ಭೂಮಿಯತ್ತ ಧಾವಿಸುತ್ತಿದೆ 1,600 ಅಡಿ ಉದ್ದದ ಬೃಹತ್ ಕ್ಷುದ್ರಗ್ರಹ !! | ಈ ದೈತ್ಯ ಬಾಹ್ಯಾಕಾಶ ಶಿಲೆಯಿಂದ ಭೂಮಿಗೇನು ಅಪಾಯ !??

0 12

ಬಾಹ್ಯಾಕಾಶದಲ್ಲಿ ರಹಸ್ಯಗಳ ಹಿಂಡೇ ಇದೆ. ಬಗೆದಷ್ಟೂ ರಹಸ್ಯಗಳು ಹೊರ ಹೊಮ್ಮುತ್ತಲೇ ಇರುತ್ತವೆ. ಈ ರಹಸ್ಯಗಳು ಮಾನವನನ್ನು ಅನಾದಿ ಕಾಲದಿಂದಲೂ ಅಚ್ಚರಿಗೊಳಿಸುತ್ತಿವೆ. ಅಂತೆಯೇ ಇದೀಗ 1,600 ಅಡಿ ಉದ್ದದ ಬೃಹತ್ ಕ್ಷುದ್ರಗ್ರಹವೊಂದು ಭೂಮಿಯತ್ತ ಧಾವಿಸುತ್ತಿದೆ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆ NASA, ದೈತ್ಯ ಬಾಹ್ಯಾಕಾಶ ಶಿಲೆ (ಕ್ಷುದ್ರಗ್ರಹ) 388945 (2008 TZ3) ಭೂಮಿಯತ್ತ ಧಾವಿಸುತ್ತಿದ್ದು, ಮೇ 16 ರಂದು ಮುಂಜಾನೆ 2.48 ಕ್ಕೆ ನಮ್ಮ ಗ್ರಹಕ್ಕೆ ಸಮೀಪಿಸಲಿದೆ. ಈ ಕ್ಷುದ್ರಗ್ರಹವು 1,608 ಅಡಿ ಅಗಲವಿದೆ ಎಂದು ಹೇಳಿದೆ.

ನ್ಯೂಯಾರ್ಕ್ ನ ಐಕಾನಿಕ್ ಎಂಪೈರ್ ಸ್ಟೇಟ್ ಕಟ್ಟಡಕ್ಕೆ ಹೋಲಿಸಿದರೆ, ಈ ಕ್ಷುದ್ರಗ್ರಹವು 1,454 ಅಡಿಗಳಷ್ಟು ಎತ್ತರದಲ್ಲಿದೆ. ಇದು ಐಫೆಲ್ ಟವರ್‌ಗಿಂತಲೂ ದೊಡ್ಡದಾಗಿದೆ ಮತ್ತು ಲಿಬರ್ಟಿ ಪ್ರತಿಮೆಗಿಂತಲೂ ಉದ್ದವಿದೆ. ಬಾಹ್ಯಾಕಾಶ ಬಂಡೆಯು ಭೂಮಿಗೆ ಅಪ್ಪಳಿಸಿದರೆ ಭಾರೀ ಹಾನಿಯನ್ನುಂಟು ಮಾಡುತ್ತದೆ ಎಂದು ನಾಸಾ ಹೇಳಿದೆ. ಈ ಬೃಹತ್ ಕ್ಷುದ್ರಗ್ರಹ ಭೂಮಿಯತ್ತ ಧಾವಿಸುತ್ತಿದೆಯಾದರೂ ಇದು ಭೂಮಿಗೆ ಅಪ್ಪಳಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಬಾಹ್ಯಾಕಾಶ ವಿಜ್ಞಾನಿಗಳ ಲೆಕ್ಕಾಚಾರದಂತೆ ಇದು ಸುಮಾರು 2.5 ಮಿಲಿಯನ್ ಮೈಲುಗಳಷ್ಟು ದೂರದಿಂದ ನಮ್ಮನ್ನು ಹಾದುಹೋಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಈ ಕ್ಷುದ್ರಗ್ರಹದ ಭೂಮಿ ಪ್ರಯಾಣ ಇದೇ ಮೊದಲೇನಲ್ಲ. ಈ ಹಿಂಗೆ ಇದು ಮೇ 2020 ರಲ್ಲಿ ಭೂಮಿಗೆ ಬಹಳ ಸಮೀಪದಲ್ಲಿ ಅಂದರೆ 1.7 ಮಿಲಿಯನ್ ಮೈಲುಗಳಷ್ಟು ದೂರದಲ್ಲಿ ಹಾದುಹೋಗಿತ್ತು. ಬಾಹ್ಯಾಕಾಶ ವಿಜ್ಞಾನಿಗಳ ಪ್ರಕಾರ, ಪ್ರತಿ ಎರಡು ವರ್ಷಗಳಿಗೊಮ್ಮೆ ಸೂರ್ಯನ ಸುತ್ತ ಸುತ್ತುತ್ತಿರುವಾಗ ಈ ಬಾಹ್ಯಾಕಾಶ ಶಿಲೆ ಅಥವಾ ಕ್ಷುದ್ರಗ್ರಹವು ಭೂಮಿಯನ್ನು ಹಾದುಹೋಗುತ್ತದೆ. ಮುಂದಿನ ಬಾರಿ ಅದು ಮೇ 2024 ರಲ್ಲಿ ಭೂಮಿಯ ಹತ್ತಿರ ಹಾದುಹೋಗುತ್ತದೆ. ಆಗ ಇದು ಹೆಚ್ಚು ದೂರ ಅಂದರೆ 6.9 ಮಿಲಿಯನ್ ಮೈಲುಗಳಷ್ಟು ದೂರದಲ್ಲಿ ಹಾದು ಹೋಗಲಿದೆ. ಬಳಿಕ ಈ ಕ್ಷುದ್ರಗ್ರಹವು 2163ರ ಮೇ ತಿಂಗಳಲ್ಲಿ ಮತ್ತೆ ಭೂಮಿಗೆ ಹತ್ತಿರ ಬರಲಿದೆ.

ನಾಸಾ ಮಾಹಿತಿ ಪ್ರಕಾರ, ಈ ಕ್ಷುದ್ರಗ್ರಹವು 4.65 ಮಿಲಿಯನ್ ಮೈಲುಗಳ ಒಳಗೆ ಬಂದರೆ ಮತ್ತು ನಿರ್ದಿಷ್ಟ ಗಾತ್ರಕ್ಕಿಂತ ಹೆಚ್ಚಿದ್ದರೆ ಅದನ್ನು “ಸಂಭಾವ್ಯ ಅಪಾಯಕಾರಿ” ಕ್ಷುದ್ರಗ್ರಹ ಎಂದು ಪರಿಗಣಿಸಲಾಗುತ್ತದೆ. ಕ್ಷುದ್ರಗ್ರಹಗಳು ಬಾಹ್ಯಾಕಾಶ ಶಿಲಾಖಂಡರಾಶಿಗಳಾಗಿವೆ. ಈ ಕ್ಷುದ್ರಗ್ರಹದ ಅವಶೇಷಗಳು ವಿಶಾಲವಾಗಿ ಅನಂತವಾದ ಬಾಹ್ಯಾಕಾಶದಲ್ಲಿ ತಿರುಗುತ್ತಿರುತ್ತವೆ. ಕೆಲವು ಬೃಹತ್ ಬಾಹ್ಯಾಕಾಶ ಬಂಡೆಗಳು ಭೂಮಿಗೆ ಅಪಾಯಕಾರಿ ಎಂದು ವಿಜ್ಞಾನಿಗಳು ದಶಕಗಳಿಂದ ಎಚ್ಚರಿಸುತ್ತಾ ಬಂದಿದ್ದಾರೆ.

ಇನ್ನು ಕ್ಷುದ್ರಗ್ರಹಗಳಿಂದ ಭೂಮಿಯ ರಕ್ಷಣೆಗೆ ನಾಸಾ ಸೇರಿದಂತೆ ಅನೇಕ ಬಾಹ್ಯಾಕಾಶ ಸಂಸ್ಥೆಗಳು ಈ ಅಪಾಯಕಾರಿ ಕ್ಷುದ್ರಗ್ರಹಗಳಿಂದ ಭೂಮಿಯನ್ನು ರಕ್ಷಿಸಲು ಯೋಜನೆಯನ್ನು ರೂಪಿಸುತ್ತಿವೆ. ಈ ಯೋಜನೆಯ ಭಾಗವಾಗಿ, NASA ಇತ್ತೀಚೆಗೆ ತನ್ನ ಡಬಲ್ ಕ್ಷುದ್ರಗ್ರಹ ಮರುನಿರ್ದೇಶನ ಪರೀಕ್ಷೆ (DART) ಮಿಷನ್ ಅನ್ನು ಪ್ರಾರಂಭಿಸಿತು. ಭೂಮಿಯ ಕಡೆಗೆ ಹೋಗುವ ಕ್ಷುದ್ರಗ್ರಹವನ್ನು ಅದರ ಮಾರ್ಗದಿಂದ “ಚಲನಾ ಪ್ರಭಾವದ ಮೂಲಕ” ತಿರುಗಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದರರ್ಥ DART ಕ್ರಾಫ್ಟ್ ಕ್ಷುದ್ರಗ್ರಹದೊಂದಿಗೆ ಡಿಕ್ಕಿ ಹೊಡೆದು ಅದನ್ನು ತನ್ನ ಪಥದಿಂದ ಮರಳಿಸುವುದಾಗಿದೆ ಎಂದು ನಾಸಾ ಹೇಳಿದೆ.

Leave A Reply