ತಂದೆ ಸತ್ತನೆಂದು ಮಣ್ಣು ಮಾಡಿ ಬಂದ ಮಗ | ಆದರೆ ಮನೆಗೆ ಬಂದಾಗ ಮನೆ ಮಂದಿಗೆ ಕಾದಿತ್ತು ಬಿಗ್ ಶಾಕ್ !!!

0 7

ವೈದ್ಯರು ಮೃತಪಟ್ಟಿದ್ದಾಗಿ ಹೇಳಿ ನಂತರ ವ್ಯಕ್ತಿ ಬದುಕಿದ್ದು,
ಅಂತ್ಯಕ್ರಿಯೆ ಮಾಡುವಾಗ ವ್ಯಕ್ತಿ ಎದ್ದು ಕುಳಿತದ್ದು…ಈ ರೀತಿ ಎಷ್ಟೋ ವಿಸ್ಮಯಕಾರಿ ಘಟನೆಗಳು ನಮಗೆ ಸಿಗುತ್ತದೆ.

ಇತ್ತೀಚೆಗೆ ಎಷ್ಟೋ ನಂಬಲಸಾಧ್ಯ ಎನ್ನುವಂಥ ಘಟನೆಗಳು ನಮ್ಮ ಸುತ್ತ ನಡೆಯುತ್ತಲೇ ಇದೆ.

ಈ ಪವಾಡದ ಪಾಲಿಗೆ ಈಗ ಇನ್ನೊಂದು ಸುದ್ದಿ ಸೇರಿಕೊಂಡಿದೆ. 55 ವರ್ಷದ ವ್ಯಕ್ತಿಯೊಬ್ಬ ಸತ್ತಿದ್ದಾನೆ ಎಂದು ಭಾವಿಸಿ ಆತನನ್ನು ಭಾನುವಾರ ಸಂಜೆ ಕುಟುಂಬಸ್ಥರು ಮಣ್ಣು ಮಾಡಿ ಬಂದಿದ್ದರು. ಆದರೆ, ಮೃತ ವ್ಯಕ್ತಿ ಸೋಮವಾರ ಸಂಜೆ ಮನೆಗೆ ಮರಳಿದ್ದು, ಆತನನ್ನು ನೋಡಿ ಕುಟುಂಬಸ್ಥರೆಲ್ಲ ಆಘಾತಕ್ಕೆ ಒಳಗಾಗಿದ್ದಾರೆ. ಈ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯ ಬನಗಲದಪುರದಲ್ಲಿ ನಡೆದಿದೆ.

ದಿನಗೂಲಿ ನೌಕರನಾಗಿರುವ ಮೂರ್ತಿ ಕೆಲವು ದಿನಗಳ ಹಿಂದೆ ಕಬ್ಬು ಕಟಾವು ಮಾಡಲೆಂದು ತಿರ್ಪೂ‌ರ್ ಗೆ ಹೋಗಿದ್ದರು. ಭಾನುವಾರ ಬೆಳಗ್ಗೆ ಸಂಬಂಧಿಕರಿಂದ ಮೂರ್ತಿ ಪುತ್ರ ಕಾರ್ತಿ ಕರೆ ಬಂದಿತ್ತು. ಬಸ್ ನಿಲ್ದಾಣದ ಹತ್ತಿರ ನಿಮ್ಮ ತಂದೆಯ ಶವ ಪತ್ತೆಯಾಗಿದೆ ಎಂದು. ಇದನ್ನು ಕೇಳಿ ಮಗ ಶಾಕ್ ಆಗಿ ಸ್ಥಳಕ್ಕೆ ಕೂಡಲೇ ಧಾವಿಸಿದ. ಪುತ್ರ ಅದು ತನ್ನ ತಂದೆಯ ಮೃತದೇಹ ಎಂದು ಖಚಿತಪಡಿಸಿದ ಮೇಲೆ ಮುಂದಿನ ಕಾರ್ಯ ಮಾಡಿದ್ದಾರೆ. ತಂದೆಯ ಶವವನ್ನು ಮಗ ಗುರುತಿಸಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಾದ ಬಳಿಕ ಪ್ರಕರಣ ದಾಖಲಿಸಿಕೊಂಡ ಸತ್ಯಮಂಗಲಂ ಠಾಣಾ ಪೊಲೀಸರು ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರ ಮಾಡುತ್ತಾರೆ. ಬಳಿಕ ಕುಟುಂಬಸ್ಥರು ಭಾನುವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಇದಾದ ಮಾರನೇ ದಿನ ಅಂದರೆ ಸೋಮವಾರ ಸಂಜೆ ಇದ್ದಕ್ಕಿದ್ದಂತೆ ಮೂರ್ತಿ ಮನೆಗೆ ಬಂದಿದ್ದನ್ನು ನೋಡಿ ಇಡೀ ಕುಟುಂಬ ಒಂದು ಕ್ಷಣ ಆಘಾತಕ್ಕೆ ಒಳಗಾಗುತ್ತಾರೆ.

ಇದಾದ ಬಳಿಕ ಮಗ ಕಾರ್ತಿ ಮತ್ತೆ ಪೊಲೀಸರಿಗೆ ಈ ವಿಚಾರವನ್ನು ತಿಳಿಸಿದ್ದಾನೆ. ಇದೀಗ ಮೊದಲು ಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಯಾರದ್ದು ಎಂದು ಪತ್ತೆಹಚ್ಚಲು ಪೊಲೀಸರು ತನಿಖೆ ಶುರು ಮಾಡಿದ್ದಾರೆ.

Leave A Reply