ವಿಮಾನ ಪ್ರಯಾಣದ ವೇಳೆ ಕಳೆದುಹೋದ ಲಗೇಜ್ ಪತ್ತೆಹಚ್ಚಲು ಇಂಡಿಗೋ ವೆಬ್ ಸೈಟ್ ನ್ನೇ ಹ್ಯಾಕ್ ಮಾಡಿದ ಟೆಕ್ಕಿ !! | ಸೂಕ್ತ ವೆಬ್ ಸೈಟ್ ಭದ್ರತೆಯಿಲ್ಲದ ಇಂಡಿಗೋ ವಿಮಾನಯಾನ ಸಂಸ್ಥೆಗೆ ಭಾರಿ ಮುಖಭಂಗ

ಪ್ರಯಾಣ ಮಾಡುವಾಗ ನಮ್ಮ ನಮ್ಮ ವಸ್ತುಗಳ ಮೇಲೆ ತುಂಬಾ ನಿಗಾ ಇಡಬೇಕಾಗುತ್ತದೆ. ಆದರೆ ವಿಮಾನ ಪ್ರಯಾಣದ ವೇಳೆ ನಮ್ಮ ಲಗೇಜಿನ ಜವಾಬ್ದಾರಿಯನ್ನು ಆ ಕಂಪನಿಯೇ ವಹಿಸಿರುತ್ತದೆ. ಹೀಗಿರುವಾಗ ಪಾಟ್ನಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ವಿಮಾನ ಪ್ರಯಾಣದ ವೇಳೆ ಕಳೆದು ಹೋದ ತಮ್ಮ ಲಗೇಜ್ ಪತ್ತೆ ಹಚ್ಚಲು ಇಂಡಿಗೋ ವೆಬ್‌ಸೈಟ್ ಅನ್ನೇ ಹ್ಯಾಕ್ ಮಾಡಿದ್ದಾರೆ.

ತನ್ನ ಬ್ಯಾಗ್ ಅನ್ನು ತಪ್ಪಾಗಿ ತೆಗೆದುಕೊಂಡು ಹೋದ ಸಹ ಪ್ರಯಾಣಿಕನ ವಿವರ ಪತ್ತೆಹಚ್ಚಲು ಇಂಡಿಗೋ ವಿಮಾನಯಾನ ಸಂಸ್ಥೆಯ ವೆಬ್‌ಸೈಟ್ ಹ್ಯಾಕ್ ಮಾಡಿದ ಬೆಂಗಳೂರಿನ ಟೆಕ್ಕಿ ನಂದನ್ ಕುಮಾರ್ ಅವರು, ಈ ವೆಬ್ ಸೈಟ್ ನಲ್ಲಿ ನಮಗೆ ಬೇಕಾದ ಸೂಕ್ಷ್ಮ ಮಾಹಿತಿಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಈ ವೆಬ್ ಸೈಟ್ ತಾಂತ್ರಿಕವಾಗಿ ದುರ್ಬಲವಾಗಿದ್ದು, ಅದನ್ನು ಸರಿಪಡಿಸಿಕೊಳ್ಳಬೇಕು ಮತ್ತು ಇನ್ನಷ್ಟು ಭದ್ರಪಡಿಸಬೇಕು ಎಂದು ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.


Ad Widget

Ad Widget

Ad Widget

ಮಾರ್ಚ್ 27 ರಂದು ಪಾಟ್ನಾದಿಂದ ಬೆಂಗಳೂರಿಗೆ 6E-185 ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ ನಂದನ್ ಕುಮಾರ್ ಅವರ ಬ್ಯಾಗ್ ಕಣ್ತಪ್ಪಿನಿಂದ ಬದಲಾಗಿತ್ತು. “ನಾನು ಮನೆ ತಲುಪಿದ ನಂತರ ನನ್ನ ಪತ್ನಿ ಇದು ನಮ್ಮ ಬ್ಯಾಗ್ ಅಲ್ಲ. ಬೆರೆಯವರದ್ದು ಎಂದು ಹೇಳಿದರು. ನಾನು ತಕ್ಷಣ ನಿಮ್ಮ ಕಸ್ಟಮರ್ ಕೇರ್‌ಗೆ ಕರೆ ಮಾಡಿದೆ. ಆದರೆ ಅವರು ಗೌಪ್ಯತೆ ಮತ್ತು ಡೇಟಾ ರಕ್ಷಣೆ ಉಲ್ಲೇಖಿಸಿ ಆ ವ್ಯಕ್ತಿಯ ನಂಬರ್ ಕೊಡಲಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ನಂದನ್​ ಅವರ ಬ್ಯಾಗ್​​ ಅವರ ಸಹಪ್ರಯಾಣಿಕರೊಟ್ಟಿಗೆ ಹೋಗಿತ್ತು. ಇದು ಕಣ್ತಪ್ಪಿನಿಂದ ಆದ ಎಡವಟ್ಟಾಗಿತ್ತು. ಆದರೆ ಬ್ಯಾಗ್​​ನ್ನು ಪಡೆಯಲು ಇಂಡಿಗೋ ಕೊಟ್ಟ ಸಹಕಾರ ಸೂಕ್ತವಾಗಿರಲಿಲ್ಲ. ನನ್ನ ಬ್ಯಾಗ್​ನಲ್ಲಿ ಅನೇಕ ಮಹತ್ವದ ವಸ್ತುಗಳು ಇದ್ದುದರಿಂದ ಅದನ್ನು ಪಡೆಯಲೇಬೇಕಾಗಿತ್ತು. ಹೀಗಾಗಿ ಇಂಡಿಗೋ ವೆಬ್​ಸೈಟ್​ ಹ್ಯಾಕ್​ ಮಾಡುವ ಮೂಲಕ ಸಹ ಪ್ರಯಾಣಿಕನ ಫೋನ್​​ ನಂಬರ್ ಪಡೆದೆ ಎಂದು ನಂದನ್​ ಹೇಳಿದ್ದಾರೆ.

Leave a Reply

error: Content is protected !!
Scroll to Top
%d bloggers like this: