ಸ್ಮಶಾನದಲ್ಲಿ ಮಣ್ಣು ಮಾಡಲಾದ ನವಜಾತ ಶಿಶು ಒಂದು ಗಂಟೆಯ ಬಳಿಕ ಜೀವಂತ!! ಅಚ್ಚರಿಯ ಘಟನೆಗೆ ಕಾರಣವೇನು!??

ಮೃತಪಟ್ಟಿದೆ ಎಂದು ವೈದ್ಯರು ದೃಢಪಡಿಸಿದ್ದ ನವಜಾತ ಶಿಶುವೊಂದು ಸಮಾಧಿ ಮಾಡಿದ ಒಂದು ಗಂಟೆಯ ಬಳಿಕ ಜೀವಂತವಾಗಿ ಪತ್ತೆಯಾದ ಅಚ್ಚರಿಯ ಘಟನೆಯೊಂದು ಕಾಶ್ಮೀರದ ಬನ್ನಿಹಾಲ್ ಎಂಬಲ್ಲಿ ನಡೆದಿದ್ದು, ಘಟನೆಯ ಬಳಿಕ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇಬ್ಬರು ಸಿಬ್ಬಂದಿಗಳ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಜನಿಸಿದ್ದ ಅರೋಗ್ಯವಂತ ಹೆಣ್ಣು ಮಗು ಕೆಲ ಹೊತ್ತಿನ ಬಳಿಕ ಮೃತಪಟ್ಟಿದೆ ಎಂದು ವೈದ್ಯರು ದೃಢಪಡಿಸಿದ್ದರು.ಈ ಹಿನ್ನೆಲೆಯಲ್ಲಿ ಕುಟುಂಭಸ್ಥರು ಮಗುವಿನ ಮೃತದೇಹವನ್ನು ಅಲ್ಲೇ ಸಮೀಪದ ಸ್ಮಶಾನದಲ್ಲಿ ಮಣ್ಣು ಮಾಡಿದ್ದರು.

ಆದರೆ ಒಂದು ಗಂಟೆಯ ಬಳಿಕ ಮಗುವಿನ ಸಂಬಂಧಿಯೋರ್ವರು ತಮ್ಮ ಗ್ರಾಮದಲ್ಲೇ ಶವ ಹೂಳೋಣ ಎಂದು ಹಠ ಹಿಡಿದಿದ್ದು, ಬಳಿಕ ಮಣ್ಣು ಮಾಡಲಾದ ಹೆಣವನ್ನು ಹೊರತೆಗೆಯಲಾಯಿತು. ಈ ವೇಳೆ ಮಗು ಜೀವಂತವಾಗಿರುವುದು ಕಂಡು ಬಂದಿದ್ದು, ಕೂಡಲೇ ಹೆತ್ತವರು ಮಗುವನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಎಚ್ಚೆತ್ತ ಆಸ್ಪತ್ರೆ ಆಡಳಿತ ಘಟನೆಗೆ ಕಾರಣವಾದ ಸಿಬ್ಬಂದಿಗಳನ್ನು ಕರ್ತವ್ಯದಿಂದ ತೆಗೆದುಹಾಕಿದ್ದು, ಮುಂದಿನ ವಿಚಾರಣೆಗೆ ಪೊಲೀಸ್ ದೂರು ದಾಖಲಾಗಿದೆ.

Leave A Reply

Your email address will not be published.