ಮುಸ್ಲಿಂ ಯುವತಿಯೊಂದಿಗೆ ಪ್ರೀತಿ!! ಮದುವೆಗೆ ತಯಾರಾಗಿದ್ದ ದಿನವೇ ನಡೆಯಿತು ಹಿಂದೂ ಯುವಕನ ಬರ್ಬರ ಹತ್ಯೆ!!

ಹೈದರಾಬಾದ್ ನಲ್ಲಿ ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಹಿಂದೂ ಯುವಕನೊಬ್ಬನನ್ನು ನಡುರಸ್ತೆಯಲ್ಲೇ ಕೊಚ್ಚಿ ಕೊಲೆಗೈದ ಘಟನೆ ಮಾಸುವ ಮುನ್ನವೇ ಅಂತಹುದೇ ಘಟನೆಯೊಂದು ಮರುಕಳಿಸಿದೆ. ಹಿಂದೂ ಯುವಕನೋರ್ವ ಮುಸ್ಲಿಂ ಯುವತಿಯೊಂದಿಗೆ ಪ್ರೀತಿಯಲ್ಲಿ ಬಿದ್ದು, ಇನ್ನೇನು ಮದುವೆಯಾಗಲು ತಯಾರಾಗಿದ್ದ ಜೋಡಿಯ ಕನಸಿಗೆ ಯುವತಿಯ ಅಣ್ಣಂದಿರು ನರ ರಾಕ್ಷಸರಂತೆ ಕಾಡಿದ್ದು, ಪ್ರೀತಿಸಿದ ತಪ್ಪಿಗೆ ಯುವಕನನ್ನು ಗಂಭೀರ ಹಲ್ಲೆ ನಡೆಸಿ ಕೊಲೆಗೈದ ಘಟನೆಯೊಂದು ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದ್ದು, ಮೃತ ಯುವಕನನ್ನು ಬಿಹಾರ ಮೂಲದ ಮಿಥುನ್ ಠಾಕೂರ್ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಮೃತ ಯುವಕ ಮಿಥುನ್ ಕೆಲಸದ ನಿಮಿತ್ತ ರಾಜ್ ಕೋಟ್ ನ ಜಂಗಲೇಶ್ವರ ರಾಧಾ ಕೃಷ್ಣ ಸೊಸೈಟಿ ಬಳಿಯಲ್ಲಿ ವಾಸ್ತವ್ಯವಿದ್ದು, ಅದೇ ಪ್ರದೇಶದ ಸುಮಿಯಾ ಕಡಿವರ್ ಎನ್ನುವ ಮುಸ್ಲಿಂ ಯುವತಿಯೊಂದಿಗೆ ಕಳೆದ ಕೆಲ ತಿಂಗಳುಗಳ ಹಿಂದೆ ಪರಿಚಯವಾಗಿದ್ದು, ಅದೇ ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರೂ ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.


Ad Widget

Ad Widget

Ad Widget

ಘಟನೆ ನಡೆದ ದಿನ ಅಂದರೆ ಮೇ 09 ರಂದು ಜೋಡಿಯು ಮದುವೆಯಾಗಲು ನಿರ್ಧರಿಸಿದ್ದು, ಅದರಂತೆ ಮುಂಜಾನೆ ಮಿಥುನ್ ಯುವತಿಗೆ ಕರೆ ಮಾಡಿದ್ದ. ಅತ್ತ ಯುವತಿಯ ಅಣ್ಣ ಕರೆ ಸ್ವೀಕರಿಸಿದ್ದು, ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಯುವತಿಯ ಅಣ್ಣ ಹಾಗೂ ಇನ್ನಿಬ್ಬರು ಮಿಥುನ್ ತಂಗಿದ್ದ ಮನೆಗೆ ಬಂದಿದ್ದಾರೆ.

ಬಳಿಕ ಮಿಥುನ್ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದು, ಪರಿಣಾಮ ಮಿಥುನ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಒಂದೆರಡು ದಿನಗಳ ಜೀವನ್ಮರಣ ಹೋರಾಟದಲ್ಲಿ ಕೊನೆಯುಸಿರೆಳೆದಿದ್ದಾನೆ. ಇತ್ತ ಪ್ರಿಯಕರನ ಸಾವಿನ ಸುದ್ದಿ ತಿಳಿಯುತ್ತಲೇ ಯುವತಿಯೂ ಆತ್ಮಹತ್ಯೆಗೆ ಯತ್ನಿಸಿದ್ದು,ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

error: Content is protected !!
Scroll to Top
%d bloggers like this: