ಚಿಕ್ಕ ವಯಸ್ಸಿನಲ್ಲೇ ನಮ್ಮಿಂದ ತಂದೆ ದೂರವಾದರು ಎನ್ನುತ್ತಿದ್ದ ನಿರೂಪಕಿ ಅನುಶ್ರೀಯ ಪಿತಾಶ್ರೀ ಮತ್ತೆ ವಾಪಾಸ್|ಗಂಭೀರ ಸ್ಥಿತಿಯಲ್ಲಿರುವ ಅಪ್ಪನನ್ನು ಒಮ್ಮೆ ನೋಡಲು ಬಾ ಮಗಳೇ ಎಂದು ತಂದೆಯ ರೋದನೆ

ಬೆಂಗಳೂರು: ಮನೆ ಮನೆಗಳಲ್ಲೂ ಮಾತಾಗಿರುವ ನಿರೂಪಕಿ ಅನುಶ್ರೀಗೆ ತಂದೆ ಇದ್ದಾರೆ ಎಂಬುದೇ ಅಭಿಮಾನಿಗಳಾದ ನಮಿಗೆ ತಿಳಿದಿಲ್ಲ.ತಮ್ಮ ತಂದೆ ಚಿಕ್ಕ ವಯಸ್ಸಿನಲ್ಲೇ ನಮ್ಮಿಂದ ದೂರವಾದರು ಅನ್ನೋದನ್ನು ಅನೇಕ ಬಾರಿ ಹೇಳಿಕೊಂಡು ಕಷ್ಟದ ದಿನಗಳನ್ನು ನೆನದು ಸಂದರ್ಶನಗಳಲ್ಲಿ ಕಣ್ಣೀರು ಕೂಡ ಹಾಕಿದ್ದರು.ಆದರೆ ಇದೀಗ ಅನುಶ್ರೀ ತಂದೆ ಮತ್ತೆ ಹಿಂದಿರುಗಿದ್ದು, ಮಗಳಿಗಾಗಿ ಪರಿತಪಿಸುತ್ತಿದ್ದಾರೆ.


Ad Widget

Ad Widget

Ad Widget

ತಮ್ಮ ಹೆಸರು ಸಂಪತ್ ಕುಮಾರ್ ಎಂದು ಹೇಳಿಕೊಂಡಿರುವ ಇವರು, ತಾವು ಅನುಶ್ರೀಯ ತಂದೆ ಎಂದಿದ್ದು, ಅದಕ್ಕೆ ಪೂರಕವಾಗಿ ಅನುಶ್ರೀ ಅವರ ಕೆಲವು ಬಾಲ್ಯದ ಚಿತ್ರಗಳನ್ನು ತೋರಿಸಿದ್ದಾರೆ. ಪಾರ್ಶ್ವವಾಯುವಿಗೆ ತುತ್ತಾಗಿ ಪ್ರಸ್ತುತ ಬೆಂಗಳೂರಿನ ಮಾದನಾಯಕನಹಳ್ಳಿಯ ಅಭಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂಪತ್‌ಕುಮಾರ್ ಸ್ಥಿತಿ ತುಂಬಾ ಗಂಭೀರವಾಗಿದೆ. ಈ ನನ್ನ ಕೊನೆಯ ದಿನಗಳಲ್ಲಿ ಆದರೂ ಮಗಳು ಬಂದು ನನ್ನನ್ನು ನೋಡಲಿ ಎಂದಿದ್ದಾರೆ.

“ನನಗೆ ಇಬ್ಬರು ಮಕ್ಕಳು, ಅಭಿಜಿತ್ ಹಾಗೂ ಅನುಶ್ರೀ. ನನ್ನ ಮಗಳ ಇಮೇಜ್ ಡ್ಯಾಮೇಜ್ ಆಗಬಾರದು, ಕಷ್ಟಪಟ್ಟು, ಸಿಂಪತಿಗಿಟ್ಟಿಸಿಕೊಂಡು ಆಕೆ ಮೇಲೆ ಬಂದಿದ್ದಾಳೆ. ನನ್ನ ಕುಟುಂಬದವರು ಚೆನ್ನಾಗಿರಲಿ ಎಂದು ನಾನು ನನ್ನ ಇಡೀ ಜೀವನ ಹಾಳು ಮಾಡಿಕೊಂಡಿದ್ದೇನೆ. ಈಗ ಕೊನೆಯ ದಿನಗಳನ್ನು ಎಣಿಸುತ್ತಿದ್ದೇನೆ. ಈಗಲಾದರೂ ನನ್ನ ಮಗಳು ಬಂದು ನನ್ನನ್ನು ನೋಡಲಿ. ನನ್ನ ಮಗ ಕಳೆದ ವರ್ಷ ನನ್ನನ್ನು ನೋಡಲು ಬಂದಿದ್ದ” ಎಂದಿದ್ದಾರೆ ಸಂಪತ್.

“ನನಗೆ ನನ್ನ ಕುಟುಂಬದವರು ಯಾರೂ ಇಂಪಾರ್ಟೆನ್ಸ್ ಕೊಡಲಿಲ್ಲ. ನನಗೆ ಅನುಶ್ರೀಯನ್ನು ಡ್ಯಾನ್ಸ್‌ಗೆ ಕಳಿಸೋದು ಇಷ್ಟ ಇರಲಿಲ್ಲ. ಆದರೆ ನನ್ನ ಹೆಂಡತಿಗೆ ಅವರ ಮನೆಯವರಿಗೆ ಅನುಶ್ರೀಯನ್ನು ಡ್ಯಾನ್ಸ್‌ಗೆ ಕಳಿಸಲು ಇಂಟ್ರೆಸ್ಟ್ ಇತ್ತು. ನನ್ನ ಮಾತಿಗೆ ಬೆಲೆ ಇರದ ಕಾರಣ ಒತ್ತಡದ ಪರಿಸ್ಥಿತಿಯಲ್ಲಿ ನಾನು ಮನೆ ಬಿಟ್ಟು ಹೋದೆ” ಎಂದಿದ್ದಾರೆ.

“ಮಗಳನ್ನು ಸೇಂಟ್ ಥಾಮಸ್ ಸ್ಕೂಲ್‌ನಲ್ಲಿ 6ನೇ ತರಗತಿ ವರೆಗೆ ಓದಿಸಿದೆವು. ಆ ಮೇಲೆ ಮಂಗಳೂರಿಗೆ ಶಿಫ್ಟ್ ಆದೆವು. 2003-04 ರಲ್ಲಿ ನಾವು ಬೇರೆ ಆದೆವು. ನ್ಯೂಜಿಲೆಂಡ್, ದುಬೈ, ಮುಂಬೈಗಳಲ್ಲಿ ಕೆಲಸ ಮಾಡುತ್ತಿದ್ದೆ. ಬಾಂಬೆಯಲ್ಲಿ ಅಂಡರ್ವಲ್ಡ್ ಗುಂಪೊಂದಕ್ಕೆ ಸೇರಿಕೊಂಡುಬಿಟ್ಟೆ. ನಾನು ಇದ್ದ ಫೀಲ್ಡ್ ಹೇಗಿತ್ತೆಂದರೆ ಇವರ ಹೆಸರನ್ನು ಹೇಳಿದರೂ ಇವರನ್ನು ಮುಗಿಸಿಬಿಡುತ್ತಿದ್ದರು. ಹಾಗಾಗಿ ನಾನು ಇವರನ್ನು ಮತ್ತೆ ಸಂಪರ್ಕ ಮಾಡಲಿಲ್ಲ” ಎಂದಿದ್ದಾರೆ ಸಂಪತ್.

“ಐದು ದಿನದ ಹಿಂದೆ ನನ್ನ ಭಾವಮೈದುನನಿಗೆ ಕಾಲ್ ಮಾಡಿದ್ದೆ. ಒಂದು ಬಾರಿ ಆದ್ರೂ ನನ್ನ ಮಗಳು, ಕುಟುಂಬ ನನ್ನನ್ನು ಬಂದು ನೋಡಿಕೊಂಡು ಹೋಗಲಿ, ಅಥವಾ ನಾನು ಸತ್ತ ಮೇಲೆ ಒಂದು ಹಿಡಿ ಮಣ್ಣಾದರೂ ಹಾಕಲಿ” ಎಂದಿದ್ದಾರೆ ಸಂಪತ್. ಆಸ್ಪತ್ರೆಯವರು ನೀಡಿರುವ ಮಾಹಿತಿಯಂತೆ ಸಂಪತ್ ಅವರಿಗೆ ಪಾರ್ಶ್ವವಾಯುವಾಗಿದ್ದು, ಅವರಿಗೆ ಆರೈಕೆಯ ಅವಶ್ಯಕತೆ ಇದೆ. ಅವರ ಕುಟುಂಬಸ್ಥರು ಬಂದು ನೋಡಿಕೊಳ್ಳುವುದು ಉತ್ತಮ ಎಂದಿದ್ದಾರೆ.

ಹಾಗೆ ಅನುಶ್ರೀ ನನ್ನ ಬಗ್ಗೆ ಹೇಳಿಕೊಳ್ಳಬಹುದಿತ್ತು. ಆದರೆ ಆಕೆ ನನ್ನ ಬಗ್ಗೆ ಹೇಳಿಕೊಳ್ಳದೆ ಸಿಂಪತಿಯನ್ನು ಗಿಟ್ಟಿಸಿಕೊಳ್ಳುತ್ತಿದ್ದಾಳೆ ಎಂದು ಮಗಳ ಬಗ್ಗೆ
ಮಾಧ್ಯಮದ ಮುಂದೆ ಅಸಮಾಧಾನ ಹೊರ ಹಾಕಿದ್ದಾರೆ.

Leave a Reply

error: Content is protected !!
Scroll to Top
%d bloggers like this: