ಕಳೆದ 21 ವರ್ಷದಿಂದ ಹೆಂಡತಿಯ ಮೃತದೇಹದೊಂದಿಗೆ ಬದುಕುತ್ತಿರುವ ವ್ಯಕ್ತಿ!

ಕುಟುಂಬದ ವ್ಯಕ್ತಿಯೊಬ್ಬರು ಸತ್ತರೆ, ಕೆಲವೇ ಗಂಟೆಗಳಲ್ಲಿ ಅಂತ್ಯ ಸಂಸ್ಕಾರ ಮಾಡಿ ಅವ್ರ ದೇಹದ ಜತೆ ನೆನಪುಗಳನ್ನು ಕೂಡಾ ಸುಟ್ಟು ಬಿಡುವ ಜನರಿರುವಾಗ, ಥೈಲ್ಯಾಂಡ್ ನಿಂದ ಬೇರೆಯದೇ ಸುದ್ದಿ ಬಂದಿದೆ. ಬ್ಯಾಂಕಾಕ್‌ನ 72 ವರ್ಷದ ವ್ಯಕ್ತಿಯೊಬ್ಬರು ಪತ್ನಿಯ ಮೇಲಿನ ಪ್ರೀತಿಗೆ, ಆಕೆಯನ್ನು ಬಿಟ್ಟಿರಲಾಗದೆ 21 ವರ್ಷಗಳ ಕಾಲ ಪತ್ನಿಯ ಮೃತದೇಹದೊಂದಿಗೆ ಬದುಕಿದ್ದಾರೆ! ಈ ಅಪರೂಪದ ಘಟನೆಯ ವಿವರ ಇಲ್ಲಿದೆ ನೋಡಿ.

2001 ರಲ್ಲಿ ಚಾನ್ವಾಚರಕರ್ನ್‌ರ ಪತ್ನಿ 2001 ರಲ್ಲಿ ಅವರ ಪತ್ನಿ ಅಧಿಕ ರಕ್ತದೊತ್ತಡವನ್ನು ಅನುಭವಿಸಿದ ನಂತರ ನಿಧನರಾಗಿದ್ದರು. ನಿಧನರಾದಾಗಿನಿಂದ, ನಿವೃತ್ತ ಮಿಲಿಟರಿ ಅಧಿಕಾರಿ ಚಾರ್ನ್ ಜನವಾಚ್ಚಕಲ್(ಗಂಡ) ಅವರ ದೇಹವನ್ನು ಅವರ ಮನೆಯಲ್ಲಿ ಇರಿಸಲಾಯಿತು‌. ಎರಡು ದಶಕಗಳಿಗೂ ಹೆಚ್ಚು ಕಾಲ ಆಕೆಯ ಅವಶೇಷಗಳನ್ನು ಹಿಡಿದಿಟ್ಟುಕೊಂಡು ಅವರು ಬದುಕಿದರು‌.

ಈಗ ಚಾನ್ವಾಚರಕರ್ನ್ ತನ್ನ ಹೆಂಡತಿಯ ಅಂತ್ಯಕ್ರಿಯೆಯನ್ನು ನಡೆಸದೆ ತಾನು ಸತ್ತುಬಿಟ್ಟರೆ ಎಂದು ಚಿಂತೆಗೊಳಗಾಗಿ, ಆತನು ಹೆಂಡತಿಯ ಶವವನ್ನು ಅಲ್ಲಿನ ಒಂದು ಪ್ರತಿಷ್ಠಾನದ ಸಹಾಯದಿಂದ ಅಂತ್ಯಸಂಸ್ಕಾರ ಮಾಡಲು ಈಗ ನಿರ್ಧರಿಸಿದ್ದಾರೆ.

Leave A Reply