ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಅನ್ನೋ ಗೌರವಕ್ಕೆ ಪಾತ್ರವಾಗಿದ್ದ 119 ವರ್ಷ ವಯಸ್ಸಿನ ಅಜ್ಜಿ ಇನ್ನಿಲ್ಲ!

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಅನ್ನೋ ಗೌರವಕ್ಕೆ ಪಾತ್ರವಾಗಿದ್ದ ಜಪಾನ್‌ನ 119 ವರ್ಷ ವಯಸ್ಸಿನ ಅಜ್ಜಿ ಕೇನ್‌ ಟನಾಕಾ ಇಹಲೋಕ ತ್ಯಜಿಸಿದ್ದಾರೆ.

1903ರ ಜನವರಿ 2ರಂದು ಕೇನ್‌ ಟನಾಕಾ ಅವರು ಜನಿಸಿದ್ದರು.ಭೂಮಿಯ ಮೇಲೆ ಹೆಚ್ಚು ಕಾಲ ಬದುಕಿದ್ದ ಎರಡನೇ ವ್ಯಕ್ತಿ ಅನ್ನೋ ಹಿರಿಮೆಗೆ ಇವ್ರು ಪಾತ್ರವಾಗಿದ್ದರು.

ಮೊದಲ ಸ್ಥಾನದಲ್ಲಿ ಫ್ರಾನ್ಸ್‌ನ ಜಾನೆ ಕೆಲ್ಮಂಟ್‌ ಇದ್ದು,ಇವರು 1875 ರಲ್ಲಿ ಹುಟ್ಟಿ1997ರಲ್ಲಿ ಮೃತಪಟ್ಟಿದ್ದು ಸುಮಾರು 122 ವರ್ಷಗಳ ಕಾಲ ಬದುಕಿದ್ರು. ಇವರ ನಂತರ ಅತಿ ಹಿರಿಯ ಜೀವಿ ಅಂತ ಕರೆಸಿಕೊಂಡಿದ್ದ ತನಾಕ ಗಿನ್ನಿಸ್‌ ವಲ್ಡ್‌ ಬುಕ್ ರೆಕಾರ್ಡ್‌ಗೂ ಸೇರಿದ್ರು. ಈಗ ಕೊನೆಯುಸಿರೆಳೆದಿದ್ದಾರೆ. ಅಂದ್ಹಾಗೆ ಇವರ ನಂತರ ಈಗ ಫ್ರೆಂಚ್‌ ಮಹಿಳೆ ಲುಕಿಲ್‌ ರಂಡನ್‌ ಸಧ್ಯ ವಿಶ್ವದ ಹಿರಿಯ ಮನುಷ್ಯ ಜೀವಿ. 1904 ರಲ್ಲಿ ಜನಿಸಿರೋ ಅವರಿಗೆ ಈಗ 118ರ ಪ್ರಾಯ.

ಫುಕುವೋಕಾ ನಗರದ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಯಿಂದಾಗಿ ಟನಾಕಾ ಅವರು ಕೊನೆಯುಸಿರೆಳೆದರು ಎಂದು ಜಪಾನ್‌ ಮಾಧ್ಯಮಗಳು ವರದಿ ಮಾಡಿವೆ.

Leave A Reply

Your email address will not be published.