ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ!

ಕೊರೊನಾ ಮಾಹಾಮಾರಿ ಕಳೆದ ಎರಡು ವರ್ಷದಲ್ಲಿ ಹಲವು ಮಂದಿಯ ಜೀವನದಲ್ಲಿ ಆಟ ಆಡಿ, ಹಲವರ ಜೀವ ಕಿತ್ತುಕೊಂಡಿದೆ. ಈ ಮಹಾಮಾರಿಯ ಕಾರಣದಿಂದ ಎಷ್ಟೋ ಮಕ್ಕಳು ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥರಾಗಿದ್ದಾರೆ. ಈ ಕಾರಣದಿಂದಾಗಿಯೇ ಕೇಂದ್ರ ಸರಕಾರವು ಸಾಂಕ್ರಾಮಿಕ ರೋಗದಿಂದ ಅನಾಥರಾದ ಮಕ್ಕಳನ್ನು ಬೆಂಬಲಿಸಲು ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆಯನ್ನು ಪರಿಚಯ ಮಾಡಿಸಿದೆ.

ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು 2021ರ ಮೇ 29 ರಂದು ಆರಂಭಿಸಿದರು. ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಸಚಿವಾಲಯ ಅನುಷ್ಠಾನ ಮಾಡುತ್ತದೆ.

ಈ ಯೋಜನೆಯಡಿಯಲ್ಲಿ 18 ವರ್ಷದಿಂದ ಸುಮಾರು 23 ವರ್ಷದವರೆಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಲಿದೆ.

ಈ ಯೋಜನೆಯಡಿ ಅರ್ಹ ಮಕ್ಕಳಿಗೆ 2021ರ ಮೇ ನಿಂದ 2022ರ ಫೆಬ್ರವರಿ 28ರವರೆಗೆ ತಮ್ಮ ಹೆಸರನ್ನು ನೋಂದಾಯಿಸಲು ಅವಕಾಶವನ್ನು ನೀಡಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ( https://pmcaresforchildren.in/) ನೀಡಲಾಗಿದೆ. ಪ್ರತಿ ಫಲಾನುಭವಿಗೆ 23 ವರ್ಷ ವಯಸ್ಸಿನವರೆಗೆ ಯೋಜನೆ ಜಾರಿಯಲ್ಲಿರುತ್ತದೆ.

ಯಾರು ಅರ್ಹರು : ಈ ಯೋಜನೆಗೆ ಕೊರೊನಾ ಸೋಂಕಿನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ಮಕ್ಕಳು, ತಮ್ಮ ಪೋಷಕರಲ್ಲಿ ಒಬ್ಬರನ್ನು ಕಳೆದುಕೊಂಡ ಮಕ್ಕಳು ಅಥವಾ ಕಾನೂನು ಪಾಲಕರು, ದತ್ತು ಪಡೆದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳು, ಈ ಯೋಜನೆಯಡಿ ಪ್ರಯೋಜನ ಪಡೆಯಲು ಪೋಷಕರ ಮರಣದ ಸಮಯದಲ್ಲಿ ಮಗುವಿನ ವಯಸ್ಸು 18 ವರ್ಷ ಮೀರಿರಬಾರದು.

ಪ್ರಯೋಜನ :ಈ ಯೋಜನೆಯಡಿಯಲ್ಲಿ 18 ವರ್ಷದಿಂದ ಮಾಸಿಕ ಸ್ಟೈಫಂಡ್ ಮತ್ತು 23 ವರ್ಷಗಳ ನಂತರ ರೂ.10 ಲಕ್ಷ ನಿಧಿ.
ಕೊರೊನಾದಿಂದ ತಂದೆ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ
ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲ ನೀಡಲಾಗುವುದು. PM ಕೇರ್ಸ್ ಯೋಜನೆಯಡಿ ಶಿಕ್ಷಣ ಸಾಲದ ಮೇಲಿನ ಬಡ್ಡಿ ಪಾವತಿ ಮಾಡಲಾಗುವುದು. PM ಕೇರ್ಸ್ ಮೂಲಕ ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂ. ವರೆಗೆ ಉಚಿತ ಆರೋಗ್ಯ ವಿಮೆ ಮತ್ತು ಪ್ರೀಮಿಯಂ ಪಾವತಿ, ಉಚಿತ ಊಟ ಮತ್ತು ವಸತಿ ಸೌಲಭ್ಯ ಮುಂತಾದ ಸೌಲಭ್ಯಗಳನ್ನು ನೀಡಲಾಗುತ್ತದೆ. ಜೊತೆಗೆ ಉಚಿತ ಊಟ ಮತ್ತು ವಸತಿ ಸೌಲಭ್ಯ, ಆರು ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕಾಂಶ ಆಹಾರ, ಶಾಲಾಪೂರ್ವ ಶಿಕ್ಷಣ, ರೋಗನಿರೋಧಕ ಕಾರ್ಯಕ್ರಮಗಳು, ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ತಪಾಸಣೆಗಾಗಿ ಅಂಗನವಾಡಿಗಳ ಮೂಲಕ ಬೆಂಬಲ, ಹತ್ತು ವರ್ಷದೊಳಗಿನ ಮಕ್ಕಳನ್ನು ಹತ್ತಿರದ ಶಾಲೆಗೆ (ಸಾರ್ವಜನಿಕ ಶಾಲೆ, ಸರ್ಕಾರಿ ಅನುದಾನಿತ ಶಾಲೆ, ಕೇಂದ್ರೀಯ ಶಾಲೆಗಳು, ಖಾಸಗಿ ಶಾಲೆಗೆ) ಸೇರಿಸುವುದು. ಸಮಗ್ರ ಶಿಕ್ಷಾ ಅಭಿಯಾನ ಯೋಜನೆಯಡಿ ಪಠ್ಯಪುಸ್ತಕ ಮತ್ತು ಸಮವಸ್ತ್ರ ಒದಗಿಸುವುದು, ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 12 (1) (ಸಿ) ಅಡಿ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಬೋಧನಾ ಶುಲ್ಕದಿಂದ ವಿನಾಯಿತಿ, 11 ರಿಂದ 18 ವರ್ಷದೊಳಗಿನ ಮಕ್ಕಳು ಅವರ ಕುಟುಂಬದ ಆಶ್ರಯದಲ್ಲಿ ವಾಸಿಸುತ್ತಿದ್ದರೆ, ಅವರನ್ನು ಸಾರ್ವಜನಿಕ ಶಾಲೆ, ಸರ್ಕಾರಿ ಅನುದಾನಿತ ಶಾಲೆ, ಕೇಂದ್ರ ಶಿಕ್ಷಣ ಮತ್ತು ಖಾಸಗಿ ಶಾಲೆಗೆ ಸೇರಿಸಲು ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುತ್ತಾರೆ, ಉನ್ನತ ಶಿಕ್ಷಣಕ್ಕಾಗಿ ದೇಶದಲ್ಲಿ ವೃತ್ತಿಪರ ಕೋರ್ಸ್‌ಗಳು ಅಥವಾ ಇತರ ಉನ್ನತ ಶಿಕ್ಷಣ ಕೋರ್ಸ್‌ಗಳನ್ನು ಒದಗಿಸಲು ಸರ್ಕಾರದಿಂದ ಅಗತ್ಯ ಶೈಕ್ಷಣಿಕ ಸಾಲ ಸೌಲಭ್ಯ.

Leave A Reply