ನಟಿ ನಿತ್ಯಾಮೆನನ್ ಜೊತೆ ಮದುವೆ ಆಗಲ್ಲ : ಕೇರಳದ ಅಭಿಮಾನಿಯ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ !

ಮೋಹನ್ ಲಾಲ್ ಅಭಿಮಾನಿಯೊಬ್ಬ ಮಲಯಾಳಂ ನಟಿ ನಿತ್ಯಾ ಮೆನನ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಕಾಮೆಂಟ್ ಒಂದು ಇದೀಗ ಭಾರೀ ಸದ್ದು ಮಾಡುತ್ತಿದೆ.

ಈ ಅಭಿಮಾನಿಯ ಹೆಸರೇ ಸಂತೋಷ್ ವಾರ್ಕಿ ಎಂದು. ಈತ ನಿತ್ಯಾ ಮೆನನ್ ನಟಿಯನ್ನು ಮನಸಾರೆ ತುಂಬಾ ಇಷ್ಟ ಪಡುತ್ತಿದ್ದಾರೆ. ಹಿಂದೊಮ್ಮೆ ಮದುವೆ ಆಗಲು ಅನುಮತಿ ಕೇಳಲು ಆಕೆಯ ಮನೆ ಕೂಡಾ ಹೋಗಿದ್ದನಂತೆ. ಆದರೆ ಇದೀಗ ನಿತ್ಯಾ ಬಗ್ಗೆ ಸಂತೋಷ್ ಇದ್ದಕ್ಕಿದ್ದ ಹಾಗೆ ಒಂದು ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ.


Ad Widget

Ad Widget

Ad Widget

ಇದುವರೆಗೂ ನಿತ್ಯಾ ಮೆನನ್ ರನ್ನು ಮದುವೆ ಆಗುತ್ತೇನೆ ಎಂಬ ಉತ್ಕಟ ಆಸೆ ಹೊಂದಿದ್ದ ಸಂತೋಷ್ ಇದೀಗ ನಿತ್ಯಾ ವಿರುದ್ಧ ಸಿಟ್ಟು ಮಾಡಿಕೊಂಡಿದ್ದು, ನಾನು ನಿತ್ಯಾ ಮೆನನ್ ಅವರನ್ನು ಮದುವೆ ಆಗುವುದಿಲ್ಲ, ನಿತ್ಯಾ ಅವರೇ ನನ್ನ ಬಳಿ ಬಂದು ಮದುವೆ ಆಗು ಅಂತಾ ಕೇಳಿದರೆ ನಾನು ಮದುವೆ ಆಗದಿರಲು ನಿರ್ಧಾರ ಮಾಡಿದ್ದೇನೆ. ಅವರು ಒಳ್ಳೆಯ ವ್ಯಕ್ತಿಯಾಗಿದ್ದರೆ, ಅವರು ತಮ್ಮ ಮೊಬೈಲ್ ನಂಬರ್ ಅನ್ನು ಕೊಡಬಹುದಿತ್ತು ಎಂದು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಂದಹಾಗೆ ಸಂತೋಷ್ ವಾರ್ಕಿ ಕೇರಳದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಪಡೆದಿರುವ ಚಿರಪರಿಚಿತ ಮುಖ. ಅಷ್ಟು ಮಾತ್ರವಲ್ಲದೇ ಮೋಹನ್‌ಲಾಲ್ ಅಭಿಮಾನಿ ಕೂಡಾ ಆಗಿದ್ದು, ಆಗಾಗ ಅವರು ಸಿನಿಮಾಗಳ ಬಗ್ಗೆ ಕೊಡುವ ವಿಮರ್ಶೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಪ್ರಖ್ಯಾತಿ ತಂದಿದ್ದೂ ಇದೆ.

Leave a Reply

error: Content is protected !!
Scroll to Top
%d bloggers like this: