ಮುಸ್ಲಿಂ ಮಾಂಸ ವ್ಯಾಪಾರಿಗಳಿಗೆ ಬಿಗ್ ಶಾಕ್ ನೀಡಿರುವ ರಾಜ್ಯ ಸರ್ಕಾರ!

ಹಲಾಲ್ ಕಟ್ ವಿವಾದದ ಬೆನ್ನಲೆ, ಮುಸ್ಲಿಂ ಮಾಂಸ ವ್ಯಾಪಾರಿಗಳಿಗೆ ಬಿಗ್ ಶಾಕ್ ನೀಡಿರುವ ರಾಜ್ಯ ಸರ್ಕಾರ ಸ್ಲಾಟರ್ ಹೌಸ್ ಗಳಿಂದ ಕೆರೆಗಳಿಗೆ ತ್ಯಾಜ್ಯ ನೀರು ಬಿಡುತ್ತಿರುವ ಕಾರಣ ಬೆಂಗಳೂರಿನ ಪ್ರಮುಖ ಎರಡು ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಿಬಿಎಂಪಿಗೆ ನೋಟೀಸ್ ನೀಡಿದೆ.

ಪ್ರತಿ ದಿನ 5 ಸಾವಿರ ಕುರಿ, ಮೇಕೆ, 100 ಕ್ಕೂ ಅಧಿಕ ಎಮ್ಮೆಗಳನ್ನ ವಧೆ ಮಾಡುತ್ತಿದ್ದ ಬೆಂಗಳೂರಿನ ಕೆ.ಆರ್ ಮಾರ್ಕೆಟ್ ಹಾಗೂ ಫ್ರೇಜರ್ ಟೌನ್ ಬಳಿ ಇರುವ ಎರಡು ಸ್ಲಾಟರ್ ಹೌಸ್ ಗಳು ಅದರ ಮಾಂಸಗಳನ್ನ ಬೇರೆ ಬೇರೆ ಕಡೆ ಸರಬರಾಜು ಮಾಡುವ ಕೇಂದ್ರವಾತ್ತು.ಬೆಂಗಳೂರಿನಲ್ಲಿ ಅನುಮತಿ ಪಡೆದಿರುವ ಚಿಕನ್ ಮಟನ್ ಅಂಗಡಿಗಳ ಸಂಖ್ಯೆ 3 ಸಾವಿರ ಇದ್ದು ಶಾಪ್ ಗಳನ್ನ ಕ್ಲೋಸ್‌ ಮಾಡಲು ಬಿಬಿಎಂಪಿ ತಯಾರಿಯಲ್ಲಿದೆ ಎನ್ನಲಾಗಿದೆ.

ನೋಟಿಸ್‌ ನಲ್ಲಿ, ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿರ್ದೇಶನದಂತೆ, ಕೆಎಸ್‌ಪಿಸಿಬಿ ಮತ್ತು ಬಿಡಬ್ಲ್ಯೂಎಸ್‌ಎಸ್‌ಬಿ ಅಧಿಕಾರಿಗಳನ್ನೊಳಗೊಂಡ ಬೆಳ್ಳಂದೂರು ಜಲಾನಯನ ಪ್ರದೇಶದ ಜಂಟಿ ತಪಾಸಣೆ ನಡೆಸಲಾಯಿತು ಮತ್ತು ನಿಮ್ಮ ಆವರಣದಿಂದ ಸಂಸ್ಕರಿಸದ ತ್ಯಾಜ್ಯವನ್ನು ನೇರವಾಗಿ ಸ್ಟ್ರೋಮ್ ವಾಟರ್ ಡ್ರೈನ್‌ಗೆ ಬಿಡಲಾಗುತ್ತಿದೆ ಎಂದು ಕಂಡುಬಂದಿದೆ.ಸಂಸ್ಕರಿಸದ ಈ ತ್ಯಾಜ್ಯಗಳು ಅಂತಿಮವಾಗಿ ಬೆಳ್ಳಂದೂರು ಸರೋವರವನ್ನು ತಲುಪುತ್ತವೆ, ಇದರಿಂದಾಗಿ ಕೆರೆಯ ಮಾಲಿನ್ಯ ಉಂಟಾಗುತ್ತದೆ’ಎಂದು ತಿಳಿಸಿತ್ತು.

ಪಶುಸಂಗೋಪನಾ ಜಂಟಿ ನಿರ್ದೇಶಕ, ಬಿಬಿಎಂಪಿ, ಡಿಟಿ ಬಾಲಾಜಿ ಅವರ ಸಮ್ಮುಖದಲ್ಲಿ ಅಧಿಕಾರಿಗಳ ತಂಡವು ದೊಡ್ಡ ರೆಫರೆನ್ಸ್ (ಎ) ತೋರಿಸಿ ಇಎಸ್ 29/12/2021 ಅನ್ನು ಪರಿಶೀಲಿಸಿದ್ದು,ಕಸಾಯಿಖಾನೆ ತ್ಯಾಜ್ಯವನ್ನು ಚರಂಡಿಗೆ ಬಿಡುವುದರಿಂದ ಕೆರೆಗಳು ಮತ್ತು ಜಲಮೂಲಗಳ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದು ಗುರುತಿಸಿದ್ದಾರೆ. ತ್ಯಾಜ್ಯನೀರು ಅಂತಿಮವಾಗಿ ಬೆಳ್ಳಂದೂರು ಟ್ಯಾಂಕ್‌ಗೆ ತಲುಪುವ ಮೂಲಕ ಟ್ಯಾಂಕ್‌ ಸಂಪೂರ್ಣ ಮಾಲಿನ್ಯಗೊಂಡು ಹಾಳಾಗುತ್ತದೆ. ಅಕ್ರಮವಾಗಿ ತ್ಯಾಜ್ಯಾ ನೀರನ್ನು ಬಿಟ್ಟರೆ ಅಂತವರ ಮೇಲೆ 1974ರ ಸೆಕ್ಷನ್ 25 ಮತ್ತು 26 ಮತ್ತು, 1974 ರ ಸೆಕ್ಷನ್ 44 ರ ಅಡಿಯಲ್ಲಿ ಕ್ರಮವನ್ನು ಜರುಗಿಸಬಹುದಾಗಿದೆ ಎಂದು ತಿಳಿಸಿದೆ.

ನೀವು ತ್ಯಾಜ್ಯವನ್ನು ಸುರಿಯುವುದನ್ನು ಮುಂದುವರೆಸುತ್ತಿರುವುದರಿಂದ ಮತ್ತು ನಿಮ್ಮ ಆವರಣದಿಂದ ಸಂಸ್ಕರಿಸದ ತ್ಯಾಜ್ಯಗಳನ್ನು ಹೊರಹಾಕುವುದರಿಂದ ಅಂತಿಮವಾಗಿ ಅವು ಜಲಮೂಲಗಳನ್ನು ಸೇರುತ್ತದೆ, ಇದರ ಪರಿಣಾಮವಾಗಿ ಪರಿಸರದ ವಿವಿಧ ಕ್ಷೇತ್ರಗಳಿಗೆ ನಿಯಮಿತವಾಗಿ ಮಾಲಿನ್ಯ ಉಂಟಾಗುತ್ತದೆ, ನಿಮ್ಮ ಕಡೆಯಿಂದ ಅಂತಹ ಕ್ರಮವು ನೀರಿನ ಸೆಕ್ಷನ್ 25 ಮತ್ತು 26 ರ ಅಡಿಯಲ್ಲಿ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ.

Leave A Reply

Your email address will not be published.