ಉಪ್ಪಿನಂಗಡಿ: ಹೋಟೆಲ್ ನಲ್ಲಿ ಮಹಿಳೆಯ ಮೇಲೆ ಕೈ ಹಾಕಿ ವ್ಯಕ್ತಿಯಿಂದ ಅಸಭ್ಯ ವರ್ತನೆ, ಹಾಗೂ ದಾಂಧಲೆ: ಹೋಟೆಲ್ ಮಾಲಕರಿಂದ ದೂರು

ಹೊಟೇಲ್ ನಲ್ಲಿ ಊಟ ಮಾಡುತ್ತಿದ್ದ ಮಹಿಳಾ ಗ್ರಾಹಕಿಯ ಮೈ ಮೇಲೆ ಕೈ ಹಾಕಿ ಚುಡಾಯಿಸಿದ್ದು ಮಾತ್ರವಲ್ಲದೇ, ಪ್ರಶ್ನಿಸಿದ ಹೊಟೇಲ್ ಮಾಲಕ ಮತ್ತು ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿ ದಾಂಧಲೆ ನಡೆಸಿದ ಘಟನೆಯೊಂದು ಉಪ್ಪಿನಂಗಡಿಯಲ್ಲಿ ಸೋಮವಾರ ನಡೆದಿದೆ.

ಉಪ್ಪಿನಂಗಡಿ ಬಸ್ ನಿಲ್ದಾಣದ ಪರಿಸರದಲ್ಲಿನ ಹೊಟೇಲ್‌ನಲ್ಲಿ ವೇಣೂರು ಪರಿಸರದ ನಿವಾಸಿ ಪ್ರಶಾಂತ್ ದಾಂಧಲೆಗೈದ ಆರೋಪಿ.


Ad Widget

Ad Widget

Ad Widget

ಮಧ್ಯಾಹ್ನದ ಸಮಯದಲ್ಲಿ ಹೊಟೇಲಿಗೆಂದು ಬಂದ ಆರೋಪಿ ಊಟಕ್ಕೆ ಆರ್ಡರ್ ಕೊಟ್ಟಿದ್ದಾನೆ. ಆದರೆ ನಂತರ ಆತ ತನ್ನ ಸಮೀಪದ ಕುರ್ಚಿಯಲ್ಲಿ ಕುಳಿತಿದ್ದ ಮಹಿಳಾ ಗ್ರಾಹಕಿಯೋರ್ವರಿಗೆ ಚುಡಾಯಿಸಿದನೆನ್ನಲಾಗಿದೆ. ಇದರಿಂದ ಕಸಿವಿಸಿಗೊಂಡ ಮಹಿಳೆ ಹೊಟೇಲ್ ಮಾಲಕರಲ್ಲಿ ಹೋಗಿ ಹೇಳಿದ್ದಾಳೆ‌. ಕೂಡಲೇ ಮಧ್ಯ ಪ್ರವೇಶಿಸಿದ ಮಾಲಕರು ಆತನಿಗೆ ದಬಾಯಿಸಿ ಹೊಟೇಲಿನಿಂದ ಹೊರ ಹೋಗಲು ಹೇಳುತ್ತಾರೆ. ಇದರಿಂದ ಆಕ್ರೋಶಿತನಾದ ಆತ ಮತ್ತೆ ಹೊಟೇಲಿಗೆ ನುಗ್ಗಿ ಕಂಡ ಕಂಡವರಿಗೆ ಸೋಡಾ ಬಾಟ್ಲಿಯನ್ನು ಎಸೆಯಲಾರಂಭಿಸಿದ್ದಾನೆ. ಕುರ್ಚಿಯನ್ನು ಎತ್ತಿ ಎಸೆಯಲೆತ್ನಿಸಿದ ವೇಳೆ ನೆಲಕ್ಕೆ ಬಿದ್ದ ಆತನ ಮುಖಕ್ಕೆ ಗಾಯಗಳಾಗಿವೆ. ಆ ವೇಳೆ ಸ್ಥಳೀಯರು ಆತನನ್ನು ಹಿಡಿದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಹೊಟೇಲ್ ಮಾಲಕರು ಪೊಲೀಸರಿಗೆ ದೂರು ನೀಡಿದ್ದಾರೆ.

Leave a Reply

error: Content is protected !!
Scroll to Top
%d bloggers like this: