ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ವೇ.ಮೂ.ಕೇಶವ ಜೋಗಿತ್ತಾಯ ಇನ್ನಿಲ್ಲ

ಕಡಬ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದ ವೇದ ಮೂರ್ತಿ ಕೇಶವ ಜೋಗಿತ್ತಾಯ ಅವರು ಮೇ.24ರಂದು ನಿಧನರಾದರು.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೇ.24ರಂದು ನಿಧನರಾದರು.

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅರ್ಚಕರಾಗಿ, ಪ್ರಧಾನ ಆರ್ಚಕರಾಗಿ ಸುಮಾರು 50 ವರ್ಷಗಳ ಸೇವೆ ಸಲ್ಲಿಸಿದ್ದ ರು.

ತಣ್ಣೀರುಪಂತ ಶ್ರೀ ರುದ್ರಗಿರಿ ಮೃತ್ಯುಂಜಯ ದೇವಸ್ಥಾನದ ನಿರ್ಮಾಣ ಕಾರ್ಯದಲ್ಲಿ ಮಾರ್ಗದರ್ಶಕರಾಗಿ, ಸಮಿತಿಯ ಗೌರವಾಧ್ಯಕ್ಷರಾಗಿ, ತಂತ್ರಿಗಳಾಗಿ

ಕಾರ್ಯನಿರ್ವಹಿಸಿದ್ದರು. ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಅನುಭವವನ್ನು ಪಡೆದಿದ್ದ ಜೋಗಿತ್ತಾಯ ಅವರು ಹಲವಾರು ದೇವಸ್ಥಾನಗಳ ನಿರ್ಮಾಣಕ್ಕೆ ಮಾರ್ಗದರ್ಶನ ನೀಡೀದ್ದರು.

ಮೃತರು ಪತ್ನಿ ಇಬ್ಬರು ಪುತ್ರರು, ಓರ್ವ ಪುತ್ರಿ, ಬಂಧು ವರ್ಗ ಹಾಗೂ ಕುಟುಂಬಸ್ಥರನ್ನು ಆಗಲಿದ್ದಾರೆ.

Leave A Reply