ವಧುವನ್ನು ಮದುವೆಯಾದ ವರನ ಸಹೋದರಿ!!

ಮದುವೆ ಎಂಬುದು ಪ್ರತಿಯೊಂದು ಹುಡುಗ-ಹುಡುಗಿಯ ಸುಂದರವಾದ ಕ್ಷಣ.ಇದು ವಿಭಿನ್ನ ಪದ್ಧತಿಯಿಂದ ಕೂಡಿದ್ದು, ಅವರವರ ಸಂಪ್ರದಾಯಕ್ಕೆ ತಕ್ಕಂತೆ ಇರುತ್ತದೆ. ಹಿಂದಿನ ಕಾಲಕ್ಕೆ ಹೋಲಿಸಿದರೆ ಇಂದಿನ ಪದ್ಧತಿಯೇ ಬೇರೆಯಾಗಿದೆ. ಆದರೆ ಸಾಮಾನ್ಯವಾಗಿ ನಾವು ನೋಡುವ ಪ್ರಕಾರ ಮದುವೆ ಎಂಬುದು ವರ ಹಾಗೂ ವಧುವಿನ ನಡುವೆ ನಡೆಯುತ್ತೆ. ಆದ್ರೆ ಇಲ್ಲೊಂದು ಕಡೆ ವರನ ಸಹೋದರಿ ವಧುವನ್ನು ಮದುವೆ ಆಗಿದ್ದಾಳೆ!

ಈ ಗಮನ ಸೆಳೆದ ವಿಚಿತ್ರ ವಿವಾಹ ಮಹೋತ್ಸವ ನಡೆದಿದ್ದು ಗುಜರಾತಿನ ಛೋಟಾ ಉದೇಪುರ್ ಜಿಲ್ಲೆಯಲ್ಲಿ.ಹೌದು.ಇದು ಅಚ್ಚರಿಯಾದ್ರೂ ಸತ್ಯ.ವರನ ಬದಲು ಮಂಟಪಕ್ಕೆ ಬಂದ ವರನ ಸಹೋದರಿ, ವಧುವನ್ನು ಮದುವೆಯಾಗಿ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾಳೆ.ಅಷ್ಟಕ್ಕೂ ವರನ ಸಹೋದರಿ ತನ್ನ ಅತ್ತಿಗೆಯನ್ನು ಮದುವೆ ಆಗಲು ಕಾರಣ ಏನು ಗೊತ್ತಾ!?

ವರನ ಗ್ರಾಮದಲ್ಲಿ ವರನ ತಂಗಿ ಮದುವೆಗೆ ಹೋಗುವ ಸಂಪ್ರದಾಯವಿದ್ದು,ಮೆರವಣಿಗೆ ಮಾತ್ರವಲ್ಲ, ತಂಗಿ ವಧುವಿನ ಜೊತೆ ಮಂಟಪಕ್ಕೆ ಕೂಡ ಹೋಗುವುದಲ್ಲದೆ ಎಲ್ಲ ಮದುವೆ ಸಂಪ್ರದಾಯವನ್ನು ಆಕೆಯೇ ಪೂರ್ತಿಗೊಳಿಸುವುದು. ನಂತರ ಅತ್ತಿಗೆ ಜೊತೆ ವರನ ಮನೆಗೆ ಬರುವ ಸಂಪ್ರದಾಯ ಇಲ್ಲಿದ್ದು.

ವರದಿಗಳ ಪ್ರಕಾರ, ಅಂಬಲ ಗ್ರಾಮದ ಹರಿಸಿಂಗ್ ರೈಸಿಂಗ್ ರಥ್ವಾ ಅವರ ಪುತ್ರ ನರೇಶ್ ಇತ್ತೀಚೆಗೆ ಫೆರ್ಕುವ ಗ್ರಾಮದ ವಜಲಿಯಾ ಹಿಮ್ತಾ ರಥ್ವಾ ಅವರ ಪುತ್ರಿ ಲೀಲಾ ಅವರನ್ನು ವಿವಾಹವಾಗಿದ್ದಾರೆ. ಆದರೆ ನರೇಶ್ ಅಂಬಾಲದಿಂದ ಮೆರವಣಿಗೆಯಲ್ಲಿ ಹೋಗಲಿಲ್ಲ.ಬದಲಿಗೆ ಆತನ ಸಹೋದರಿ ಮೆರವಣಿಗೆ ಏರಿದ್ದಳು. ಇದರ ಹಿಂದೆ ಅವರ ಹಳ್ಳಿಯ ಸಂಪ್ರದಾಯವಿದ್ದು,ಇದನ್ನು ಬುಡಕಟ್ಟು ಸಮಾಜದ ಜನರು ಈಗಲೂ ಸಹ ಗೌರವಿಸುತ್ತಿದ್ದಾರೆ.

ಈ ರೀತಿ ಮದುವೆಯಾಗುವುದರ ಹಿಂದಿನ ನಂಬಿಕೆಯೆಂದರೆ ಅಂಬಲ, ಸುರ್ಖೇಡ ಮತ್ತು ಸನದ ಗ್ರಾಮಗಳ ಆರಾಧ್ಯ ದೈವಗಳು ಭರಮದೇವ ಮತ್ತು ಖೂನಪಾವ. ಅವರನ್ನು ಬುಡಕಟ್ಟು ಸಮಾಜದ ಆರಾಧ್ಯ ದೇವರುಗಳೆಂದು ಪರಿಗಣಿಸಲಾಗಿದೆ. ಭರಮದೇವ ಬ್ರಹ್ಮಚಾರಿ ದೇವರು ಎಂಬುದು ಸ್ಥಳೀಯ ಜನರ ನಂಬಿಕೆ. ಆದುದರಿಂದ ಈ ಗ್ರಾಮದ ಹುಡುಗರು ಮದುವೆ ಮೆರವಣಿಗೆಯಲ್ಲಿ ಪಾಲ್ಗೊಂಡರೆ ಆ ದೇವರ ಕೋಪಕ್ಕೆ ಗುರಿಯಾಗುತ್ತಾರೆ. ಅವರ ಜೀವನದಲ್ಲಿ ಏನಾದರೂ ಕೆಟ್ಟದು ಸಂಭವಿಸುತ್ತದೆ ಎಂದು ಅಲ್ಲಿನ ಜನರು ನಂಬಿದ್ದಾರೆ. ದೇವರ ಕೋಪದಿಂದ ತಪ್ಪಿಸಿಕೊಳ್ಳಲು, ವರನ ಸಹೋದರಿ ಮದುವೆ ಸಂಪ್ರದಾಯವನ್ನು ನೆರವೇರಿಸುತ್ತಾಳೆ. ಮೆರವಣಿಗೆ ಸೇರಿದಂತೆ ಎಲ್ಲ ಪದ್ಧತಿ ಮುಗಿಸಿ, ನವ ವಧುವನ್ನು ಮನೆಗೆ ತರುವ ಜವಾಬ್ದಾರಿ ಆಕೆ ಮೇಲಿರುತ್ತದೆ.

ಕೆಲ ವರ್ಷಗಳ ಹಿಂದೆ ಮೂವರು ಯುವಕರು ಈ ಸಂಪ್ರದಾಯವನ್ನು ಬದಿಗೊತ್ತಿ ಹೊಸ ಬದಲಾಣೆ ತರಲು ಯತ್ನಿಸಿದ್ದರು.ಆದ್ರೆ ಅದೇ ತಪ್ಪಾಯ್ತು ಎನ್ನುತ್ತಾರೆ ಗ್ರಾಮಸ್ಥರು.ಯಾಕೆಂದರೆ ಸಂಪ್ರದಾಯ ಮುರಿಯಲು ಹೋದವರು ಹೆಚ್ಚು ದಿನ ಬದುಕಲಿಲ್ಲವಂತೆ. ಮೂವರೂ ಸಾವನ್ನಪ್ಪಿದ್ದಾರೆ. ಹಾಗಾಗಿ ಮತ್ತೆ ಅದೇ ಸಂಪ್ರದಾಯದಲ್ಲಿ ಈ ಗ್ರಾಮದಲ್ಲಿ ಮದುವೆಗಳು ನಡೆಯಲಾರಂಭಿಸಿವೆ. ದೇವರ ಕೋಪಕ್ಕೆ ಗುರಿಯಾಗದೆ ಮದುವೆ ಮುಗಿಸಿಕೊಂಡು, ಎಲ್ಲರ ಸುರಕ್ಷತೆ ಕಾಪಾಡುವುದಕ್ಕಾಗಿ ಜನರು ಈ ಪದ್ಧತಿಯನ್ನು ಇಂದಿಗೂ ಚಾಲ್ತಿಯಲ್ಲಿ ಇರಿಸಿದ್ದಾರೆ.

Leave A Reply

Your email address will not be published.