Bengaluru : ಶಾಲೆಯಿಂದ ಮನೆಗೆ ಹೋಗುತ್ತಿದ್ದ 15ರ ಬಾಲಕಿ ಮೇಲೆ ಮರದ ತುಂಡು ಬಿದ್ದು ಸಾವು!!

Bengaluru : ಶಾಲೆಯಿಂದ ಮನೆಗೆ ತೆರಳುತ್ತಿದ್ದ 15 ವರ್ಷದ ಬಾಲಕಿಯ ಮೇಲೆ ನಿರ್ಮಾಣ ಹಂತದ ಮರದ ತುಂಡು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ವಿವಿ ಪುರಂ ಮೆಟ್ರೋ ನಿಲ್ದಾಣದ ಬಳಿ ಈ ಒಂದು ಘೋರ ದುರಂತ ನಡೆದಿದೆ.
ಮೃತ ಬಾಲಕಿಯನ್ನು ತೇಜಸ್ವಿನಿ ಎಂದು ತಿಳಿದುಬಂದಿದೆ. ಬೆಂಗಳೂರಿನ(Bengaluru) ವಿವಿ ಪುರಂ ಮೆಟ್ರೋ ನಿಲ್ದಾಣದ ಬಳಿ ತೇಜಸ್ವಿನಿ ಎಂಬ 15 ವರ್ಷದ ಬಾಲಕಿ ಶಾಲೆ ಬಿಟ್ಟು ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ನಿರ್ಮಾಣ ಹಂತದ 4ನೇ ಮಹಡಿಯಿಂದ ಮರದ ತುಂಡು ಒಂದು ಏಕಾಏಕಿ ಬಾಲಕಿ ತೇಜಸ್ವಿನಿ ಮೇಲೆ ಬಿದ್ದಿದೆ. ಆಗ ಸ್ಥಳದಲ್ಲೇ ಬಾಲಕಿ ಸಾವನ್ನಪ್ಪಿದ್ದಾಳೆ.
ಸದ್ಯ ವಿ ವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೇಜಸ್ವಿನಿ ವಾಸವಿ ವಿದ್ಯಾನಿಕೇತನ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದಳು ಎಂದು ತಿಳಿದುಬಂದಿದೆ.
ಅಂದಹಾಗೆ ಮೃತ ಬಾಲಕಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ. ಖಾಸಗಿ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದು, ಅಪ್ಪು ಅಪ್ಪಟ ಅಭಿಮಾನಿಯಾಗಿದ್ದಳು. ಇನ್ನು ಈಕೆ ಡ್ಯಾನ್ಸರ್ ಕೂಡಾ ಹೌದು. ಇದೇ ಕಾರಣದಿಂದ ಅಪ್ಪು ಡ್ಯಾನ್ಸ್ ಅಕಾಡೆಮಿಯಲ್ಲಿ ಡ್ಯಾನ್ಸ್ ಕ್ಲಾಸ್‌ಗೂ ತೇಜಸ್ವಿನಿ ಹೋಗುತ್ತಿದ್ದಳು. ಹಲವು ಡ್ಯಾನ್ಸ್ ಕಾಂಪಿಟೇಶನ್ ನಲ್ಲಿ ಭಾಗವಹಿಸಿದ್ದ ತೇಜಸ್ವಿನಿ, ಡ್ಯಾನ್ಸರ್ ಆಗಬೇಕೆಂಬ ಕನಸನ್ನೂ ತೇಜಸ್ವಿನಿ ಕಟ್ಟಿಕೊಂಡಿದ್ದಳು.
Comments are closed.