ಪುಟ್ಟ ಮಕ್ಕಳಿಬ್ಬರನ್ನು ನೇಣು ಬಿಗಿದು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಮಹಿಳೆ!! ಸಾವಿಗೆ ಕಾರಣ ನಿಗೂಢ-ಮುಗಿಲು ಮುಟ್ಟಿದ ಕುಟುಂಬಿಕರ ಆಕ್ರಂದನ

ತನ್ನಿಬ್ಬರು ಪುಟ್ಟ ಮಕ್ಕಳ ಕೊರಳಿಗೆ ನೇಣು ಬಿಗಿದ ತಾಯಿಯೊಬ್ಬಳು ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆಯೊಂದು ಶಿವಮೊಗ್ಗ ಜಿಲ್ಲೆಯ ಚೋರಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಸಾನ್ವಿ(1)ಹಾಗೂ ಕುಶಾಲ್(2) ಜ್ಯೋತಿ(25) ಎಂದು ಗುರುತಿಸಲಾಗಿದೆ.ಸುಮಾರು ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆ ತನ್ನಿಬ್ಬರು ಮಕ್ಕಳನ್ನೂ ಸಾವಿನ ದವಡೆಗೆ ಸಿಲುಕಿಸಲು ಕಾರಣ ನಿಗೂಢವಾಗಿ ಉಳಿದಿದೆ.

ಈ ಬಗ್ಗೆ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮಹಿಳೆಯ ನಿರ್ಧಾರಕ್ಕೆ ಕಾರಣವೇನು ಎಂಬುವುದನ್ನು ತನಿಖೆಯ ಬಳಿಕ ತಿಳಿಯಬೇಕಾಗಿದೆ. ಇನ್ನೂ ಜಗತ್ತು ಎನೆಂಬುವುದನ್ನು ಅರಿಯುವ ಮೊದಲೇ ಇಹಲೋಕ ತ್ಯಜಿಸಿದ ಪುಟ್ಟ ಮಕ್ಕಳನ್ನು ನೆನೆದು ಕುಟುಂಬಿಕರು ಮರುಗಿದ್ದು, ಮಹಿಳೆಯ ನಡೆಗೆ ಆಕ್ರೋಶ ವ್ಯಕ್ತವಾಯಿತ್ತಲ್ಲದೇ, ಇಡೀ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ.

Leave A Reply