ಬಾಕ್ಸಿಂಗ್ ಮಾಡುತ್ತಿರುವಾಗಲೇ ಹೃದಯಾಘಾತ !! | ಖ್ಯಾತ ಬಾಕ್ಸಿಂಗ್ ತಾರೆ ದುರ್ಮರಣ

0 7

ಖ್ಯಾತ ಬಾಕ್ಸಿಂಗ್ ತಾರೆ ಜರ್ಮನಿಯ ಚಾಂಪಿಯನ್ ಮೂಸಾ ಯಮಕ್ ಬಾಕ್ಸಿಂಗ್ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟ ಆಘಾತಕಾರಿ ಘಟನೆ ನಡೆದಿದೆ.

ಯಮಕ್ (38) ಮ್ಯೂನಿಚ್‍ನಲ್ಲಿ ಉಗಾಂಡಾದ ಹಮ್ಝಾ ವಂಡೆರಾ ಅವರೊಂದಿಗೆ ಬಾಕ್ಸಿಂಗ್ ನಡೆಯುತ್ತಿದ್ದ ಸಂದರ್ಭದಲ್ಲಿ ರಿಂಗ್‍ನಲ್ಲಿಯೇ ಕುಸಿದು ಬಿದ್ದಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಟರ್ಕಿಯ ಅಧಿಕಾರಿ ಹಸನ್ ತುರಾನ್ ಅವರು, ಯೂರೋಪಿಯನ್ ಹಾಗೂ ಏಷ್ಯಯನ್ ಚಾಂಪಿಯನ್‍ಗಳನ್ನು ಜಯಿಸಿರುವ ಅಲುಕ್ರಾದ ಬಾಕ್ಸರ್ ನಮ್ಮ ದೇಶದ ಹೆಮ್ಮೆಯ ಬಾಕ್ಸರ್‌ನ್ನು ಚಿಕ್ಕವಯಸ್ಸಿನಲ್ಲಿಯೇ ಕಳೆದುಕೊಂಡು ಭಾರೀ ದು:ಖದಲ್ಲಿದ್ದೇವೆ ಎಂದಿದ್ದಾರೆ.

ಮೂಸಾ ಯಮಕ್ ಅವರು ಪಂದ್ಯದ 3ನೇ ಸುತ್ತು ಪ್ರಾರಂಭವಾಗುವ ಮುಂಚೆಯೇ ಕುಸಿದು ಬಿದ್ದಿದ್ದಾರೆ. 2ನೇ ಸುತ್ತಿನಲ್ಲಿ ವಂಡೇರಾ ಅವರು ಯಮಕ್‍ಗೆ ದೊಡ್ಡ ಪಂಚ್ ಕೊಟ್ಟಿದ್ದರು. ಯಮಕ್ ಅವರು 3ನೇ ಸುತ್ತಿನಲ್ಲಿ ಮತ್ತೆ ವಾಂಡೆರಾ ಅವರೊಟ್ಟಿಗೆ ಪೈಪೋಟಿಗೆ ನಿಂತರು. ಆದರೆ 3ನೇ ಸುತ್ತು ಆರಂಭವಾಗುವ ಮುಂಚೆಯೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರು ಸಾವನ್ನಪ್ಪಿದ್ದಾರೆಂದು ವೈದ್ಯರ ತಂಡ ಘೋಷಣೆ ಮಾಡಿದೆ.

Leave A Reply