ಬಿ-ಖಾತಾ ಆಸ್ತಿ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಬಿಬಿಎಂಪಿ !!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಿ ಖಾತಾ ಆಸ್ತಿ ಮಾಲೀಕರಿಗೆ ಪಾಲಿಕೆ ವತಿಯಿಂದ ಸಿಹಿ ಸುದ್ದಿ ಇದೆ.‌ ಸರ್ಕಾರದ ಗ್ರೀನ್ ಸಿಗ್ನಲ್ ಗೆ ಕಾಯುತ್ತಿರುವ ಪಾಲಿಕೆ, ಸುಧಾರಣಾ ಶುಲ್ಕ ಪಾವತಿಸಿಕೊಂಡು ಬಿ ಖಾತಾ ಇರುವವರಿಗೆ ಎ ಖಾತಾ ನೀಡಲು ನಿರ್ಧರಿಸಿದೆ.‌

ಹೌದು.ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ 6.16 ಲಕ್ಷ ಸ್ವತ್ತುಗಳು ಬಿ ಖಾತಾದಲ್ಲಿವೆ.‌‌ ಬಿ ಯಿಂದ ಎ ಖಾತಾಗೆ ಸ್ವತ್ತುಗಳು ವರ್ಗಾವಣೆಗೊಂಡರೆ ಪಾಲಿಕೆಗೆ ಆದಾಯ ಕೂಡ ಹೆಚ್ಚಾಗಲಿದ್ದು, ಇದರಿಂದ 2,500 ಕೋಟಿಗೂ ಅಧಿಕ ಆದಾಯದ ನಿರೀಕ್ಷಿಸಲಾಗಿದೆ. ಈ ಸಂಬಂಧ ಶೀಘ್ರವೇ ಸರ್ಕಾರ ಮಾನದಂಡ ಪಟ್ಟಿ ಬಿಡುಗಡೆಯಾಗಲಿದ್ದು, ಬಿಬಿಎಂಪಿ ಚುನಾವಣೆಗೂ ಮೊದಲೇ ಖಾತಾ ವರ್ಗಾವಣೆ ಆರಂಭವಾಗಲಿದೆ.‌
ಪಾಲಿಕೆಯ ಕೇಂದ್ರ ಭಾಗದಲ್ಲಿ ಚದರ ಮೀಟರ್ ಗೆ 200 ಹಾಗೂ ಹೊರ ವಲಯದಲ್ಲಿ 250 ರೂಪಾಯಿ ನಿಗದಿ ಸಾಧ್ಯತೆ‌‌ ಇದೆ.‌ ಈ ದರ ನಿಗದಿಯಾದರೆ ನಗರದ ಒಳಗೆ 30/40 ಸೈಟ್ ಗೆ 22 ಸಾವಿರ ಹಾಗೂ ಹೊರ ಭಾಗದಲ್ಲಿ 27 ಸಾವಿರ ಶುಲ್ಕ ನಿಗದಿಯಾಗಲಿದೆ.‌


Ad Widget

Ad Widget

Ad Widget

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದಿದ್ದಾರೆ. ಸರ್ಕಾರದಿಂದ ಸ್ಪಷ್ಟ ಆದೇಶ ಬಂದ ನಂತರ ನಮ್ಮ ಅಧಿಕಾರಿಗಳಿಗೆ ನಿರ್ದೇಶನ ಕೊಡುತ್ತೇವೆ. ಬಿ ಖಾತಾ ಇರುವ ಒಟ್ಟು ಆಸ್ತಿಗಳು 6 ಲಕ್ಷಕ್ಕೂ ಅಧಿಕ ಇದ್ದು, ಅವುಗಳನ್ನು ಪರಿವರ್ತನೆ ಮಾಡುವ ದಿಕ್ಕಿನಲ್ಲಿ‌ ಕ್ರಮ ಕೈಗೊಳ್ಳಲಾಗುತ್ತಿದೆ. ಆಸ್ತಿ ಮಾಲೀಕರ ಬಳಿ ದಾಖಲೆ ಬಗ್ಗೆ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತದೆ ಎಂದಿದ್ದಾರೆ.‌

ನಗರದಲ್ಲಿ ಅಕ್ರಮ ಕಟ್ಟಡಗಳ ಕಡಿವಾಣಕ್ಕೆ ಇದು ಸಹಾಯ :

ಪಾಲಿಕೆ‌ಯ ಈ ನಿರ್ಧಾರದಿಂದ ಸಾಕಷ್ಟು ಸಹಾಯಕವಾಗಲಿದೆ. ಬಿ ಖಾತದಿಂದ ಎ ಖಾತ ಮಾಡುವುದರಿಂದ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಕಡಿವಾಣ ಬೀಳಲಿದೆ.‌ ಬಿ ಖಾತ ಸ್ವತ್ತಿನಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಕಡ್ಡಾಯವಲ್ಲ. ಅಲ್ಲದೇ ಎ ಖಾತಾ ಮಾಡಿದರೆ ನಿಗದಿ ಮಾಡಿದ್ದಕ್ಕಿಂತ ಅಧಿಕ ಅಂತಸ್ತು ನಿರ್ಮಾಣಕ್ಕೂ ಕಡಿವಾಣ ಬೀಳಲಿದೆ.‌

30/40 ಸ್ವತ್ತಿನಲ್ಲಿ ಗ್ರೌಂಡ್ ಫ್ಲೋರ್ ಸೇರಿದಂತೆ ಮೂರು ಅಂತಸ್ತಿಗೆ ಮಾತ್ರ ಅವಕಾಶ ಇರುತ್ತದೆ. ಆದರೆ ನಗರದಲ್ಲಿ 30/40 ಸೈಟ್ ನಲ್ಲಿ ಅದಕ್ಕೂ ಮೀರಿದ ಅಂತಸ್ತುಗಳ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಬಿ ಖಾತ ಸ್ವತ್ತು ಎ ಖಾತ ವ್ಯಾಪ್ತಿಗೆ ಒಳಪಟ್ಟರೆ ಸ್ವತ್ತಿನ ಮಾಲೀಕರಿಗೂ ಅನುಕೂಲವಾಗಲಿದೆ.‌ ಆದರೆ ಈ ಪ್ರಕ್ರಿಯೆಯಲ್ಲಿ ಪಾಲಿಕೆ ಅಧಿಕಾರಿಗಳು ಬಿಬಿಎಂಪಿಯ ಬೊಕ್ಕಸಕ್ಕೆ ನಷ್ಟ ಉಂಟು ಮಾಡದ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ.‌

Leave a Reply

error: Content is protected !!
Scroll to Top
%d bloggers like this: