ಮಂಗಳೂರು : ನಾಗ ದೇವರ ಸಾನಿಧ್ಯ ಅಪವಿತ್ರಗೊಳಿಸಿದ ಪ್ರಕರಣ – ದುಷ್ಕರ್ಮಿಗಳ ಬಂಧನಕ್ಕೆ ರಾಮ್ ಸೇನಾ ಆಗ್ರಹ

Share the Article

ಪುರಾತನ ಕಾಲದಿಂದಲೂ ತುಳುನಾಡಿನ ಆರಾಧ್ಯ ದೇವರುಗಳಲ್ಲಿ ಒಂದಾದ ನಾಗದೇವರನ್ನು ಆರಾಧಿಸಿ ಬರುವ ಸ್ಥಳ ಇದಾಗಿದ್ದು, ಅಂಥ ದೇವರಿಗೆ ಅವಮಾನ ಮಾಡಿ ಅನಾಗರಿಕತೆ ಮೆರೆದ ಕಿಡಿಗೇಡಿಗಳ ಕೃತ್ಯವನ್ನು ರಾಮ್ ಸೇನಾ ತೀವ್ರವಾಗಿ ಖಂಡಿಸುತ್ತದೆ ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಮ್ ಸೇನಾ ಅಧ್ಯಕ್ಷ ಸುಶಿತ್ ಸಾಲ್ಯಾನ್ ಆಗ್ರಹಿಸಿದ್ದಾರೆ.

ಘಟನೆ ವಿವರ : ಕಟೀಲುಮಲ್ಲಿಗೆಯಂಗಡಿಯ ಪಡುಸಾಂತ್ಯ ಭಂಡಾರಿ ಮನೆತನದ ನಾಗಬನದಲ್ಲಿದ್ದ ನಾಗನ ಕಲ್ಲುಗಳನ್ನು ದುಷ್ಕರ್ಮಿಗಳು ಬೇರೆ ಜಾಗದಲ್ಲಿ ಎಸೆದಿದ್ದಾರೆ. ರವಿವಾರ ಬೆಳಗ್ಗೆ ಮನೆತನದ ವ್ಯಕ್ತಿಯೊಬ್ಬರು ಈ ಜಾಗದಲ್ಲಿ ತೆರಳುತ್ತಿದ್ದ ವೇಳೆ ನಾಗನ ಕಲ್ಲು ಆವರಣದಿಂದ ಹೊರಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಪರಿಶೀಲಿಸಿದಾಗ ನಾಗಬನದಲ್ಲಿ ಪ್ರತಿಷ್ಠೆ ಮಾಡಿದ ಜಾಗದಿಂದ 6 ನಾಗನ ಕಲ್ಲುಗಳನ್ನು ಎಸೆದು ಬೇರೆ ಬೇರೆ ಜಾಗದಲ್ಲಿ ಹಾಕಿರುವುದು ಗೊತ್ತಾಗಿದೆ.

Leave A Reply

Your email address will not be published.