ಮನುಷ್ಯರು ಮದ್ಯಸೇವನೆಯ ದಾಸರಾಗಲು ಕಾರಣವೇನು ಗೊತ್ತಾ !?? | ಪ್ರತಿನಿತ್ಯ ಒಂದು ಪೆಗ್ ಹಾಕಿಕೊಳ್ಳಲು ಕುಳಿತುಕೊಳ್ಳುವವರ ದುಶ್ಚಟಕ್ಕೆ ಕೊನೆಗೂ ಸಿಕ್ಕಿದೆ ಉತ್ತರ

ಮದ್ಯಪಾನ ಸೇವನೆಯು ಆರೋಗ್ಯಕ್ಕೆ ಹಾನಿಕರ ಎಂದು ತಿಳಿದಿದ್ದರೂ ಕೆಲವರು ಪ್ರತಿನಿತ್ಯವೂ ಒಂದು ಪೆಗ್ ಆದರೂ ಗಂಟಲಲ್ಲಿ ಇಳಿಸಿಕೊಳ್ಳದೆ ಇರಲಾರರು.‌‌ ಅದು ಅವರಿಗೆ ಚಟವಾಗಿ ಪರಿಣಮಿಸಿ, ಮದ್ಯಪಾನದ ದಾಸರಾಗುತ್ತಾರೆ. ಆಲ್ಕೋಹಾಲ್ ನಿಂದ ಹಲವಾರು ರೀತಿಯ ಅನಾರೋಗ್ಯಗಳು ಕಾಡುವುದು. ಆದರೆ ಮನುಷ್ಯರು ಕುಡಿತದ ಚಟಕ್ಕೆ ಏಕೆ ಒಳಗಾಗುತ್ತಾರೆ?? ಪ್ರಶ್ನೆ ನಿಮ್ಮದು ಮೂಡಿರಬಹುದು. ಇದಕ್ಕೆ ಕೊನೆಗೂ ಉತ್ತರ ಸಿಕ್ಕಿಬಿಟ್ಟಿದೆ. ಆದರೆ ವಿಶೇಷವೆಂದರೆ ಮನುಷ್ಯರು ಕುಡಿತದ ಚಟಕ್ಕೆ ಏಕೆ ಬೀಳುತ್ತಾರೆ ಎಂಬುದನ್ನು ತಿಳಿಯಲು ಮಂಗಗಳ ಮೇಲೆ ಸಂಶೋಧನೆ ನಡೆಸಲಾಗಿದೆ.

ಹೌದು. ಈ ಕಾರಣಕ್ಕಾಗಿಯೇ ಮಂಗಗಳು ತಿಂದ ಹಣ್ಣುಗಳು ಹಾಗೂ ಅವುಗಳ ಮೂತ್ರದ ಮಾದರಿಗಳನ್ನು ಹಲವು ಬಾರಿ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಪರೀಕ್ಷೆಗಳಲ್ಲಿ ಆಘಾತಕಾರಿ ಅಂಶಗಳು ಬಹಿರಂಗವಾಗಿವೆ. ಹಣ್ಣಾಗಿ, ಸ್ವಲ್ಪ ಕೊಳೆತ ಹಣ್ಣುಗಳ ಹುಡುಕಾಟದಲ್ಲಿ ಮಂಗಗಳು ನಿರತವಾಗಿರುತ್ತವೆ ಎಂಬುದು ಈ ಸಂಶೋಧನೆಯಲ್ಲಿ ತಿಳಿದುಬಂದಿದೆ. ಮಂಗಗಳು ತಿನ್ನುವ ಹಣ್ಣುಗಳಲ್ಲಿ ಶೇ.2ರಷ್ಟು ಆಲ್ಕೋಹಾಲ್ ಅಂಶ ಇರುವುದು ಈ ಸಂಶೋಧನೆಯಲ್ಲಿ ಬಹಿರಂಗವಾಗಿದೆ.

ಕಳೆದ 25 ವರ್ಷಗಳಿಂದ ಸಂಶೋಧನೆ ನಡೆಯುತ್ತಿದೆ

ಮಾಧ್ಯಮ ವರದಿಗಳ ಪ್ರಕಾರ, ಈ ವರದಿ Royal Society Open Science ಜರ್ನಲ್ ನಲ್ಲಿ ಪ್ರಕಟಗೊಂಡಿದೆ. ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಜೀವಶಾಸ್ತ್ರಜ್ಞ ರಾಬರ್ಟ್ ಡಡ್ಲಿ 25 ವರ್ಷಗಳಿಂದ ಮಾನವರಲ್ಲಿ ಆಲ್ಕೊಹಾಲ್ ಚಟದ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಅವರು 2014 ರಲ್ಲಿ ಈ ಬಗ್ಗೆ ಪುಸ್ತಕವನ್ನು ಸಹ ಬರೆದಿದ್ದಾರೆ. ಅದರಲ್ಲಿ ಮನುಷ್ಯರಲ್ಲಿನ ಮದ್ಯ ಚಟ ಮಂಗಗಳಿಗೆ ಸಂಬಂಧಿಸಿದೆ ಎಂದು ಬರೆದುಕೊಂಡಿದ್ದಾರೆ. ಮಂಗಗಳಿಗೆ ವೈನ್ ಪರಿಮಳ ಇಷ್ಟವಾಗುವ ಕಾರಣ ಹಣ್ಣುಗಳು ಮಾಗಲು ಅವು ಕಾಯುತ್ತವೆ ಎನ್ನಲಾಗಿದೆ.

ಇದರ ನಂತರ, ಮಾನವರಲ್ಲಿ ಮದ್ಯದ ಚಟವನ್ನು ತಿಳಿಯಲು ಹೊಸ ಅಧ್ಯಯನವನ್ನು ನಡೆಸಲಾಯಿತು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಜೀವಶಾಸ್ತ್ರಜ್ಞರು ಈ ಅಧ್ಯಯನವನ್ನು ನಡೆಸಿದ್ದಾರೆ. ಅವರು ಪನಾಮದಲ್ಲಿ ಕಂಡುಬರುವ ಕಪ್ಪು ಕೈಯ ಕೋತಿ ತಿಂದ ಹಣ್ಣುಗಳು ಮತ್ತು ಅವುಗಳ ಮೂತ್ರದ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಈ ಮಂಗಗಳು ಕೆಲವು ಕೊಳೆತ ಹಣ್ಣುಗಳನ್ನು ತಿನ್ನಲು ಇಷ್ಟಪಡುತ್ತವೆ. ಈ ಹಣ್ಣುಗಳು ಶೇ. 1 ರಿಂದ ಶೇ. 2ರಷ್ಟು ಆಲ್ಕೋಹಾಲ್ ಅಂಶವನ್ನು ಹೊಂದಿರುತ್ತವೆ. ಹಣ್ಣುಗಳಲ್ಲಿ ಈ ಅಂಶ ನೈಸರ್ಗಿಕ ಹುದುಗುವಿಕೆಯಿಂದ ಬಂದಿರುತ್ತದೆ ಎನ್ನಲಾಗಿದೆ. ಈ ಪ್ರಮಾಣವು ಕಡಿಮೆ ಆಲ್ಕೋಹಾಲ್ ಹೊಂದಿರುವ ಬಿಯರ್‌ನಂತೆಯೇ ಇರುತ್ತದೆ. ಇದಲ್ಲದೇ ಮಂಗಗಳ ಶೌಚಾಲಯದಲ್ಲೂ ಮದ್ಯದ ಅಂಶ ಪತ್ತೆಯಾಗಿದೆ.

ಈ ಸಂಶೋಧನೆಯಿಂದ ಮಂಗಗಳು ಶಕ್ತಿಗಾಗಿ ಆಲ್ಕೋಹಾಲ್ ಅನ್ನು ಬಳಸುತ್ತವೆ ಎಂದು ತೀರ್ಮಾನಿಸಲಾಗಿದೆ. ಮಂಗಗಳು ಹಣ್ಣುಗಳನ್ನು ತಿನ್ನುವುದರಿಂದ ಮನುಷ್ಯರಲ್ಲಿ ಮದ್ಯಪಾನ ಮಾಡುವ ಬಯಕೆ ಬಂದಿದೆಯೇ ಎಂಬುದನ್ನು ತಿಳಿದುಕೊಳ್ಳುವುದು ಈ ಅಧ್ಯಯನದ ಗುರಿಯಾಗಿತ್ತು. ಆದರೆ, ಆಲ್ಕೋಹಾಲ್ ಅಂಶ ಹೊಂದಿರುವ ಎಷ್ಟು ಹಣ್ಣುಗಳನ್ನು ಮಂಗಗಳು ಸೇವಿಸುತ್ತವೆ ಮತ್ತು ಅವುಗಳ ಸೇವನೆಯಿಂದ ಮಂಗಗಳ ನಡುವಳಿಕೆಯಲ್ಲಿ ಯಾವ ಯಾವ ಬದಲಾವಣೆಗಳು ಕಂಡುಬರುತ್ತವೆ ಎಂಬುದು ಇದುವರೆಗೆ ಪತ್ತೆಯಾಗಿಲ್ಲ.

Leave A Reply