ಉರ್ದು ಮಾತನಾಡಿಲ್ಲ ಎಂದು ಚೂರಿಯಿಂದ ಇರಿದು ಯುವಕನ ಹತ್ಯೆ

ಬೆಂಗಳೂರಿನಲ್ಲಿ ಯುವಕನನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪೋಟಕ ಮಾಹಿತಿ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನ ಜೆ.ಜೆ.ನಗರದಲ್ಲಿ ದಲಿತ ಯುವಕ ಚಂದ್ರುವನ್ನು ನಾಲ್ವರು ಕೊಲೆ ಮಾಡಿದ್ದಾರೆ.

ಚಂದ್ರು ಉರ್ದು ಮಾತನಾಡಿಲ್ಲ ಎಂದು ಕೊಲೆ ಮಾಡಲಾಗಿದೆ. ಕೊಲೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತ ಚಂದ್ರ ಜೆ.ಜೆ ನಗರಕ್ಕೆ ಬೈಕ್ ನಲ್ಲಿ ಸ್ನೇಹಿತ ಸೈಮನ್ ನನ್ನು ಕೂರಿಸಿಕೊಂಡು ಹೋಗಿದ್ದಾರೆ. ಈ ವೇಳೆ ಅಪರಿಚಿತರ ಯುವಕರ ಬೈಕ್ ಗೆ ಚಂದ್ರುವಿನ ಬೈಕ್ ತಗುಲಿದೆ. ಪರಿಣಾಮ, ಎರಡೂ ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಚಂದ್ರು ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೊಲೆ ಮಾಡಲಾಗಿದೆ ಘಟನೆ ಸಂಬಂಧ ನಾಲ್ವರು ಅರೋಪಿಗಳ ಪೈಕಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Leave A Reply