ಮಂಗಳೂರು : ಗಾಂಜಾ ಸೇವಿಸಿದ ಯುವಕರಿಂದ ಸಾರ್ವಜನಿಕರಿಗೆ ಥಳಿತ!ಪ್ರಶ್ನಿಸಲು ಬಂದ ವ್ಯಕ್ತಿಗಳಿಗೆ ಚೂರಿ, ಕಲ್ಲಿನಿಂದ ಹಲ್ಲೆ!

ಮಂಗಳೂರು : ಗಾಂಜಾ ಸೇವಿಸಿದ ರೌಡಿಶೀಟರ್ ಗಳು ನಿನ್ನೆ ಸಂಜೆ (ಎ.10)ಸುಮಾರು 6.30 ಕ್ಕೆ ಗಲಾಟೆ ಮಾಡಿರುವ ಘಟನೆಯೊಂದು ನಡೆದಿದೆ.

ವೆಲೆನ್ಸೀಯಾ ಜಂಕ್ಷನ್ ಬಳಿ ಈ ಘಟನೆ ನಡೆದಿದೆ.

ರೌಡಿಶೀಟರ್ ಗಳಾದ ಮಂಗಳೂರು ಜಲ್ಲಿಗುಡ್ಡೆ ಬಜಾಲ್ ನಿವಾಸಿ ಪ್ರೀತಂ ಪೂಜಾರಿ (27), ಎಕ್ಕೂರು ನಿವಾಸಿ ಧೀರು ಯಾನೆ ಧೀರಜ್ ಕುಮಾರ್(25) ಅವರೇ ಆರೋಪಿಗಳು.

ಇವರಿಬ್ಬರು ಸಾರ್ವಜನಿಕರೊಬ್ಬರಿಗೆ ಥಳಿಸುತ್ತಿದ್ದಾಗ ಅಲ್ಲೇ ಇದ್ದ ಕೋಳಿ ಅಂಗಡಿ ನೌಕರರು ಪ್ರಶ್ನೆ ಮಾಡಿದ್ದಾರೆ. ಆಗ ನೌಕರರಿಗೆ ಹೆಲ್ಮೆಟ್ , ಕಲ್ಲಿನಿಂದ ಹಲ್ಲೆ ಮಾಡಿ ಚೂರಿಯಿಂದ ಇರಿಯಲು ಯತ್ನ ನಡೆಸಿದ್ದಾರೆ.

ನಂತರ ಸಾರ್ವಜನಿಕರಿಗೆ ಚೂರಿ ತೋರಿಸಿ ಹೆದರಿಸಲು ಪ್ರಯತ್ನಿಸಿದಾಗ ಪೊಲೀಸರಿಗೆ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಪಾಂಡೇಶ್ವರ ಪೊಲೀಸರು ತಕ್ಷಣ ಧಾವಿಸಿ ಇಬ್ಬರು ರೌಡಿಶೀಟರ್‌ಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಗಾಂಜಾ ಮತ್ತು ಮದ್ಯ ಸೇವನೆ ಮಾಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿ ಧೀರಜ್ ವಿರುದ್ಧ ದರೋಡೆ, ದರೋಡೆಗೆ ಸಂಚು, ಕೊಲೆಯತ್ನ, ಹಲ್ಲೆ ಪ್ರಕರಣ ಸೇರಿ 8 ಪ್ರಕರಣ ದಾಖಲಾಗಿತ್ತು. ಪ್ರೀತಮ್ ಮೇಲೆ ದರೋಡೆ, ಕೊಲೆಯತ್ನ, ಗಾಂಜಾ ಸೇವನೆ ಸೇರಿ 10 ಪ್ರಕರಣ ದಾಖಲಾಗಿತ್ತು.

Leave A Reply