ಬಾರ್ಬಿಗೊಂಬೆಯಂತೆ ಕಾಣಲು ಈಕೆ ಸರ್ಜರಿಗೆ ಖರ್ಚು ಮಾಡಿದ್ದು ಬರೋಬ್ಬರಿ 53 ಲಕ್ಷ | ಈ ಕೆಲಸ ಆಕೆಯನ್ನು ಕುಟುಂಬದಿಂದ ಮಾಡಿತು ದೂರ|

ಯಾವ ಹೆಣ್ಣಿಗೆ ತಾನೇ ಸುಂದರವಾಗಿ ಕಾಣಲು ಇಷ್ಟವಿಲ್ಲ. ಎಲ್ಲರೂ ಆಸೆ ಪಡುತ್ತಾರೆ. ತನ್ನತ್ತ ಎಲ್ಲರೂ ತಿರುಗಿ ನೋಡಬೇಕು, ತನ್ನ ಸೌಂದರ್ಯದ ಬಗ್ಗೆ ಹೊಗಳಬೇಕು ಎಂದು. ಆದರೆ ಆಸೆ ಪಡಬೇಕು, ಅತಿ ಆಸೆ ಪಡಬಾರದು. ಅಲ್ಲವೇ ? ಏಕೆಂದರೆ ಸುಂದರವಾಗಿ ಕಾಣಲು ಅನೈಸರ್ಗಿಕವಾಗಿ ಏನಾದರೂ ಮಾಡಲು ಹೋದರೆ ಎಡವಟ್ಟುಗಳು ಸಂಭವಿಸುವ ಎಷ್ಟೋ ನಿದರ್ಶನಗಳನ್ನು ನಾವು ಕಂಡಿದ್ದೇವೆ. ಇದಕ್ಕೊಂದು ಲೇಟೆಸ್ಟ್ ಉದಾಹರಣೆ ನಾವು ಈಗ ನಿಮಗೆ ನೀಡಲಿದ್ದೇವೆ.

ಆಸ್ಟ್ರಿಯಾದ ಮಾಡೆಲ್ ಒಬ್ಬರು ತಾನು ಬಾರ್ಬಿ ಗೊಂಬೆಯಂತೆ ಕಾಣುವಂತಾಗಬೇಕೆಂದು ಬಯಸಿ ಅದಕ್ಕಾಗಿ ಬೇಕಾದ ಸರ್ಜರಿ ಮಾಡಿಸಿಕೊಳ್ಳಲು ಬರೋಬ್ಬರಿ 53 ಲಕ್ಷ ರೂಪಾಯಿ ಖರ್ಚು ಮಾಡಿದ್ದಾಳೆ.


Ad Widget

Ad Widget

Ad Widget

21 ವರ್ಷದ ಮಾಡೆಲ್ ಜೆಸ್ಸಿ ಬನ್ನಿ, ಈ ರೀತಿಯ ಹುಚ್ಚಾಟ ಮಾಡಿದ್ದಾಳೆ. ಈಕೆಯ ಈ ಕೆಲಸ ಆಕೆಯನ್ನು ಆಕೆಯ ಕುಟುಂಬದಿಂದ ದೂರ ಮಾಡುವಂತೆ ಆಗಿದೆ. ಆಕೆಯ ಕುಟುಂಬದವರೇ ಆಕೆಯನ್ನೇ ತೊರೆದಿದ್ದಾರೆ. ಈ ವಿಚಾರವನ್ನು ಸ್ವತಃ ಜೆಸ್ಸಿ ಹೇಳಿಕೊಂಡಿದ್ದಾಳೆ.

ಈಕೆ ಬಾರ್ಬಿಯಂತೆ ಕಾಣಲು ಆಕೆ ತನ್ನ ಸ್ತನ, ಪೃಷ್ಠ ಮತ್ತು ತುಟಿಗಳು ದಪ್ಪ ಮಾಡಿಕೊಂಡಿದ್ದಾಳೆ. ಈ ಶಸ್ತ್ರಚಿಕಿತ್ಸೆ ಬಳಿಕ ಆಸ್ಟ್ರಿಯಾದ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿರುವ ಜೆಸ್ಸಿ, ನಾನು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವುದಕ್ಕೆ ನಮ್ಮ ಕುಟುಂಬದ ವಿರೋಧವಿತ್ತು. ಈಗ ಅವರ್ಯಾರೂ ನನ್ನೊಂದಿಗೆ
ಮಾತನಾಡುತ್ತಿಲ್ಲ, ನನ್ನ ಕರೆಯನ್ನು ಸ್ವೀಕರಿಸುತ್ತಿಲ್ಲ ಎಂದು ದುಃಖ ಹೇಳಿಕೊಂಡಿದ್ದಾಳೆ.

2018 ರಿಂದ ರೂಪ ಪರಿವರ್ತನೆ ಮಾಡಿಸಿಕೊಳ್ಳುತ್ತಿದ್ದು, ಸ್ತನಗಳು ದಪ್ಪಗೆ ಕಾಣುವಂತೆ ಸರ್ಜರಿ ಮಾಡಿಸಿಕೊಂಡಿರುವ ಈಕೆ, ಪೃಷ್ಠ ಮತ್ತು ತುಟಿಗಳೂ ದಪ್ಪ ಕಾಣುವ ರೀತಿಯಲ್ಲಿ ಕಾಸ್ಮೆಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳಂತೆ. ಈ ವಿಚಿತ್ರ ಚಿತ್ರಗಳನ್ನು ಈಕೆ ತನ್ನ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ. ಜನ ತರತರಹ ರೀತಿಯಲ್ಲಿ ಮಾತಾಡಿಕೊಳ್ಳುವುದು ಈಕೆಗೆ ಕಿರಿಕಿರಿ ತಂದಿರುವುದು ನಿಜ.

Leave a Reply

error: Content is protected !!
Scroll to Top
%d bloggers like this: