ಬಸ್ ಸ್ಟ್ಯಾಂಡ್ ನಲ್ಲಿ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದ ವ್ಯಕ್ತಿಗೆ ಕರೆಂಟ್ ಶಾಕ್ | ವ್ಯಕ್ತಿ ಸ್ಥಳದಲ್ಲೇ ಸಾವು

Share the Article

ಈ ಸಾವು ಯಾವ ಮೂಲಕ ಹೇಗೆ ವಕ್ಕರಿಸುತ್ತೇ ಅಂತಾ…ಹೇಳೋಕ್ಕಾಗಲ್ಲ. ತನ್ನ ಮನೆಗೆ ಹೋಗಲು ಬಸ್ಸಿಗಾಗಿ ಕಾಯುತ್ತಾ ಇದ್ದ ವ್ಯಕ್ತಿ ಕುಳಿತಲ್ಲಿಯೇ ಸಾಯ್ತಾನೆ ಅಂದರೆ ನಂಬುತ್ತೀರಾ ? ಅದು ಕೂಡಾ ಬಸ್ ಸ್ಟಾಪ್ ನಲ್ಲಿ.

ಘಟನೆ ವಿವರ : ಬಸ್ ಸ್ಟ್ಯಾಂಡ್‌ನಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ಕರೆಂಟ್ ಶಾಕ್‌ನಿಂದ ಸಾವನಪ್ಪಿರುವಂತಹ ಘಟನೆ ಬೆಂಗಳೂರಿನ ಹೆಬ್ಬಾಳ ಬಸ್ ನಿಲ್ದಾಣದಲ್ಲಿ ನೆನ್ನೆ ರಾತ್ರಿ 10 ಗಂಟೆ ಸುಮಾರಿಗೆ ನಡೆದಿದೆ. ಮೃತ ವ್ಯಕ್ತಿಯ ಗುರುತು ಇನ್ನು ತಿಳಿದು ಬಂದಿಲ್ಲ. ರಾತ್ರಿ ನಗರದಲ್ಲಿ ಸುರಿಯುತ್ತಿದ್ದ ಭಾರಿ ಮಳೆ ನಡುವೆ ಅವಘಡವೊಂದು ಸಂಭವಿಸಿದೆ. ವ್ಯಕ್ತಿ ಬಸ್ ಸ್ಟಾಪ್‌ನಲ್ಲಿ ಕುಳಿತಿದ್ದನಂತೆ. ಈ ವೇಳೆ ಕುಳಿತ ಸ್ಥಳದಿಂದ ಕುಸಿದು ಬಿದ್ದು ಆತ ಮೃತಪಟ್ಟಿದ್ದಾನೆ. ಆದ್ರೆ ಸಾವಿಗೆ ಕಾರಣ ಏನು ಎಂಬುದು ಇನ್ನು ತಿಳಿದು ಬಂದಿಲ್ಲ. ಘಟನೆ ಬಳಿಕ ಸ್ಥಳಕ್ಕೆ ಆಗಮಿಸಿದ ಬೆಸ್ಕಾಂನ ಸಿಬ್ಬಂದಿಗಳು ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.

ಸದ್ಯ ಮೃತದೇಹ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮೃತರ ಕುಟುಂಬಸ್ಥರ ಪತ್ತೆಗಾಗಿ ಹೆಬ್ಬಾಳ ಪೊಲೀಸರು ಮುಂದಾಗಿದ್ದಾರೆ.

Leave A Reply