ರೆಸ್ಟೋರೆಂಟ್‌ನಲ್ಲಿ ಬಡಿಸಿದ ಆಹಾರದಲ್ಲಿ ಮೀನು ಜೀವಂತ!!| 7.8 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದ ವಿಡಿಯೋ ಹೇಗಿದೆ ಗೊತ್ತಾ!?

Share the Article

ಇಂದಿನ ಇಂಟರ್ನೆಟ್ ಯುಗ ಎಷ್ಟು ಸ್ಪೀಡ್ ಎಂದರೆ ಎಲ್ಲೆಲ್ಲೂ ನಡೆಯೋ ವಿಚಾರ ಒಂದೇ ಸೆಕೆಂಡ್ ಗೆ ಕೈಗೆ ಸಿಕ್ಕಿರುತ್ತೆ. ಅದರಂತೆ ಇದೀಗ ಒಂದು ವಿಡಿಯೋ ವೈರಲ್ ಆಗಿದ್ದು, ಒಮ್ಮೆಗೆ ದಿಗ್ಬ್ರಮೆಗೊಳಿಸುತ್ತೆ. ಈ ಹಿಂದೆ ವೈರಲ್ ಆದ ವಿಡಿಯೋದಲ್ಲಿ ಫಿಶ್ ಫ್ರೈ ಮಾಡುತ್ತಿರುವಾಗಲೇ ಮೀನು ಜೀವಂತವಾಗಿ ಹಾರಿದ್ದನ್ನು ನಾವು ನೋಡಿರುತ್ತೇವೆ. ಆದ್ರೆ ಈ ವೈರಲ್ ವಿಡಿಯೋ ಇದಿಕ್ಕೂ ಮೀರಿದೆ!!

ಹೌದು ಈ ವಿಡಿಯೋದಲ್ಲಿ ರೆಸ್ಟೋರೆಂಟ್‌ನಲ್ಲಿ ಬಡಿಸಿದ ಆಹಾರದಲ್ಲಿ ಮೀನು ಜೀವಂತ.ಅಂತರ್ಜಾಲದಲ್ಲಿ ವೈರಲ್ ಆಗಿರುವ ಹಳೆಯ ವಿಡಿಯೋದಲ್ಲಿ, ಒಂದು ತಟ್ಟೆಯಲ್ಲಿ ಮೀನನ್ನು ಬಡಿಸುವುದರ ಜೊತೆಗೆ ನಿಂಬೆ ತುಂಡು, ಗಾಜಿನ ನೂಡಲ್ಸ್ ಮತ್ತು ಕೆಲವು ತರಕಾರಿಗಳನ್ನು ಬಡಿಸಲಾಗಿದೆ.ಈ ವೇಳೆ ವ್ಯಕ್ತಿಯೊಬ್ಬರು ಮೀನಿನ ಬಳಿ ಚಾಪ್ ಸ್ಟಿಕ್ ಇಡುತ್ತಿದ್ದಂತೆ ಅದು ಬಾಯ್ತೆರೆದು ಕಚ್ಚಿದೆ.

https://youtu.be/LhzKE8Ny5n4

ಒಮ್ಮೆಗೆ ಇದು ಸುಳ್ಳು ಅನಿಸಿದ್ರೂ ಇದು ಸತ್ಯ. ಮೀನು ಇನ್ನೂ ಜೀವಂತವಾಗಿತ್ತು. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು,ಇದು 7.8 ಮಿಲಿಯನ್ ವೀಕ್ಷಣೆಗಳು ಗಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ನೆಟ್ಟಿಗರಲ್ಲಿ ನಾವು ಇದನ್ನು ಏಕೆ ತಿನ್ನುತ್ತಿದ್ದೇವೆ ಎಂದು ತಮಿಗೆ ತಾವೇ ಪ್ರಶ್ನೆ ಮಾಡಿಕೊಳ್ಳುವ ರೀತಿ ಮಾಡಿದೆ.

Leave A Reply

Your email address will not be published.