ಅವಕಾಶಕ್ಕಾಗಿ ನಟಿಯರು ಮಂಚ ಏರುವುದು ಕನ್ನಡ ಚಿತ್ರರಂಗದಲ್ಲಿ ಕಾಮನ್ | ಕನ್ನಡದ ಖ್ಯಾತ ನಟಿಯೊಬ್ಬಳು ನನ್ನನ್ನು ಮಲಗಲು ಕರೆದಿದ್ದಳು : ‘ಖ್ಯಾತ ನಿರ್ದೇಶಕ’ನಿಂದ ವಿವಾದಾತ್ಮಕ ಹೇಳಿಕೆ

ಯಾವುದೇ ಚಿತ್ರರಂಗ ಇರಬಹುದು, ಅಲ್ಲಿ ನಟಿಸುವ ನಟಿಮಣಿಯರ ವಿರುದ್ಧ ಅಪವಾದ ಹಾಕುವುದು ಅವಕಾಶಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ ಎಂಬ ಮಾತು ಕೇಳಿ ಬರ್ತಾನೆ ಇದೆ. ಕೆಲವು ಸೆನ್ಸೇಷನ್ ಆಗಿ, ಮತ್ತೆ ಕೆಲವು ಅಷ್ಟೇ ಬೇಗ ಮರೆಯಾಗಿ ಹೋಗಿದ್ದು, ಇದೀಗ ಖ್ಯಾತ ನಿರ್ದೇಶಕರೊಬ್ಬರು ನೀಡಿದಂತ ಈ ಹೇಳಿಕೆಯಿಂದ, ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲವನ್ನೇ ಉಂಟು ಮಾಡಿದೆ.

ಈ ರೀತಿಯ ಅಸಂಬದ್ಧ ಹೇಳಿಕೆ ನೀಡಿರುವುದೇ ತೆಲುಗಿನ ಖ್ಯಾತ ನಿರ್ದೇಶಕ ಗೀತಾ ಕೃಷ್ಣ. ಇವರು ಯೂಟ್ಯೂಬ್ ಒಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಕನ್ನಡ ಚಿತ್ರರಂಗದ ಕಾಸ್ಟಿಂಗ್ ಕೌಚ್ ಆರೋಪವನ್ನು ಮಾಡಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಕಾಸ್ಟಿಂಗ್ ಕೌಚ್ ನಲ್ಲಿ ತಮಿಳು ಚಿತ್ರರಂಗದವರು ತುಂಬಾ ಅಸಹ್ಯವೆನಿಸಿದೇ.. ಕನ್ನಡದವರಂತೂ ಇನ್ನೂ ಅಸಹ್ಯ ಎಂದಿದ್ದಾರೆ. ಇದಷ್ಟೇ ಅಲ್ಲದೇ ಕಾಸ್ಟಿಂಗ್ ಕೌಚ್ ಹುಟ್ಟಿದ್ದೇ ತಮಿಳು ಚಿತ್ರರಂಗದಲ್ಲಿ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ.

ಇನ್ನೂ ನನಗೆ ನಟಿಯಿಂದ ಕಾಸ್ಟಿಂಗ್ ಕೌಚ್ ಅನುಭವ ಆಗಿದೆ. ನನ್ನನ್ನು ಕನ್ನಡದ ಖ್ಯಾತ ನಟಿಯೊಬ್ಬಳು ಮಂಚಕ್ಕೆ ಕರೆದಿದ್ದಳು. ಅವಕಾಶಕ್ಕಾಗಿ ಕನ್ನಡದಲ್ಲಿ ಮಂಚ ಏರೋದು ಕಾಮನ್. ನಾನು ಹೀಗಾಗಿಯೇ ಕನ್ನಡದ ಸಹವಾಸ ಬೇಡ ಅಂತ ಓಡಿ ಬಂದೆ ಎಂಬುದಾಗಿ ಹೇಳಿದ್ದಾರೆ. ಖ್ಯಾತ ನಿರ್ದೇಶಕ ಗೀತಾ ಕೃಷ್ಣ ಅವರ ಈ ವಿವಾದಾತ್ಮಕ ಹೇಳಿಕೆ, ಈಗ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲವನ್ನೇ ಹುಟ್ಟುಹಾಕಿದೆ.

‘ಸಂಕೀರ್ತನ’, ‘ಕೋಕಿಲ’, ‘ಟೈಮ್’, ‘ಕಾಫಿ ಬಾರ್’ ಮುಂತಾದ ಕೆಲ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ತೆಲುಗು ನಿರ್ದೇಶಕ ಗೀತಾ ಕೃಷ್ಣ ಅವರು ತಮಿಳು, ಕನ್ನಡ ಚಿತ್ರರಂಗದಲ್ಲಿರುವ ಕಾಸ್ಟಿಂಗ್ ಕೌಚ್ ಅನುಭವವನ್ನು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: