ತನ್ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವವರಿಗೆ 3 ಸರಳ ನಿಯಮವನ್ನು ಮೊದಲೇ ರೂಪಿಸಿದ 92 ರ ವೃದ್ಧೆ!

ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಸಾವು ನಮ್ಮನ್ನು ದುಃಖಿತರನ್ನಾಗಿ ಮಾಡುವುದು ಸಹಜ. ಹಾಗೆನೇ ನಮ್ಮ‌ಪ್ರೀತಿಪಾತ್ರರನ್ನು ಕೂಡಾ ಕಳೆದುಕೊಳ್ಳುವುದು ಅತ್ಯಂತ ದುಃಖಕರ ಸನ್ನಿವೇಶ. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಜೀವನದ ದುಃಖದ ಕ್ಷಣಗಳಲ್ಲಿ ಒಂದಾಗಿದೆ. ಆದರೆ, ಇಲ್ಲೊಬ್ಬಾಕೆ 92ರ ವೃದ್ಧೆ ತನ್ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಂಬಂಧಿಕರಿಗೆ ಕೆಲವು ಉಲ್ಲಾಸದ ನಿಯಮಗಳನ್ನು ಮುಂಚಿತವಾಗಿಯೇ ಘೋಷಿಸಿದ್ದಾಳೆ.

ಇದು ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವೇ ಸೃಷ್ಟಿಸಿದೆ.

ಹೌದು, ಸಾಮಾಜಿಕ ಮಾಧ್ಯಮದಲ್ಲಿ ಈ ಸಂಬಂಧ ವೃದ್ಧೆ ಲಿಲಿಯನ್ ಡೋನಿಯಾಕ್ ವಿಡಿಯೋವೊಂದನ್ನು ಹರಿಬಿಟ್ಟಿದ್ದಾಳೆ. ಅಲ್ಲಿ ತನ್ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಜನರು ಜಾಸ್ತಿ ಅಳಬಾರದು ಮತ್ತು ಕುಡಿದು ಬರುವಂತೆ ಆಜ್ಞಾಪಿಸಿದ್ದಾಳೆ.

ಎಲ್ಲಾ ಅಜ್ಜಿಯರ ಸಿಇಒ ಎಂದು ತನ್ನನ್ನು ತಾನೇ ಕರೆದುಕೊಳ್ಳುವ ವೃದ್ಧೆ ಲಿಲಿಯನ್ ಡೋನಿಯಾಕ್, ತನ್ನ ಅಂತ್ಯಕ್ರಿಯೆಗೆ ಮೂರು ಸರಳ ನಿಯಮಗಳನ್ನು ಹೇಳಿದ್ದಾರೆ.

ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಜನರು ಅಳಬಹುದು. ಆದರೆ, ಹೆಚ್ಚು ಅಳಬಾರದು ಎಂದು ಹೇಳಿದ್ದಾಳೆ. ಎರಡನೆಯದಾಗಿ, ಬರ್ತಾ ಎಂಬ ವ್ಯಕ್ತಿ ನನ್ನ ಅಂತ್ಯಕ್ರಿಯೆಗೆ ಬರುವ ಹಾಗಿಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಬರ್ತಾ ಅವರು ಅನೇಕ ವರ್ಷಗಳ ಹಿಂದೆ ತನ್ನ ಜೀವನದಿಂದ ಹೊರಗುಳಿದ ವ್ಯಕ್ತಿ.

ಕೊನೆಯದಾಗಿ, ಅಂತ್ಯಕ್ರಿಯೆಗೆ ಆಗಮಿಸುವವರು ಮದ್ಯಪಾನ ಸೇವಿಸಿ ಬರುವಂತೆ ಒತ್ತಾಯಿಸಿದ್ದಾಳೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂ ಹಾಗೂ ಟಿಕ್ ಟಾಕ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಎರಡೂ ವೇದಿಕೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.

Leave A Reply

Your email address will not be published.