ಮೊಬೈಲ್ ಬಳಕೆದಾರರಿಗೆ ಸೂಚನೆ ನೀಡಿದ ಗೂಗಲ್ | ಈ ಹೆಸರಿನ ‘ಜೋಕರ್’ ಮಾಲ್ವೇರ್ ನಿಮ್ಮ ಡಿವೈಸ್ ಗಳಲ್ಲಿ ಇದ್ದರೆ ಅಪಾಯ!

0 5

ಮೊಬೈಲ್ ಬಳಕೆದಾರರಿಗೆ ಗೂಗಲ್ ಸೂಚನೆಯೊಂದನ್ನು ನೀಡಿದ್ದು, ಮೊಬೈಲ್ ಗಳಿಗೆ ಹಾನಿಯನ್ನುಂಟು ಮಾಡುವ ʼಜೋಕರ್ʼ ಎಂಬ ಮಾಲ್ವೇರ್ ಗಳನ್ನು ತೆಗೆದುಹಾಕುವಂತೆ ತಿಳಿಸಿದೆ.

ಇತ್ತೀಚೆಗೆ ಗೂಗಲ್ ತನ್ನ ಪ್ಲೇಸ್ಟೋರ್ ನಲ್ಲಿ ಮೂರು ಮಾಲ್ವೇರ್ ಅಪ್ಲಿಕೇಶನ್ ಗಳನ್ನು ಪತ್ತೆ ಮಾಡಿದ್ದು, ಅವುಗಳು ಮೊಬೈಲ್ ಸಾಧನಗಳಿಗೆ ಹಾನಿ ಉಂಟು ಮಾಡುವುದಲ್ಲದೇ ಬಳಕೆದಾರರ ಖಾತೆಯಿಂದ ಹಣವನ್ನು ಲಪಟಾಯಿಸಲಿವೆ ಎಂದು ತಿಳಿಸಿದೆ. ಆದರೆ ಗೂಗಲ್ ತನ್ನ ಪ್ಲೇಸ್ಟೋರ್ ನಿಂದ ಈ ಆಪ್ ಗಳನ್ನು ತೆಗೆದುಹಾಕಿದೆಯಾದರೂ, ಇನ್ನೂ ಅಸ್ತಿತ್ವದಲ್ಲಿವೆ. ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಜೋಕರ್ ಮಾಲ್ವೇರ್ ನೊಂದಿಗೆ ಇರುವ ಈ ಅಪ್ಲಿಕೇಶನ್ ಗಳನ್ನು ಸೈಬರ್ ಸೆಕ್ಯುರಿಟಿ ಕಂಪನಿಯಾದ ಕಾಸ್ಪೆರ್ ಸ್ಕಿ ಪತ್ತೆ ಮಾಡಿದೆ ಎಂದು ಹೇಳಿದೆ.

ಗೂಗಲ್ ಪ್ಲೇಸ್ಟೋರ್ ನಲ್ಲಿ ಸ್ಟೈಲ್ ಮೆಸೇಜ್ , ಬ್ಲಡ್ ಪ್ರೆಷರ್ ಆಪ್ ಮತ್ತು ಕ್ಯಾಮೆರಾ ಪಿಡಿಎಫ್ ಸ್ಕ್ಯಾನರ್ ಎಂಬ ಹೆಸರಿನ ಈ ಜೋಕರ್ ಮಾಲ್ವೇರ್ ಗಳು ಗುಪ್ತವಾಗಿ ಸೇರಿಕೊಂಡು ಬಳಕೆದಾರರ ಡಿವೈಸ್ ಗಳಲ್ಲಿ ಡೌನ್ಲೋಡ್ ಆಗುತ್ತಿವೆ. ಇದು ಬಳಕೆದಾರರ ಸಹಮತಿ ಇಲ್ಲದೇ ಈ ಅಪ್ಲಿಕೇಶನ್ ಗೆ ಸೈನ್ ಇನ್ ಆಗಿ ಅವರಿಗೆ ಅರಿವಿಲ್ಲದೇ ಅವರಿಂದ ಹಣ ಕೀಳುವಂತಹ ಅಪ್ಲಿಕೇಶನ್ ಗಳಾಗಿವೆ. ಈ ಹಿನ್ನೆಲೆಯಲ್ಲಿ ಕೂಡಲೇ ಇಂತಹ ಅಪ್ಲಿಕೇಶನ್ ಗಳನ್ನು ಡಿವೈಸ್ ಗಳಿಂದ ಡಿಲೀಟ್ ಮಾಡಿ ಎಂದು ಗೂಗಲ್ ಬಳಕೆದಾರರಿಗೆ ಮನವಿ ಮಾಡಿದೆ.

Leave A Reply