ಸಮಂತಾ ಮತ್ತು ನಾಗಚೈತನ್ಯ ಭವಿಷ್ಯ ನುಡಿದ ಜ್ಯೋತಿಷಿಯಿಂದ ನಟ ಪ್ರಭಾಸ್ ಬಗ್ಗೆ ಆತಂಕಕಾರಿ ಭವಿಷ್ಯ ಹೇಳಿಕೆ!!!

0 35

ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ಅವರು ಈಗ ಇನ್ನೊಬ್ಬ ನಟನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಆರಂಭದಲ್ಲಿ ಯಾರೂ ಗಂಭೀರವಾಗಿ ಇವರ ಮಾತನ್ನು ಪರಿಗಣಿಸಿರಲಿಲ್ಲ. ಯಾವಾಗ ಇವರು ಟಾಲಿವುಡ್ ನ ತಾರಾದಂಪತಿ ನಾಗಚೈತನ್ಯ ಹಾಗೂ ಸಮಂತಾ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಇಬ್ಬರೂ ಬೇರೆಯಾದಾಗ ಆಗ ವೇಣು ಅವರ ಭವಿಷ್ಯವನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಲು ಪ್ರಾರಂಭಿಸಿದ್ದಾರೆ.

ಇದೀಗ ವೇಣು ಅವರು ಸೂಪರ್‌ಸ್ಟಾರ್ ಪ್ರಭಾಸ್ ಬಗ್ಗೆ ನುಡಿದಿರುವ ಭವಿಷ್ಯ ಅವರ ಅಭಿಮಾನಿಗಳನ್ನು ಕಂಗಾಲಾಗಿಸಿದೆ. ಪ್ರಭಾಸ್ ಅವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸವಾಲುಗಳು ಎದುರಾಗಲಿವೆಯಂತೆ. ಸಾಕಷ್ಟು ಸೋಲುಗಳನ್ನು ಅನುಭವಿಸಲಿದ್ದರಂತೆ. ದೊಡ್ಡ ದೊಡ್ಡ ಫ್ಲಾಪ್ ಸಿನಿಮಾಗಳು ಪ್ರಭಾಸ್ ಪಟ್ಟಿಗೆ ಸೇರಲಿದೆ. ಪ್ರಭಾಸ್ ಸಿನಿಮಾ ಮೇಲೆ ಬಂಡವಾಳ ಹೂಡುವ ಮುನ್ನ ನಿರ್ಮಾಪಕರು ಎರಡೆರಡು ಬಾರಿ ಚಿಂತಿಸುವ ಎದುರಾಗಲಿದೆ ಎಂಬ ಭವಿಷ್ಯವನ್ನು ಹೇಳಿದ್ದಾರೆ.

ವೇಣು ಸ್ವಾಮಿ ಅವರು ಭವಿಷ್ಯ ನುಡಿದಿರುವ ಸಂದರ್ಶನದ ವಿಡಿಯೋ ಸಾಮಾಜಿಕ ಜಾಲತಾಣಗಳ ವೈರಲ್ ಆಗುತ್ತಿದ್ದು, ಪ್ರಭಾಸ್ ಅಭಿಮಾನಿಗಳು ಕಿಡಿಕಾರಿದ್ದಾರೆ.

Leave A Reply