ಪತ್ನಿಯ ಸಾವಿನಿಂದ ಮನನೊಂದು ಚಿತೆಗೆ ಹಾರಿದ ಪತಿ!! ಅದೃಷ್ಟವಶಾತ್ ಅಪಾಯದಿಂದ ಪಾರು

0 12

ಆತ್ಮಹತ್ಯೆ ಮಾಡಿಕೊಂಡ ಪತ್ನಿಯ ಶವ ಅಂತಾಸಂಸ್ಕಾರದ ವೇಳೆ ಮಾನಸಿಕ ಖಿನ್ನತೆಗೊಳಗಾದ ಪತಿಯೂ ಚಿತೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ಉತ್ತರಪ್ರದೇಶದ ಮಹೋಬ್ಯಾ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಉಮಾ ಎನ್ನಲಾಗಿದ್ದು, ಚಿತೆಗೆ ಹಾರಲು ಯತ್ನಿಸಿದ ಪತಿಯನ್ನು ಬ್ರಿಜೇಶ್ ಎಂದು ಗುರುತಿಸಲಾಗಿದೆ.

ಬ್ರಿಜೇಶ್ ಪತ್ನಿ ಉಮಾ ಪತಿಯೊಂದಿಗೆ ಹಣ ಕೇಳಿದ್ದು ಮರುದಿನ ಕೊಡುತ್ತೇನೆ ಎಂದ ಮಾತ್ರಕ್ಕೆ ಕೋಪಗೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಕೂಡಲೇ ಉಮಾ ಳನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾಳೆ.

ಇತ್ತ ಉಮಾ ಕುಟುಂಬಸ್ಥರು ಪತಿ ಹಾಗೂ ಪತಿ ಮನೆಯವರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ವರದಕ್ಷಿಣೆ ಕಿರುಕುಳ ನೀಡಿದಲ್ಲದೆ, ಉಮಾಳನ್ನು ಕೊಂದು ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಸದ್ಯ ಇದೆಲ್ಲದರಿಂದ ಮಾನಸಿಕವಾಗಿ ನೊಂದ ಪತಿ ಬ್ರಿಜೇಶ್, ತಾನೂ ಆಕೆಯೊಂದಿಗೆ ಸಾಯುತ್ತೇನೆಂದು ಚಿತೆಗೆ ಹಾರಲು ಯತ್ನಿಸಿ, ನೆರೆದವರ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದೆ.

Leave A Reply