ್ಷೆ ರೂಪುಗೊಂಡಿಲ್ಲ. ಆಳುವ ಸರ್ಕಾರಗಳು ರೈತರ ಸಮಸ್ಯೆಗೆ ಸ್ಪಂದಿಸಬೇಕು. ತುಂಗಭದ್ರಾ ಜಲಾಶಯಕ್ಕೆ ಕಳೆದ ವರ್ಷ ೩೪೮ ಟಿಎಂಸಿ £Ãರು ಹರಿದು ಬಂದಿದೆ. ಇದರಲ್ಲಿ ನಾವು ಉಪಯೋಗ ಮಾಡಿಕೊಂಡಿರುವುದು ಬರೀ ೯೯ ಟಿಎಂಸಿ £Ãರು. ಹಾಗಾಗಿ ವಿಜಯನಗರ ಜಿಲ್ಲೆಯಲ್ಲಿ ಸಮಗ್ರ £Ãರಾವರಿ ಮಾಡಬೇಕು. ಜತೆಗೆ ಮಣ್ಣಿನ ಫಲವತ್ತತೆ ಕಾಪಾಡಬೇಕು. ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಬೇಕು. ಹಳ್ಳಿ, ಪಟ್ಟಣ, ತಾಂಡಾ, ಕೇರಿ, ಕ್ಯಾಂಪ್, ಕಾಲೋ£ಗಳಿಗೆ ಕುಡಿಯುವ £Ãರು ಒದಗಿಸಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಬಸಪ್ಪ, ಮಲ್ಲಣ್ಣ, ಸೂರಿ ಬಂಗಾರು, ಮಲ್ಲಿಕಾರ್ಜುನ, ಶಂಕ್ರಪ್ಪ ಮತ್ತಿತರರಿದ್ದರು.

Leave A Reply

Your email address will not be published.