ಅಬ್ಬಬ್ಬಾ!!! ವಿಷಕಾರಿ ಹಾವಿಗೇ ಮುತ್ತಿಟ್ಟ ಯುವತಿ! ಎಲ್ಲರ ಎದೆಯಲ್ಲಿ ಭಯ ಮೂಡಿಸುವ ದೃಶ್ಯ!

ಹಾವು ನೋಡಿದ ಕೂಡಲೇ, ಅಥವಾ ಅಲ್ಲಿ ಹಾವಿದೆ ಎಂದು ತಮಾಷೆಗೆ ಹೇಳಿದರೂ ಒಂದು ಕ್ಷಣ ಎದೆ ಧಬ್ ಎಂದಂತಾಗುತ್ತದೆ. ಹಾವುಗಳು ನಮ್ಮಲ್ಲಿ ಮೂಡಿಸಿರುವ ಭಯ ಅಂತಹದ್ದು. ಈ ಭೂಮಿಯಲ್ಲಿ ಕಂಡು ಬರುವ ಅಪಾಯಕಾರಿ ಜೀವಿಗಳಲ್ಲಿ ಹಾವುಗಳೂ ಕೂಡಾ ಒಂದು. ಹೀಗಾಗಿ, ವಿಷಕಾರಿಯಾಗಲಿ, ವಿಷವಿಲ್ಲದ ಹಾವೇ ಆಗಲಿ ಮೊದಲು ಹಾವನ್ನು ಕಂಡ ತಕ್ಷಣ ಭಯ ಆಗುವುದು ಖಂಡಿತ.

ಹಾವುಗಳ ಕಡಿತದಿಂದಲೇ ಜೀವ ಕಳೆದುಕೊಂಡವರೂ ತುಂಬಾ ಜನ ಇದ್ದಾರೆ. ಆದರೆ, ಒಂದಷ್ಟು ಮಂದಿಗೆ ಹಾವುಗಳೆಂದರೆ ಎಳ್ಳಷ್ಟೂ ಭಯವಿಲ್ಲ. ಸಾಕಷ್ಟು ಉರಗ ಪ್ರೇಮಿಗಳು ವಿಷಕಾರಿ ಹಾವುಗಳನ್ನೂ ಬರಿಗೈಯಲ್ಲಿ ಹಿಡಿದು ರಕ್ಷಣೆ ಮಾಡುವುದನ್ನು ನಾವು ನೋಡಿದ್ದೇವೆ. ಸೋಶಿಯಲ್ ಮೀಡಿಯಾದಲ್ಲೂ ಸದಾ ಇಂತಹ ದೃಶ್ಯಗಳು ಆಗಾಗ ಕಾಣಸಿಗುತ್ತವೆ. ಆದರೆ, ಕೆಲವು ಮಂದಿ ಹಾವುಗಳ ಜೊತೆ ಎಷ್ಟು ಭಯನೇ ಇಲ್ಲದ ರೀತಿ ಇರುತ್ತಾರೆ ಎಂದರೆ ಹಾವಿಗೆ ಮುತ್ತಿಕ್ಕುವುದಕ್ಕೂ ಹಿಂದೆ ಮುಂದೆ ನೋಡುವುದಿಲ್ಲ. ಅದಕ್ಕೆ ಸಾಕ್ಷಿ ಈ ದೃಶ್ಯ.

ಈ ವೀಡಿಯೋದಲ್ಲಿ ಯುವತಿಯೊಬ್ಬಳು ಯಾವುದೇ ಭಯವಿಲ್ಲದೆ ವಿಷಕಾರಿ ಹಾವಿಗೆ ಮುತ್ತಿಕ್ಕುವ ದೃಶ್ಯವಿದೆ. ಯಾವುದೇ ಅಂಜಿಕೆ ಇಲ್ಲದೆ ಹಾವಿನ ಬಳಿ ಬರುವ ಈ ಯುವತಿ ಹಾವಿನ ಹೆಡೆಗೆ ಮುತ್ತಿಕ್ಕುವುದನ್ನು ಇಲ್ಲಿ ನೋಡಬಹುದಾಗಿದೆ. ಎರಡೆರಡು ಸಲ ಈ ಯುವತಿ ಹಾವಿನ ಸನಿಹಕ್ಕೆ ಹೋಗಿ ಮುತ್ತಿಕ್ಕುತ್ತಾಳೆ. ಈ ದೃಶ್ಯವನ್ನು ನೋಡುವಾಗಲೇ ದಿಗಿಲಾಗುತ್ತದೆ. ಅಚ್ಚರಿ ಎಂದರೆ ಈ ಯುವತಿ ಹೀಗೆ ಮಾಡಿದಾಗಲೂ ಹಾವು ಯಾವುದೇ ರೀತಿಯಲ್ಲಿ ತೊಂದರೆ ಕೊಡುವುದಿಲ್ಲ.

ಸಹಜವಾಗಿಯೇ ಈ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಸಾಕಷ್ಟು ವೀಕ್ಷಣೆಯನ್ನೂ ಈ ವಿಡಿಯೋದಲ್ಲಿದೆ. ಜೊತೆಗೆ, ಈ ದೃಶ್ಯ ನೆಟ್ಟಿಗರಲ್ಲಿ ಚರ್ಚೆಯನ್ನೂ
ಹುಟ್ಟುಹಾಕಿದೆ. ಇದೊಂದು ಅಪಾಯಕಾರಿ ಸಾಹಸ
ಹೀಗಾಗಿ, ಯಾರೂ ತಮಾಷೆಗೆ ಕೂಡಾ ಇಂತಹ
ಪ್ರಯತ್ನ ಮಾಡಲು ಹೋಗಬೇಡಿ…

https://www.instagram.com/p/CayWBzOLoJ-/?utm_source=ig_embed&utm_campaign=embed_video_watch_again
Leave A Reply