Indian Bank ನಲ್ಲಿ ಭರ್ಜರಿ ಉದ್ಯೋಗವಕಾಶ : 312 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ | ಡಿಗ್ರಿ ಪಾಸಾದವರಿಗೆ ಆದ್ಯತೆ, ಅರ್ಜಿ ಸಲ್ಲಿಸಲು ಜೂನ್,14 ಕೊನೆಯ ದಿನಾಂಕ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇಲ್ಲೊಂದು ಸುವರ್ಣಾವಕಾಶವಿದೆ. ಇಂಡಿಯನ್ ಬ್ಯಾಂಕ್ ಒಟ್ಟು 312 ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 312 ಹುದ್ದೆಗಳು ಖಾಲಿ ಇದ್ದು, ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. 24-05-2022 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. 14-06-2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಹುದ್ದೆಗಳ ವಿವರ :
ಅಸಿಸ್ಟೆಂಟ್ ಮ್ಯಾನೇಜರ್ – 160
ಸೀನಿಯರ್ ಮ್ಯಾನೇಜರ್ – 35
ಮ್ಯಾನೇಜರ್ – 110
ಚೀಫ್ ಮ್ಯಾನೇಜರ್ – 07
ಅರ್ಜಿ ಶುಲ್ಕ : ಅಭ್ಯರ್ಥಿಗಳು ರೂ.850/- ಅರ್ಜಿ ಶುಲ್ಕ ಪಾವತಿಸಬೇಕು. SC/ST/PWD ಅಭ್ಯರ್ಥಿಗಳಿಗೆ ರೂ.175/- ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್/ಇ-ಚಲನ್ ಮೂಲಕ ಅರ್ಜಿ ಶುಲ್ಕ ಪಾವತಿ ಮಾಡಬಹುದು.
ವಯೋಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ, ಗರಿಷ್ಠ 40 ವರ್ಷ ವಯೋಮಿತಿ ಹೊಂದಿರಬೇಕು.
ವಿದ್ಯಾರ್ಹತೆ : ಅಭ್ಯರ್ಥಿಗಳು ಸಿಎ/ ಐಸಿಡಬ್ಲ್ಯುಎ, ಡಿಗ್ರಿ, ಪಿಜಿ, ಪಿಜಿ ಡಿಗ್ರಿ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗಿನ ಪಿಡಿಎಫ್ ಲಿಂಕ್ ಕ್ಲಿಕ್ ಮಾಡಿ