ಫ್ರಿಡ್ಜ್ ಸ್ವಿಚ್’ನ್ನು ಅನ್ ಪ್ಲಗ್ ಮಾಡಲು ಹೋದ ಮಹಿಳೆಗೆ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಮೃತ್ಯು|ಸಾವಿನ ಹಿಂದಿದೆ ಅನುಮಾನ!

ಬೆಂಗಳೂರು: ಕೈಯಲ್ಲಿ ನೀರಿನ ಜಗ್ ಹಿಡಿದುಕೊಂಡು ಫ್ರಿಡ್ಜ್ ಸ್ವಿಚ್’ನ್ನು ಅನ್ ಪ್ಲಗ್ ಮಾಡಲು ಹೋದ ಮಹಿಳೆಗೆ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ಕನಕಪುರ ರಸ್ತೆಯಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ಲತಾ (19) ಎಂದು ಗುರುತಿಸಲಾಗಿದೆ.


Ad Widget

Ad Widget

Ad Widget

ಸೌಭಾಗ್ಯ ಅವರು ಮನೆ ಸ್ವಚ್ಛಗೊಳಿಸುತ್ತಿದ್ದು, ಈ ವೇಳೆ ಜಗ್ ನಲ್ಲಿ ನೀರು ಹಿಡಿದುಕೊಂಡು ಫ್ರಿಡ್ಜ್’ನ್ನು ಅನ್ ಪ್ಲಗ್ ಮಾಡಲು ಹೋಗಿದ್ದಾರೆ. ಈ ವೇಳೆ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾರೆ. ಪತ್ನಿಯ ಶಬ್ಧ ಕೇಳಿಸಿಕೊಂಡ ಸುನಿಲ್ ಅವರು ಕೂಡಲೇ ಸ್ಥಳಕ್ಕೆ ಬಂದು ಕಾಲಿನಿಂದ ಫ್ರಿಡ್ಜ್’ನ್ನು ಒದ್ದು ಕೆಳಗೆ ಬಿದ್ದಿದ್ದಾರೆ.ಬಳಿಕ ರಕ್ಷಣೆಗೆ ಕೂಗಿದ ವೇಳೆ ನೆರೆ ಮನೆಯವರು ಸ್ಥಳಕ್ಕೆ ಧಾವಿಸಿ, ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ, ಇಬ್ಬರನ್ನೂ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ, ಲತಾ ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.ಮೃತರಿಗೆ 11 ತಿಂಗಳ ಹೆಣ್ಣು ಮಗುವಿದೆ ಎಂದು ತಿಳಿದುಬಂದಿದೆ.ಈ ನಡುವೆ ಲತಾ ಅವರ ತಾಯಿ ಸೌಭಾಗ್ಯ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು,ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ದೂರಿನಲ್ಲಿ ಸೌಭಾಗ್ಯ ಅವರು ಸುನೀಲ್ ಅವರ ಸಹೋದರನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಲತಾ ಹಾಗೂ ಸುನೀಲ್ ಸಹೋದರನ ನಡುವಿನ ಸಂಬಂಧ ಸರಿಯಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸುನೀಲ್ ಅವರ ಸಹೋದರನನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ.ಮಹಿಳೆ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ್ದಾರೆಂದು ಶಂಕಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಕಾರಣಗಳು ತಿಳಿದುಬಂದಿದೆ.

Leave a Reply

error: Content is protected !!
Scroll to Top
%d bloggers like this: