ಭಾರತದ ಜೊತೆಗಿನ ನೂತನ ವ್ಯಾಪಾರ ಒಪ್ಪಂದದ ಸಂಭ್ರಮಾಚರಣೆಗೆ ಖಿಚಡಿ ತಯಾರಿಸಿದ ಆಸ್ಟ್ರೇಲಿಯಾ ಪ್ರಧಾನಿ !! | ಮೋದಿ ತವರಿಂದ ಐಟಂ ತರಿಸಿಕೊಂಡು ತಾವೇ ಕುಕ್ ಮಾಡಿರುವ ಪೋಸ್ಟ್ ಹಂಚಿಕೊಂಡ ಸ್ಕಾಟ್ ಮಾರಿಸನ್

ಭಾರತ ಇದೀಗ ವಿಶ್ವ ಗುರುವಾಗುವತ್ತ ಹೆಜ್ಜೆಯಿಟ್ಟಿದೆ. ಪ್ರತಿ ದೇಶವೂ ಭಾರತದೊಂದಿಗೆ ಒಂದಲ್ಲ ಒಂದು ರೀತಿಯಲ್ಲಿ ಒಪ್ಪಂದ ಮಾಡಿಕೊಳ್ಳಲು ಮುಂದೆ ಬರುತ್ತಿದೆ. ಇದೀಗ ಭಾರತದ ಜೊತೆ ನೂತನ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದನ್ನು ಸಂಭ್ರಮಾಚರಿಸಲು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಖಿಚಡಿಯನ್ನು ತಯಾರಿಸಿ ಇನ್ಸ್‌ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಭಾರತದೊಂದಿಗಿನ ನಮ್ಮ ಹೊಸ ವ್ಯಾಪಾರ ಒಪ್ಪಂದವನ್ನು ಆಚರಿಸಲು ನಾನು ಇಂದು ರಾತ್ರಿ ಖಿಚಡಿಯನ್ನು ಮಾಡಲು ಆಯ್ಕೆ ಮಾಡಿದ್ದಾನೆ. ಅದಕ್ಕೆ ಬೇಕಾದ ಸಾಮಾಗ್ರಿಗಳೆಲ್ಲವೂ ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟೂರು ಗುಜರಾತ್‍ನಿಂದ ಬಂದಿದೆ ಎಂದು ತಿಳಿಸಿದ್ದಾರೆ.


Ad Widget

Ad Widget

Ad Widget

ಪ್ರಧಾನಿ ಮೋದಿಗೆ ಖಿಚಡಿ ಎಂದರೆ ತುಂಬಾ ಇಷ್ಟ. ಮೋದಿ ಅವರು ಹಲವಾರು ಸಂದರ್ಶನಗಳಲ್ಲಿ ಅಕ್ಕಿ, ಉದ್ದಿನಬೇಳೆ, ತರಕಾರಿಗಳು ಮತ್ತು ತುಪ್ಪದಿಂದ ತಯಾರಿಸಿದ ಭಾರತೀಯ ಸಾಂಪ್ರದಾಯಿಕ ಖಾದ್ಯ ಖಿಚಡಿಯೆಂದರೆ ತಮಗಿಷ್ಟ ಎಂದು ಹೇಳಿದ್ದರು. ಜೊತೆಗೆ ಅದನ್ನು ತಯಾರಿಸಲು ಇಷ್ಟಪಡುತ್ತೇನೆ ಎಂದು ಹಲವು ಸಂದರ್ಶನದಲ್ಲಿ ಹೇಳಿದ್ದರು.

ಏಪ್ರಿಲ್ 2ರಂದು ವರ್ಚುವಲ್ ಸಮಾರಂಭದಲ್ಲಿ ಆಸ್ಟ್ರೇಲಿಯಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿತು. ಇದರನ್ವಯ ಶೇ. 85 ಆಸ್ಟ್ರೇಲಿಯನ್ ಸರಕುಗಳನ್ನು ಸುಂಕಗಳಿಂದ ಮತ್ತು ಶೇ. 95 ಭಾರತೀಯ ಉತ್ಪನ್ನಗಳಿಂದ ವಿನಾಯಿತಿ ನೀಡುತ್ತದೆ. ಎರಡು ದೇಶಗಳ ನಡುವಿನ ರಫ್ತುಗಳನ್ನು ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಿಸುವ ಸಲುವಾಗಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಆಸ್ಟ್ರೇಲಿಯಾದ ಅತಿದೊಡ್ಡ ಮೂಲವಾಗಿರುವ ಭಾರತವು ಒಪ್ಪಂದದಿಂದ ಹೆಚ್ಚು ಪ್ರಯೋಜನ ಪಡೆಯುತ್ತದೆ.

Leave a Reply

error: Content is protected !!
Scroll to Top
%d bloggers like this: