ಎರಡು ಬಾಟಲಿ ಚಿಲ್ಡ್ ಬಿಯರ್ ತರುವಂತೆ ಪೊಲೀಸರಿಗೇ ಕರೆ ಮಾಡಿ ಹೇಳಿದ ಕುಡುಕ | ಮುಂದೇನಾಯ್ತು?

ಇದೊಂದು ಕುಡುಕನ ಪುರಾಣ. ಜಗತ್ತಿನಲ್ಲಿ ಎಂತೆಂತ ಕುಡುಕರು ಇದ್ದಾರೆಂದರೆ ಯಾರಿಗೂ ಸರಿಯಾಗಿ ಗೊತ್ತಿಲ್ಲ ಅನ್ಸುತ್ತೆ. ಇವರ ಉಪದ್ರಗಳನ್ನು ಸಹಿಸುವುದು ದೇವರಿಗೇ ಪ್ರೀತಿ. ಕುಡಿತದ ಚಟ ಇರುವವರಿಗೆ ತಾವು ಕುಡಿದ ಮೇಲೆ ಏನು ಮಾಡುತ್ತೇವೆ? ಏನು ಮಾತಾಡುತ್ತೇವೆ ಅನ್ನೋ ಧ್ಯಾನ ಇರುವುದಿಲ್ಲವಂತೆ. ಅಂತಿಪ್ಪ ಕುಡುಕನ ಕಥೆ ಇದು.

ಆತ ಮನೆಯಲ್ಲಿ ಚೆನ್ನಾಗಿ ಕುಡಿದಿದ್ದಾನೆ. ನಂತರ ಮದ್ಯದಬಾಟಲಿ ಫುಲ್ ಖಾಲಿಯಾಗಿದೆ. ಆದರೆ ಆತನ ಕುಡಿತದ ಬಯಕೆ ಇನ್ನೂ ಕರಗಲಿಲ್ಲ. ಬಾಯಿ ಸಪ್ಪೆ ಅನಿಸಿತೋ ಅಥವಾ ಅಮಲು ಇನ್ನೂ ಏರಲಿಲ್ಲವೋ, ಸೀದಾ ಫೋನ್ ತೆಗೆದು ಒಂದು ನಂಬರಿಗೆ ಡಯಲ್ ಮಾಡುತ್ತಾನೆ. ಯಾರಿಗೆ ಗೊತ್ತೇ ? ಪೊಲೀಸರಿಗೆ.

ರಾತ್ರಿ ವೇಳೆ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ ಆರೋಪಿ ಸಹಾಯ ಬೇಕೆಂದು ಕೇಳಿದ್ದ. ಆದರೆ ಯಾವ ಸಹಾಯ ಎಂದು ಫೋನ್ ನಲ್ಲಿ ಹೇಳಲು ಸಾಧ್ಯವಿಲ್ಲ. ನೀವು ಮನೆಗೆ ಬರಲೇಬೇಕೆಂದು ತುಂಬಾನೇ ಆಗ್ರಹಿಸಿದ್ದ.

ಅದರಂತೆ ಇಬ್ಬರು ಕಾನ್ಸ್ ಟೇಬಲ್ ಗಳು ಆತನ ಮನೆಗೆ ಹೋಗಿದ್ದರು. ಆದರೆ ಅಲ್ಲಿ ಹೋದಾಗ ಆಗಲೇ ಪಾನಮತ್ತನಾಗಿದ್ದ ಆರೋಪಿ ಇನ್ನೆರಡು ಬಾಟಲಿ ಚಿಲ್ಡ್ ಬಿಯರ್ ತರುವಂತೆ ಪೊಲೀಸರಿಗೇ ಆರ್ಡರ್ ಮಾಡಿದ್ದಾನೆ. ಪಿತ್ತ ನೆತ್ತಿಗೇರಿದ ಪೊಲೀಸರು, ಎರಡು ತದುಕಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಅಂದ ಹಾಗೆ ಈ ಘಟನೆ ನಡೆದಿರುವುದು ಹೈದರಾಬಾದ್ ನಲ್ಲಿ.

Leave A Reply