ನಿಮ್ಮ ದೃಷ್ಟಿ ಶಕ್ತಿಗೊಂದು ಸವಾಲು; ಈ ಚಿತ್ರದಲ್ಲಿ ಅಡಗಿರುವ ಬಾಲಕಿಯನ್ನು ಪತ್ತೆಹಚ್ಚಬಲ್ಲಿರಾ?

ಇತ್ತೀಚೆಗೆ ಆಪ್ಟಿಕಲ್ ಇಲ್ಯೂಶನ್ ಫೋಟೋಗಳು ಅಥವಾ ಅಂತಹ ಕಲಾಕೃತಿಗಳು ಎಲ್ಲರಿಗೂ ಹೆಚ್ಚು ಇಷ್ಟದ ಜೊತೆಗೆ ಕುತೂಹಲ ಮೂಡಿಸುವಲ್ಲಿ ಎರಡು ಮಾತಿಲ್ಲ.
ಅವುಗಳು ನಮ್ಮ ಬುದ್ಧಿಶಕ್ತಿಗೆ ಕೆಲಸ ಕೊಡುವುದರ ಜೊತೆಗೆ, ಕಣ್ಣಿಗೆ ಕಾಣುವುದಕ್ಕಿಂತ ಮತ್ತೂ ಏನಾದರೂ ಚಿತ್ರದಲ್ಲಿ ಇದೆಯೇ ಎನ್ನುವುದನ್ನು ನೋಡುವಂತಹ ಕುತೂಹಲ ಅಥವಾ ಹುಡುಕಲು ಪ್ರಚೋದನೆ ನೀಡುತ್ತದೆ. ಇದೇ ಕಾರಣದಿಂದ ಜನರು ಸಮಯ ಕಳೆಯಲೆಂದು ಆಪ್ಟಿಕಲ್ ಇಲ್ಯೂಶನ್ ಚಿತ್ರಗಳ ಬಗ್ಗೆ ಆಸಕ್ತಿ ತೋರಿಸುತ್ತಾರೆ.

ಇದು ಕೂಡಾ ಅಂತದ್ದೇ ಒಂದು ವಿನೋದದ ಚಿತ್ರ. ಈ ಚಿತ್ರದಲ್ಲಿ ಪುಟಾಣಿ ಹುಡುಗಿಯೊಬ್ಬಳು ಅವಿತಿದ್ದಾಳೆ. ಅಂದರೆ ಕದ್ದು ಕೂತಿದ್ದಾಳೆಂದು ತಿಳಿಯಬೇಡಿ ಆಕೆ ಕೈ ಬೀಸುತ್ತಾ ನಿಂತಿದ್ದಾಳೆ. ಈ ಚಿತ್ರದಲ್ಲಿ ಅದನ್ನು ಹುಡುಕುವುದೇ ನಿಮಗಿರುವ ಸವಾಲು.

ಅಂದಹಾಗೆ ಈ ಆಪ್ಟಿಕಲ್ ಇಲ್ಯೂಶನ್ ಚಿತ್ರಗಳಿಂದ ನಿಮ್ಮ ವ್ಯಕ್ತಿತ್ವವನ್ನೂ ತಿಳಿಯಬಹುದು. ಈ ಬಗ್ಗೆ ಹಲವು ತಜ್ಞರು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ನಿಮಗೆ ಕುತೂಹಲವಿದ್ದರೆ ಈ ಬರಹ ಓದಿ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಚಿತ್ರ ವೈರಲ್ ಆಗಿದೆ. ಕಲ್ಲು ಬಂಡೆಗಳಿಂದ ಕೂಡಿರುವ ಮನಮೋಹಕ ಪ್ರಾಕೃತಿಕ ಚಿತ್ರವದು. ಆದರೆ ಆ ಚಿತ್ರದಲ್ಲಿ ಪುಟಾಣಿ ಹುಡುಗಿಯೊಬ್ಬಳು ಅವಿತಿದ್ದಾಳೆ. ಆದರೆ ವಿಶಾಲ ಚಿತ್ರದಲ್ಲಿ ಅದನ್ನು ಹುಡುಕುವುದೇ ನಿಮಗಿರುವ ಸವಾಲು. ಮೇಲೆ ನೀಡಲಾಗಿರುವ ಚಿತ್ರವನ್ನು ಸೂಕ್ಷ್ಮವಾಗಿ ಮತ್ತೊಮ್ಮೆ ಗಮನಿಸಿ. ಅದರಲ್ಲಿರುವ ಬಾಲಕಿಯನ್ನು ಪತ್ತೆಹಚ್ಚಿ.

ಈ ಚಿತ್ರದಲ್ಲಿ ಬಾಲಕಿ ತನ್ನ ಎರಡೂ ಕೈಗಳನ್ನೆತ್ತಿ ಕ್ಯಾಮೆರಾದತ್ತ ಬೀಸುತ್ತಿದ್ದಾಳೆ. ಆದರೆ ಆಕೆಯ ಮುಖ ಹಾಗೂ ಉಡುಪಿನ ಬಣ್ಣ ಕಲ್ಲುಗಳ ವರ್ಣಕ್ಕಿಂತ ಹೆಚ್ಚು ಭಿನ್ನವಾಗಿಲ್ಲ. ಹೀಗಾಗಿ ನಿಮ್ಮ ದೃಷ್ಟಿಗೆ ಅದನ್ನು ಕಂಡುಹಿಡಿಯಲು ಕಷ್ಟವಾಗುತ್ತಿರಬಹುದು. ಇಂತಹ ಚಿತ್ರಗಳನ್ನೇ ಆಪ್ಟಿಕಲ್ ಇಲ್ಯೂಶನ್ ಚಿತ್ರಗಳು ಎನ್ನುತ್ತಾರೆ. ಅವು ಕಣ್ಣುಗಳಿಗೆ ಒಂದು ರೀತಿಯ ಭ್ರಮೆ

ಮೇಲೆ ನೀಡಲಾಗಿರುವ ಚಿತ್ರದಲ್ಲಿರುವ ಬಾಲಕಿ ತನ್ನ ಎರಡೂ ಕೈಗಳನ್ನೆತ್ತಿ ಕ್ಯಾಮೆರಾದತ್ತ ಬೀಸುತ್ತಿದ್ದಾಳೆ. ಆದರೆ ಆಕೆಯ ಮುಖ ಹಾಗೂ ಉಡುಪಿನ ಬಣ್ಣ ಕಲ್ಲುಗಳ ವರ್ಣಕ್ಕಿಂತ ಹೆಚ್ಚು ಭಿನ್ನವಾಗಿಲ್ಲ. ಹೀಗಾಗಿ ನಿಮ್ಮ ದೃಷ್ಟಿಗೆ ಅದನ್ನು ಕಂಡುಹಿಡಿಯಲು ಕಷ್ಟವಾಗುತ್ತಿರಬಹುದು. ಇಂತಹ ಚಿತ್ರಗಳನ್ನೇ ಆಪ್ಟಿಕಲ್ ಇಲ್ಯೂಶನ್ ಚಿತ್ರಗಳು ಎನ್ನುತ್ತಾರೆ. ಅವು ಕಣ್ಣುಗಳಿಗೆ ಒಂದು ರೀತಿಯ ಭ್ರಮೆ ಉಂಟುಮಾಡುತ್ತವೆ.

ಅಂದಹಾಗೆ ಮೇಲೆ ನೀಡಿರುವ ಚಿತ್ರವನ್ನು ತೆಗೆದಿರುವುದು ಕ್ಯಾಲಿಫೋರ್ನಿಯಾದಲ್ಲಿರುವ ಜೋಶುವಾ ಟೀ ನ್ಯಾಷನಲ್ ಪಾರ್ಕ್‌ನಲ್ಲಿ. ನಂತರ ಈ ಚಿತ್ರವನ್ನು ಸಾಮಾಜಿಕ ಜಾಲತಾಣವೊಂದರಲ್ಲಿ ಹಂಚಿಕೊಳ್ಳಲಾಗಿತ್ತು. ಅಲ್ಲಿಂದ ಫೋಟೋವು ವೈರಲ್ ಆಗಿದೆ.

ನೀವು ಚಿತ್ರದಲ್ಲಿ ಬಾಲಕಿಯನ್ನು ಕಾಣಲು ಸಿಕ್ಕಿದರೆ ಹಾಗಿದ್ದಲ್ಲಿ ನಿಮಗೆ ಅಭಿನಂದನೆ. ಒಂದು ವೇಳೆ ಇನ್ನೂ ಉತ್ತರವನ್ನು ಹುಡುಕುತ್ತಿದ್ದರೆ ಇಲ್ಲಿದೆ ನೋಡಿ.

Leave A Reply

Your email address will not be published.