ಮೂರನೇ ಮಗುವಾದರೆ 11 ಲಕ್ಷ ರೂ. ಬಹುಮಾನದ ಆಫರ್
ವಿಶ್ವದ ಅತ್ಯಂತ ಹೆಚ್ಚು ಜನರಿರುವ ದೇಶ ಚೀನಾದಲ್ಲಿ ಜನಸಂಖ್ಯೆ ಪ್ರಮಾಣ ಕುಸಿಯುತ್ತಿದೆಯಂತೆ.
ಜನಸಂಖ್ಯಾ ಅಭಿವೃದ್ಧಿ ದರ ಬಹುತೇಕ ಶೂನ್ಯಕ್ಕೆ ತಲುಪಿದೆ. 2019ರಲ್ಲಿ ಇದ್ದ 140 ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಕಳೆದ ಒಂದು ವರ್ಷದಲ್ಲಿ ದೇಶದ ಜನಸಂಖ್ಯೆಯಲ್ಲಿ ಕೇವಲ 1 ಕೋಟಿಯಷ್ಟು ಮಾತ್ರವೇ ಏರಿಕೆ ಆಗಿದೆ ಎಂದು ಇತ್ತೀಚಿಗೆ ಬಿಡುಗಡೆ ಮಾಡಲಾದ 7ನೇ ರಾಷ್ಟ್ರೀಯ ಜನಗಣತಿ ವರದಿಯಲ್ಲಿ ತಿಳಿಸಲಾಗಿದೆ.
ಇದರಿಂದ ಚೀನಾದಲ್ಲಿ ಮುಂಬರುವ ವರ್ಷಗಳಲ್ಲಿ ಕಾರ್ಮಿಕರ ಸಮಸ್ಯೆ ಹಾಗೂ ಖರೀದಿ ಸಾಮರ್ಥ್ಯ ಇಳಿಕೆ ಆಗುವ ಆಪಾಯ ಎದುರಾಗಿದೆ. ಹೀಗಾಗಿ ಮೂರನೇ ಮಗು’ ಯೋಜನೆಯನ್ನು ಚೀನಾ ವ್ಯಾಪಕವಾಗಿ ಜಾರಿಗೆ ತರುತ್ತಿದೆ. ಮೂರನೇ ಮಗು ಪಡೆಯುವುದನ್ನು ಉತ್ತೇಜಿಸಲು ಸರ್ಕಾರವೇ ವಿವಿಧ ಯೋಜನೆ ತರುತ್ತಿದೆ. ಇದೀಗ ಮೂರನೇ ಮಗು ಪಡೆದರೆ ದಂಪತಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಖಾಸಗಿ ಕಂಪನಿಯೊಂದು ಆಫರ್ ಕೊಟ್ಟಿದೆ.