ಮಗಳ ಮದುವೆ ಮಾಡಿ ಪತಿ ಮನೆಗೆ ಕಳುಹಿಸಿದ ಕೆಲ ಹೊತ್ತಲ್ಲೇ ಹೃದಯಾಘಾತದಿಂದ ಅಪ್ಪ ಸಾವು

Share the Article

ಮಡಿಕೇರಿ: ಪುತ್ರಿಯ ವಿವಾಹ ಮುಗಿಸಿ ಪತಿಯ ಮನೆಗೆ ಕಳುಹಿಸಿದ ಕೆಲವು ಹೊತ್ತಿನಲ್ಲೇ ತಂದೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಸೋಮವಾರ ಪೇಟೆ ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದಿದೆ.

ಕಿಬ್ಬೆಟ್ಟ ಗ್ರಾಮದ ಕೃಷಿಕ ಚಿನ್ನಪ್ಪ (60) ಮೃತ ವ್ಯಕ್ತಿ. ದ್ವಿತೀಯ ಪುತ್ರಿಯ ವಿವಾಹ ಸಮಾರಂಭವನ್ನು ಮುಗಿಸಿ ವಧೂವರರನ್ನು ಗೋಕಾಕ್‌ಗೆ ಕಳುಹಿಸಿದ ಅನಂತರ ಘಟನೆ ನಡೆದಿದೆ. ತತ್‌ಕ್ಷಣವೇ ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದರು.

Leave A Reply