ಶಿಕ್ಷಣ ಇಲಾಖೆ ಯಿಂದ ‘RTE ಸೀಟು ಹಂಚಿಕೆ’ ಕುರಿತಂತೆ ಪೋಷಕರಿಗೆ ಮಹತ್ವದ ಮಾಹಿತಿ !

2022-23ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆಯಡಿ ಪ್ರಥಮ ಸುತ್ತಿನ ಲಾಟರಿ ಪ್ರಕ್ರಿಯೆಯನ್ನು ದಿನಾಂಕ 04 04-2022ರಂದು ಆಯೋಜಿಸಿರೋದಾಗಿ ಶಿಕ್ಷಣ ಇಲಾಖೆ ತಿಳಿಸಿದೆ.

2022-23ನೇ ಸಾಲಿನಲ್ಲಿ ಉಚಿತ ಮಕ್ಕಳ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ-2009ರ ಅಡಿಯಲ್ಲಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಪ್ರವೇಶ ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ, ಲಾಟರಿ ಮೂಲಕ ಸೀಟು ಹಂಚಿಕೆ ನಡೆಸಲು ಪ್ರಥಮ ಸುತ್ತಿನ ಲಾಟರಿಯನ್ನು ದಿನಾಂಕ 04-04 2022ರಂದು ನಡೆಸಲಾಗುತ್ತದೆ
ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಾಥಮಿಕ ಶಿಕ್ಷಣದ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯ 3 ನೇ ಮಹಡಿಯ ಸಭಾಂಗಣದಲ್ಲಿ ಪ್ರಥಮ ಸುತ್ತಿನ ಸೀಟು ಹಂಚಿಕೆಯ ಲಾಟರಿ ಪ್ರಕ್ರಿಯೆಯು ದಿನಾಂಕ : 04-04-2022 ರಂದು ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

Leave A Reply

Your email address will not be published.