ಬಡರೈತನ ಮನೆಗೆ ವಜ್ರದ ರೂಪದಲ್ಲಿ ಎಂಟ್ರಿ ಕೊಟ್ಟ ಅದೃಷ್ಟ ಲಕ್ಷ್ಮೀ !

ಅದೃಷ್ಟ ಯಾವಾಗ ಯಾರಿಗೆ ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು, ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಅಥವಾ ವಜ್ರ, ಚಿನ್ನ ಸಿಕ್ಕಿ ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ.

ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಕಥೆ ಓದಿದರೆ ಎಂಥ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರರು.

ಮಧ್ಯಪ್ರದೇಶದ ರೈತನೊಬ್ಬನಿಗೆ ಅದೃಷ್ಟ ಲಕ್ಷ್ಮೀ ಖುಲಾಯಿಸಿದ್ದಾಳೆ. ವಜ್ರ ಗಣಿಗಾರಿಕೆಯಲ್ಲಿ ಪ್ರಖ್ಯಾತಿಯನ್ನು ಹೊಂದಿರುವ ಪನ್ನಾ ಜಿಲ್ಲೆಯಲ್ಲಿ ಲೀಸ್‌ಗೆ ಹಾಕಿಕೊಂಡಿದ್ದ ಗಣೆಯಲ್ಲಿ ರೈತನೊಬ್ಬನಿಗೆ 11.88 ಕ್ಯಾರೆಟ್ ಉತ್ತಮ ಗುಣಮಟ್ಟದ ವಜ್ರ ದೊರಕಿದೆ.

ಕೂಲಿ ಕೆಲಸ ಮಾಡುತ್ತಿದ್ದ ಸಣ್ಣ ರೈತ ಪ್ರತಾಪ್ ಸಿಂಗ್ ಯಾದವ್ ಅವರು ಜಿಲ್ಲೆಯ ಪನ್ನಾ ಜಿಲ್ಲೆ ಪಟ್ಟ ಪ್ರದೇಶದ ಗಣಿಯಿಂದ ಈ ವಜ್ರವನ್ನು ಪತ್ತೆಹಚ್ಚಿದ್ದಾರೆ ಎಂದು ವಜ್ರದ ಅಧಿಕಾರಿ ರವಿ ಪಟೇಲ್ ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಅಲ್ಲದೆ, ಉತ್ತಮ ಗುಣಮಟ್ಟದ ಈ ವಜ್ರವನ್ನು ಮುಂಬರುವ ಹರಾಜಿನಲ್ಲಿ ಮಾರಾಟಕ್ಕೆ ಇಡಲಾಗುವುದು ಮತ್ತು ಸರ್ಕಾರದ ಮಾರ್ಗಸೂಚಿಯಂತೆ ಬೆಲೆಯನ್ನು ನಿಗದಿಪಡಿಸಲಾಗುವುದು ಎಂದರು. ಸರ್ಕಾರದ ರಾಯಧನ ಮತ್ತು ತೆರಿಗೆಯನ್ನು ಕಡಿತಗೊಳಿಸಿದ ನಂತರ ರೈತನಿಗೆ ಉಳಿದ ಮೊತ್ತವನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಪನ್ನಾ ಜಿಲ್ಲೆಯಲ್ಲಿ 12 ಲಕ್ಷ ಕ್ಯಾರೆಟ್, ವಜ್ರದ ನಿಕ್ಷೇಪವಿದೆ ಎಂದು ಅಂದಾಜಿಸಲಾಗಿದೆ.

Leave A Reply

Your email address will not be published.