ಗೂಗಲ್ ಕ್ರೋಮ್ ಅಪ್ಡೇಟ್ ಮಾಡುವಂತೆ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಸೂಚನೆ
ನವದೆಹಲಿ : ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ಗೂಗಲ್ ಕ್ರೋಮ್ ಬಳಕೆದಾರರಿಗೆ ಉನ್ನತ ಮಟ್ಟದ ಬೆದರಿಕೆ ಬಗ್ಗೆ ಎಚ್ಚರಿಕೆ ನೀಡಿದೆ. ಸೈಬರ್ ಕ್ರೈಂ ನೋಡಲ್ ಏಜೆನ್ಸಿಯು ಡೆಸ್ಕ್ ಟಾಪ್ ಕ್ರೋಮ್ ಬ್ರೌಸರ್ನಲ್ಲಿ ಕೆಲವು ಪ್ರಮುಖ ದೌರ್ಬಲ್ಯಗಳನ್ನ ಎತ್ತಿ ತೋರಿಸಿದ್ದು, CERT-In ಕ್ರೋಮ್ ಬಳಕೆದಾರರು ತಕ್ಷಣವೇ ಬ್ರೌಸರ್ʼನ ಇತ್ತೀಚಿನ ಆವೃತ್ತಿಗೆ ನವೀಕರಿಸಬೇಕೆಂದು ಸೂಚಿಸಿದೆ.
ಗೂಗಲ್ ಕೂಡ ದೌರ್ಬಲ್ಯಗಳನ್ನ ಒಪ್ಪಿಕೊಂಡಿದ್ದು, ಸಾಫ್ಟ್ವೇರ್ ನವೀಕರಣದ ಮೂಲಕ ಪರಿಹಾರ ಬಿಡುಗಡೆ ಮಾಡಿದೆ.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಗೂಗಲ್, ‘ಬಳಕೆದಾರರು ನವೀಕರಿಸುವವರೆಗೆ ದೋಷ ವಿವರಗಳು ಮತ್ತು ಲಿಂಕ್ಗಳಿಗೆ ಪ್ರವೇಶವನ್ನ ನಿರ್ಬಂಧಿಸಬಹುದು. ಇತರ ಯೋಜನೆಗಳು ಇದೇ ರೀತಿ ಅವಲಂಬಿತವಾಗಿದ್ರೆ, ಥರ್ಡ್ ಪಾರ್ಟಿ ಲೈಬ್ರರಿಯಲ್ಲಿ ದೋಷ ಅಸ್ತಿತ್ವದಲ್ಲಿದ್ರೆ, ನಾವು ನಿರ್ಬಂಧಗಳನ್ನ ಉಳಿಸಿಕೊಳ್ಳುತ್ತೇವೆ’ ಎಂದಿದೆ.
ಸಮಸ್ಯೆ ಏನು?
101.0.4951.41 ಕ್ಕಿಂತ ಮುಂಚಿನ ಗೂಗಲ್ ಕ್ರೋಮ್ ಆವೃತ್ತಿಯು ಸಾಫ್ಟ್ವೇರ್ನಲ್ಲಿನ ಹೊಸ ದೋಷದಿಂದ ಪರಿಣಾಮ ಬೀರಿದೆ ಎಂದು ಏಜೆನ್ಸಿ ಹೈಲೈಟ್ ಮಾಡಿದೆ. ಈ ಬೆದರಿಕೆಯು ಪ್ರಾಥಮಿಕವಾಗಿ ಡೆಸ್ಕ್ ಟಾಪ್ ಬಳಕೆದಾರರಿಗೆ ಮಾತ್ರ. ಇನ್ನು ಈ ದೋಷವನ್ನು ಗೂಗಲ್ ಒಪ್ಪಿಕೊಂಡಿದೆ ಮತ್ತು ಕ್ರೋಮ್ ಬ್ಲಾಗ್ ಪೋಸ್ಟ್ನಲ್ಲಿ 30 ದೌರ್ಬಲ್ಯಗಳನ್ನು ಪಟ್ಟಿ ಮಾಡಿದೆ. ಸುಮಾರು ಏಳು ನ್ಯೂನತೆಗಳನ್ನ ‘ಉನ್ನತ’ ಬೆದರಿಕೆಗಳು ಎಂದು ವರ್ಗೀಕರಿಸಲಾಗಿದೆ.
ಈ ಉನ್ನತ ಮಟ್ಟದ ದೌರ್ಬಲ್ಯಗಳನ್ನು ಬಳಸಿಕೊಳ್ಳಬಹುದು ಮತ್ತು ರಿಮೋಟ್ ಅಟ್ಯಾಕರ್ ಅನಿಯಂತ್ರಿತ ಕೋಡ್ ಕಾರ್ಯಗತಗೊಳಿಸಲು ಮತ್ತು ಪ್ರತಿಯಾಗಿ ಸೂಕ್ಷ್ಮ ಮಾಹಿತಿಗೆ ಪ್ರವೇಶವನ್ನು ಪಡೆಯಲು ಅನುವು ಮಾಡಿಕೊಡಬಹುದು ಎಂದು ಸಿಇಆರ್ಟಿ-ಇನ್ ಮತ್ತಷ್ಟು ವಿವರಿಸಿದೆ. ಈ ದೋಷವು ಹ್ಯಾಕರ್ʼಗಳಿಗೆ ಭದ್ರತಾ ನಿರ್ಬಂಧಗಳನ್ನು ಬೈಪಾಸ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ.