ಕರ್ನಾಟಕದ ಹುಡುಗನಿಗೆ ಮನಸೋತ ಕ್ವಾಂಟ್ರವರ್ಸಿ ಕ್ವೀನ್ ‘ರಾಖಿ ಸಾವಂತ್’: ಮೈಸೂರಿನ ಲವರ್ ನಿಂದ BMW ಕಾರ್ ಗಿಫ್ಟ್ !!!!

ವಿವಾದಗಳ ಮೂಲಕ ತನ್ನನ್ನು ತಾನು ಲೈಮ್ ಲೈಟ್ ನಲ್ಲಿಡಲು ಸದಾ ಸುದ್ದಿಯಲ್ಲಿರಲು ಬಯಸುವ ವ್ಯಕ್ತಿ ಎಂದರೆ ಅದು ಲ ನಟಿ ರಾಖಿ ಸಾವಂತ್. ಒಂದಿಲ್ಲೊಂದು ವಿಚಾರಗಳ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ರಾಖಿ ಪ್ರೀತಿ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಪ್ರೀತಿ,ಮದುವೆ, ಬ್ರೇಕಪ್ ಇದೆಲ್ಲಾ ರಾಖಿ ಸಾವಂತ್ ಗೆ ಹೊಸದೇನಲ್ಲ. ಈಗಾಗಲೇ ಪ್ರೀತಿ ಎಂಬ ಹೆಸರಿನಲ್ಲಿ ಯಾರ್ಯಾರನ್ನೋ ಮದುವೆಯಾಗ್ತೀನಿ ಎಂದು ಹೇಳಿ, ನಂತರ ಬೇಡ ಎಂದು‌ ಹೊರ ಬಂದ ಘಟನೆ ತುಂಬಾ ಇದೆ. ಈ ಬಗ್ಗೆ ರಾಖಿ ಸಾವಂತ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿ ಬಾವುರಾಗಿದ್ದರು. ಅಲ್ಲದೇ ಪಾಪರಾಜಿಗಳ ಮುಂದೆಯೂ ವಿಷಯ ಪ್ರಸ್ತಾಪಿಸಿ ಕಣ್ಣೀರಾಕಿದ್ದರು.

ಆದರೆ ಈಗ ಆ ಎಲ್ಲಾ ಕಹಿ ಘಟನೆಯಿಂದ ತುಂಬಾ ಮುಂದೆ ಬಂದಿರುವ ರಾಖಿ ಮತ್ತೋರ್ವ ವ್ಯಕ್ತಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು, ರಾಖಿ ಸಾವಂತ್ ಜೊತೆ ಪ್ರೀತಿಯಲ್ಲಿ ಮುಳುಗಿರುವ ವ್ಯಕ್ತಿ ಮತ್ಯಾರು ಅಲ್ಲ ಆದಿಲ್ ಖಾನ್ ದುರಾನಿ. ಈತ ಮೈಸೂರಿನ ವ್ಯಕ್ತಿ.

https://www.instagram.com/tv/CdiFOp_M-om/?utm_source=ig_web_copy_link

ಆದಿಲ್ ಮತ್ತು ರಾಖಿ ಸಾವಂತ್ ಪ್ರೀತಿ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದಿಲ್ ಜೊತೆ ನಟಿ ರಾಖಿ ಸಾವಂತ್ ಫೋಟೋ ಶೇರ್ ಮಾಡಿ ಸ್ವೀಟ್ ಹಾರ್ಟ್, ನನ್ನ ಜೀವನ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ರಾಖಿ ತಾನು ಸಿಂಗಲ್ ಅಲ್ಲ ಸಂಬಂಧದಲ್ಲಿ ಇದ್ದೀನಿ. ಎಂದು ಬಹಿರಂಗ ಪಡಿಸಿದ್ದಾರೆ. ಕ್ಯಾಮರಾಗಳ ಮುಂದೆಯೇ ಆದಿಲ್ ಜೊತೆ ಮಾತನಾಡುತ್ತಾ ಆತನನ್ನು ಮುದ್ದು ಮಾಡುತ್ತಿರುವ ವಿಡಿಯೋ ಕೂಡ ಸೆರೆಯಾಗಿದೆ. ರಾಖಿ ಸಾವಂತ್ ಬಗ್ಗೆ ಮಾತನಾಡಿದ ಆದಿಲ್, ‘ರಾಖಿ ಸಾವಂತ್ ತುಂಬಾ ಒಳ್ಳೆಯ ವ್ಯಕ್ತಿ ಮತ್ತು ಸರಳ ಜೀವಿ’ ಎಂದು ಹೇಳಿದ್ದಾರೆ.

Leave A Reply